ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶ್ರೀ ಮಡಿವಾಳ ಮಾಚಿದೇವ ಜಯಂತಿ ಆಚರಣೆ

0

ಸಮಾನತೆಯನ್ನು ಕಾಪಾಡುವಲ್ಲಿ ಶರಣರ ಕಾರ್ಯ ಮಹತ್ವ – ಎ ಸಿ ಗಿರೀಶ್ ನಂದನ್

ಪುತ್ತೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಪುತ್ತೂರು ತಾಲೂಕು ಮಡಿವಾಳ ಸಂಘ ಇದರ ಸಂಯುಕ್ತ ಆಶ್ರಯದಲ್ಲಿ ಫೆ.1 ರಂದು ಶ್ರೀ ಮಡಿವಾಳ ಮಾಚಿದೇವ ಜಯಂತಿ ಆಚರಣೆಯು ತಾಲೂಕು ಆಡಳಿತ ಸೌಧದಲ್ಲಿರು ತಹಸೀಲ್ದಾರ್ ಸಭಾಂಗಣದಲ್ಲಿ ನಡೆಯಿತು.


ಸಹಾಯಕ ಕಮೀಷನರ್ ಗಿರೀಶ್ ನಂದನ್ ಅವರು ಸಂಸ್ಮರಣಾ ಜ್ಯೋತಿ ಬೆಳಗಿಸಿ, ಪುಷ್ಪಾಚರಣೆ ಮಾಡಿ ಮಾತನಾಡಿ ಸರ್ವರಿಗೂ ಸಮಪಾಲು -ಸಮಬಾಳು ಒದಗಿಸಲು ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು. ಶರಣರ ಅಗ್ರಗಣ್ಯ ಬಳಗದಲ್ಲಿ ಮಡಿವಾಳ ಮಾಚಿದೇವರು ಒಬ್ಬರಾಗಿದ್ದು, ಅವರು ಸಮಾನತೆಯನ್ನು ಕಾಪಾಡುವ ಕಾರ್ಯ ಮಾಡಿದರು. ಅವರ ಆದರ್ಶಗಳು ಇವತ್ತಿಗೂ ಎಲ್ಲರಿಗೂ ಉತ್ತಮ ಮಾರ್ಗದರ್ಶನವಾಗಿದೆ ಎಂದರು.

ಸರಕಾರಕ್ಕೆ ಧನ್ಯವಾದಗಳು:

ಮಡಿವಾಳ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಮಡಿವಾಳ ಮಾಚಿದೇವ ಅವರ ಚರಿತ್ರೆಗಳ ಮಾಹಿತಿ ನೀಡಿ ಅವರು ಮಾತನಾಡಿ ಸರಕಾರದ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಧನ್ಯವಾದ ಸಮರ್ಪಣೆ ಮಾಡುತ್ತಿದ್ದೆವೆ ಎಂದರು.

ಸಮಾಜ ಬದುಕಿಗೆ ಜಯಂತಿಗಳು ಮಾರ್ಗದರ್ಶಕ:

ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಅವತ್ತಿನ ಶರಣರು ಅನೇಕ ಕೊಡುಗೆ, ಸಂದೇಶ ನೀಡಿದ್ದಾರೆ. ಇವತ್ತು ಜಯಂತಿಗಳ ಮೂಲಕ ನಾವು ಮತ್ತು ಸಮಾಜ ಹೇಗೆ ಬದುಕಬೇಕೆಂದು ಉತ್ತಮ ಮಾರ್ಗದರ್ಶನವಾಗಿದೆ ಎಂದರು. ಗ್ರೇಡ್ 2 ತಹಸೀಲ್ದಾರ್ ಲೋಕೇಶ್, ಉಪತಹಸೀಲ್ದಾರ್ ರಾಮಣ್ಣ ನಾಯ್ಕ್ ಅತಿಥಿಗಳನ್ನು ಗೌರವಿಸಿದರು. ಕಂದಾಯ ಅಧಿಕಾರಿ ದಯಾನಂದ ಸ್ವಾಗತಿಸಿದರು. ಉಪ ತಹಸೀಲ್ದಾರ್ ಸುಲೋಚನಾ ಕಾರ್ಯಕ್ರಮ ನಿರೂಪಿಸಿದರು. ಶಿಶು ಅಭಿವೃದ್ದಿ ಯೋಜನಾಧಿಕಾರಿ ಶ್ರೀಲತಾ, ಮಡಿವಾಳ ಸಂಘದ ಪ್ರಮುಖರಾದ ಹೆಚ್ ಉದಯ, ನಗರಸಭಾ ಸದಸ್ಯ ಪ್ರೇಮ್ ಕುಮಾರ್, ಚೇತನ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here