ಪುತ್ತೂರು:ಮುಂಡೂರು ಗ್ರಾಮದ ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ಜಾತ್ರೋತ್ಸವವು ಮಾ. 3 ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮವು ಫೆ.6 ರಂದು ಶ್ರೀ ದೇವಳದ ವಠಾರದಲ್ಲಿ ನಡೆಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಅರುಣ್‌ಕುಮಾರ್ ಆಳ್ವ ಬೋಳೋಡಿ ಅಧ್ಯಕ್ಷತೆ ವಹಿಸಿದ್ದರು. ಸುಮಾರು 100 ವರ್ಷದ ಬಳಿಕ ಇಲ್ಲಿ ಜಾತ್ರೋತ್ಸವ ನಡೆಯಲಿದ್ದು , ಜಾತ್ರೋತ್ಸವಕ್ಕೆ ಭರದ ಸಿದ್ದತೆಗಳು ನಡೆಯುತ್ತಿದೆ. ಮುಂಡೂರು ಹಾಗೂ ಕೆದಂಬಾಡಿ ಗ್ರಾಮದ ಪ್ರಮುಖ ದೇವಸ್ಥಾನವಾಗಿರುವ ಆಲಡ್ಕ ಶ್ರೀ ಸದಾಶಿವ ದೇವಸ್ಥಾನ ಅನೇಕ ವರ್ಷಗಳ ಐತಿಹ್ಯವನ್ನು ಹೊಂದಿದ್ದು ಕಾರಣಿಕ ಕ್ಷೇತ್ರವಾಗಿ ಪ್ರಸಿದ್ದಿ ಪಡೆದಿದೆ.
ಕಾರ್ಯಕ್ರಮದಲ್ಲಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಶೀನಪ್ಪ ರೈ ಕೊಡೆಂಕಿರಿ,ಉತ್ಸವ ಸಮಿತಿ ಅಧ್ಯಕ್ಷರಾದ ರಾಘವ ಗೌಡ ಕೆರೆಮೂಲೆ, ಬಾಲಕೃಷ್ಣ ಕಣ್ಣಾರಾಯ, ಸುರೇಶ್ ಕಣ್ಣಾರಾಯ, ಜಯಾನಂದ ರೈ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರುಕ್ಮನಾಯ್ಕ, ರಾಮಚಂಧ್ರ ನೈತಾಡಿ, ದಿನಕರ ರೈ ಮಾಣಿಪ್ಪಾಡಿ, ಹರೀಶ್ ರೈ ಮಿತ್ತೋಡಿ, ಶ್ರೀರಂಗ ಶಾಸ್ತ್ರಿ ಮಣಿಲ, ಮೋಹನ ಆಳ್ವ ಮುಂಡಾಲಗುತ್ತು, ದನಂಜಯ ಕುಲಾಲ್, ಪ್ರಕಾಶ್ ಪುತ್ತೂರಾಯ, ಪದ್ಮಾವತಿ ರೈ ಕೊಡಂಕಿರಿ, ಜಯಲಕ್ಷ್ಮಿ, ಶೋಭಾ, ವಿಧುಕಲಾ ರೈ, ಪುಷ್ಪಲತಾ, ನಳಿನಾಕ್ಷಿ, ಪ್ರಮೋದ್‌ಕುಮಾರ್ ರೈ, ರಾಕೇಶ್ ರೈ ಬೋಳೋಡಿ, ಸದಾಶಿವ ರೈ ಪೊಟ್ಟಮೂಲೆ, ಹರ್ಷಿತ್ ರೈ ಕುಕ್ಕುಂಜೋಡು, ಸರಸ್ವತಿ ಬೋಳೋಡಿ, ಸುಜಾತಾ, ಮಹಾಬಲ ರೈ ಕುಕ್ಕುಂಜೋಡು, ಪ್ರಸಾದ್ ರೈ ಕೊಡಂಕಿರಿ, ಮಾಲತಿ ಬಿ ರೈ ಮತ್ತತರರು ಉಪಸ್ಥಿತರಿದ್ದರು.