ಪುತ್ತೂರು: ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಇನ್ಸ್ಪೈರ್ ಆವಾರ್ಡ್ಗೆ ಕಾವು ಶಾಲೆಯ ವಿದ್ಯಾರ್ಥಿಗಳಾದ ನೇತ್ರಾ ಎಂ.ಪಿ 8ನೇ ತರಗತಿ (ಮುಂಡಕೊಚ್ಚಿ ನಿವಾಸಿ ಎಂ. ಪ್ರಸನ್ನಕುಮಾರ್ ಮತ್ತು ಚಿತ್ರಾ ಎನ್. ದಂಪತಿಯ ಪುತ್ರಿ) ಇವರ ಆಕ್ಸಿಡೆಂಟ್ ಪ್ರಿವೆಂಷನ್, ಐಡೆಂಟಿಫಿಕೇಷನ್ ಆಂಡ್ ಆಲರ್ಟ್ ಸಿಸ್ಟಮ್, ಚಿರಾಯು ರೈ 6ನೇ ತರಗತಿ (ಡೆಂಬಾಳೆ ನಿವಾಸಿ ರವೀಂದ್ರನಾಥ್ ರೈ ಮತ್ತು ಸುಚೇತಾ ಆರ್ ರೈ ದಂಪತಿಯ ಪುತ್ರ) ಇವರ ಹೋಮ್ ಆಟೋಮೇಷನ್ ಯುಸಿಂಗ್ ಐಒಟಿ, ಮತ್ತು ಚಿರಾಗ್ 7ನೇ ತರಗತಿ (ಮಾಣಿಯಡ್ಕ ನಿವಾಸಿ ಚಂದ್ರಶೇಖರ ಮತ್ತು ಮಂಜುಳಾ ಎಂ. ಪಿ. ದಂಪತಿಯ ಪುತ್ರ) ಇವರ ಪ್ಲಾಂಟ್ ವಾಟರಿಂಗ್ ಸಿಸ್ಟಮ್ ಎಂಬ ವಿಜ್ಞಾನ ಮಾದರಿಗಳು ಜಿಲ್ಲಾ ಮಟ್ಟದ ಇನ್ಸ್ಪೈರ್ ಆವಾರ್ಡ್ ಮಾನಕ್ ಸ್ಪರ್ಧೆಗೆ ಆಯ್ಕೆಯಾಗಿವೆ. ಇವರಿಗೆ ಶಾಲಾ ಟಿ.ಜಿ.ಟಿ ಶಿಕ್ಷಕಿ ಪ್ರತಿಮಾ ಎಸ್. ಮಾರ್ಗದರ್ಶನ ನೀಡಿರುತ್ತಾರೆ ಎಂದು ಶಾಲಾ ಪ್ರಕಣೆ ತಿಳಿಸಿದೆ.