ಪುತ್ತೂರು: ಅಡಿಕೆ ಹಾನಿಕರವಲ್ಲ, ಔಷಧೀಯ ಗುಣವಿರುವ ಸಾಂಪ್ರದಾಯಿಕ ಬೆಳೆ ಎಂದು ಎಂ.ಎಸ್. ರಾಮಯ್ಯ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳು ಸಂಶೋಧನಾ ವರದಿ ನೀಡಿದ್ದಾರೆ.
ವರದಿಯನ್ನು ಶೀಘ್ರವೇ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗುವುದು ಎಂದು ಅಡಿಕೆ ಕಾರ್ಯಪಡೆ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳವಾರ ವಿಧಾನ ಪರಿಷತ್‌ಗೆ ಮಾಹಿತಿ ನೀಡಿದರು.
ಪ್ರತಾಪ್‌ಸಿಂಹ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದಿನ ಕೇಂದ್ರ ಸರ್ಕಾರ, ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದರಿಂದ ಅಡಿಕೆ ಬೆಳೆ ಮೇಲೆ ನಿಷೇಧದ ತೂಗುಗತ್ತಿ ಇತ್ತು. ಅದಕ್ಕಾಗಿ ಅಡಿಕೆ ಕಾರ್ಯಪಡೆಯಿಂದಲೇ ವೈಜ್ಞಾನಿಕ ಸಂಶೋಧನೆ ನಡೆಸಲು ರಾಮಯ್ಯ ಇನ್‌ಸ್ಟಿಟ್ಯೂಟ್‌ಗೆ ವಹಿಸಲಾಗಿತ್ತು. ಈಗ ವರದಿ ಬಂದಿದೆ ಎಂದರು. ಅಡಿಕೆ ಕ್ಷೇತ್ರ ವ್ಯಾಪ್ತಿ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ 6.11 ಲಕ್ಷ ಹೆಕ್ಟೇರ್ ಬೆಳೆ ಕ್ಷೇತ್ರವಿದೆ. ಅಡಿಕೆ ಭವಿಷ್ಯ ಗುಟ್ಕಾ ಕಂಪನಿಗಳ ಮೇಲೆ ನಿಂತಿದೆ. ದರ ಕುಸಿದರೆ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಾರೆ. ಹಾಗಾಗಿ ಏಕ ಬೆಳೆ ಪದ್ಧತಿ ಸರಿಯಲ್ಲ ಎಂದು ಮನವರಿಕೆ ಮಾಡಿಕೊಡಬೇಕಿದೆ. ಉದ್ಯೋಗ ಖಾತ್ರಿಯಲ್ಲಿ ಅಡಿಕೆ ಬೆಳೆಗೆ ಸಹಾಯಧನ, ಪ್ರೋತ್ಸಾಹ ಬೇಡ ಎಂದು ತೋಟಗಾರಿಕಾ ಸಚಿವರನ್ನು ಕೋರಲಾಗಿದೆ ಎಂದರು.
ವಿಧಾನ ಪರಿಷತ್‌ನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ
ಪುತ್ತೂರು: ಅಡಿಕೆ ಹಾನಿಕರವಲ್ಲ,ಔಷಧೀಯ ಗುಣವಿರುವ ಸಾಂಪ್ರದಾಯಿಕ ಬೆಳೆ ಎಂದು ಎಂ.ಎಸ್.ರಾಮಯ್ಯ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳು ಸಂಶೋಧನಾ ವರದಿ ನೀಡಿದ್ದಾರೆ.
ವರದಿಯನ್ನು ಶೀಘ್ರವೇ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗುವುದು ಎಂದು ಅಡಿಕೆ ಕಾರ್ಯಪಡೆ ಅಧ್ಯಕ್ಷರೂ ಆಗಿರುವ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳವಾರ ವಿಧಾನ ಪರಿಷತ್‌ನಲ್ಲಿ ಮಾಹಿತಿ ನೀಡಿದರು.
ವಿಧಾನಪರಿಷತ್ ಶಾಸಕ ಪ್ರತಾಪ್‌ಸಿಂಹ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಹಿಂದಿನ ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದರಿಂದ ಅಡಿಕೆ ಬೆಳೆ ಮೇಲೆ ನಿಷೇಧದ ತೂಗುಗತ್ತಿ ಇತ್ತು.ಅದಕ್ಕಾಗಿ ಈ ಕುರಿತು ವೈಜ್ಞಾನಿಕ ಸಂಶೋಧನೆ ನಡೆಸಿ ವರದಿ ಸಲ್ಲಿಸಲು ಅಡಿಕೆ ಕಾರ್ಯಪಡೆಯಿಂದಲೇ ರಾಮಯ್ಯ ಇನ್‌ಸ್ಟಿಟ್ಯೂಟ್‌ಗೆ ಜವಾಬ್ದಾರಿ ವಹಿಸಲಾಗಿತ್ತು.ಈಗ ವರದಿ ಬಂದಿದೆ ಎಂದರು.ಅಡಿಕೆ ಬೆಳೆ ವಿಸ್ತರಣೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ.ಈಗಾಗಲೇ ರಾಜ್ಯದಲ್ಲಿ ೬.೧೧ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ.ಅಡಿಕೆ ಭವಿಷ್ಯ ಗುಟ್ಕಾ ಕಂಪೆನಿಗಳ ಮೇಲೆ ನಿಂತಿದೆ.ದರ ಕುಸಿದರೆ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಾರೆ.ಹಾಗಾಗಿ, ಏಕ ಬೆಳೆ ಪದ್ಧತಿ ಸರಿಯಲ್ಲ ಎಂದು ಮನವರಿಕೆ ಮಾಡಿಕೊಡಬೇಕಿದೆ.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಡಿಕೆ ಬೆಳೆಗೆ ಸಹಾಯಧನ, ಪ್ರೋತ್ಸಾಹ ಬೇಡ ಎಂದು ತೋಟಗಾರಿಕಾ ಸಚಿವರನ್ನು ಕೋರಲಾಗಿದೆ ಎಂದರು.ಅಡಿಕೆ ಕೃಷಿ ಅಪಾರ ಪ್ರಮಾಣದಲ್ಲಿ ವಿಸ್ತರಣೆಯಾಗಿರುವುದರಿಂದ ಇಂದಲ್ಲ ನಾಳೆ ಅಡಿಕೆ ಧಾರಣೆ ಕುಸಿಯುವ ಸಾಧ್ಯತೆ ಇರುವ ಕುರಿತು ಈಗಾಗಲೇ ಬೆಳೆಗಾರರು ಆತಂಕದಲ್ಲಿದ್ದಾರೆ.ಈ ನಡುವೆ ಇದೀಗ ಅಡಿಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎನ್ನುವ ವೈಜ್ಞಾನಿಕ ವರದಿ ಬಂದಿರುವುದು ಕೃಷಿಕರಲ್ಲಿ ಸಂತಸ ಮೂಡಿದೆ.
ಕನಿಷ್ಟ ಆಮದು ದರ ಹೆಚ್ಚಿಸಿರುವ ಕೇಂದ್ರ ಅಡಿಕೆ ಮೇಲಿನ ಕನಿಷ್ಟ ಆಮದು ದರವನ್ನು ಈಗಾಗಲೇ ಕಿಲೋಗೆ 100ರೂ.ಹೆಚ್ಚಳಗೊಳಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.ಇಲ್ಲಿಯವರೆಗೆ ಅಡಿಕೆ ಮೇಲಿನ ಕನಿಷ್ಟ ಆಮದು ದರ ಕಿಲೋಗೆ ರೂ.251 ಆಗಿದ್ದನ್ನು ಇದೀಗ ರೂ.351ಕ್ಕೆ ಹೆಚ್ಚಳಗೊಳಿಸಿದೆ.ಇದು ಬೆಲೆ ಏರಿಕೆ ಸಾಧ್ಯತೆ ಕುರಿತು ಅಡಿಕೆ ಬೆಳೆಗಾರರು ಆಶಾ ಭಾವನೆ ಹೊಂದಿದ್ದಾರೆ.