ಬೆಳ್ಳಿಪ್ಪಾಡಿ ಸಕಲೇಶ್ವರ ಪಂಚಲಿಂಗೇಶ್ವರ ಮಹಾದೇವ ದೇವಸ್ಥಾನದಲ್ಲಿ ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕಾರ್ಯ: ಬ್ರಹ್ಮಕಲಶಕ್ಕೆ ಸಿದ್ಧತೆ

0

ಪುತ್ತೂರು: ಬೆಳ್ಳಿಪ್ಪಾಡಿ ಶ್ರೀ ಸಕಲೇಶ್ವರ ಪಂಚಲಿಂಗೇಶ್ವರ ಮಹಾದೇವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ನಡೆಯುತ್ತಿದ್ದು ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ ನಡೆಯುತ್ತಿದೆ. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿರುವ ಮಾಜಿ ಸಚಿವ ಬಿ. ರಮಾನಾಥ ರೈ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿರುವ ಜಯಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಥಾಪಕ ಅಧ್ಯಕ್ಷ ಬಿ. ಗುಣರಂಜನ್ ಶೆಟ್ಟಿ ನೇತೃತ್ವದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಸೀಮಾ ದೇವಸ್ಥಾನವಾಗಿತ್ತು: ಪುತ್ತೂರಿನಿಂದ ಉಪ್ಪಿನಂಗಡಿಗೆ ತೆರಳುವ ರಸ್ತೆಯಲ್ಲಿ ಸುಮಾರು 8 ಕಿಲೋ ಮೀಟರ್ ದೂರದಲ್ಲಿರುವ ಇತಿಹಾಸ ಪ್ರಸಿದ್ಧ ಬೆಳ್ಳಿಪ್ಪಾಡಿಯಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಮತ್ತು ಶ್ರೀ ಸಕಲೇಶ್ವರ ದೇವಸ್ಥಾನಗಳಿದೆ. ಇತರ ಧರ್ಮದೈವಗಳ ಸ್ಥಾನವೂ ಇಲ್ಲಿದೆ. ಇತ್ತೀಚೆಗೆ ಊರ, ಪರವೂರಿನ ಭಕ್ತರು ಮತ್ತು ಬೆಳ್ಳಿಪ್ಪಾಡಿ ಮನೆತನದವರು ಸೇರಿ ಅತ್ಯಂತ ಶಿಥಿಲಾವಸ್ಥೆಯಲ್ಲಿದ್ದ ಹಾಗೂ ಸಂಪೂರ್ಣ ಅಜೀರ್ಣವಾಗಿರುವ ಶ್ರೀ ಸಕಲೇಶ್ವರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜ್ಯೋತಿಷ್ಯ ವಿದ್ವಾಂಸರ ಮೂಲಕ ಅಷ್ಟಮಂಗಲ ಮತ್ತು ಸ್ವರ್ಣಪ್ರಶ್ನೆ ಇಟ್ಟು ಸುಧೀರ್ಘವಾಗಿ ಚಿಂತನೆ ನಡೆಸಲಾಗಿದೆ. ಇದರಲ್ಲಿ ಕಂಡು ಬಂದ ಪ್ರಕಾರ ದೇವಸ್ಥಾನವು ಅತೀ ಪುರಾತನ ಕಾಲದಿಂದಲೂ ಮಹಿಮಾತಿಶಯ ಪ್ರಭಾವಿಗಳಿಂದ, ಋಷಿಮುನಿಗಳಿಂದ ಆರಾಧಿಸಲ್ಪಟ್ಟದ್ದಾಗಿದೆ. ಶ್ರೀ ಸಕಲೇಶ್ವರ ಪಂಚಲಿಂಗೇಶ್ವರ ದೇವರ ಸಾನಿಧ್ಯ ಇಲ್ಲಿದೆ. ಶ್ರೀ ಮಹಾಮೃತ್ಯುಂಜಯ ಪಂಚಲಿಂಗೇಶ್ವರ ಸ್ವರೂಪಿಯಾದ ಈಶ್ವರನೇ ಇಲ್ಲಿನ ದೇವರಾಗಿದ್ದಾರೆ. ಪೂರ್ವದಲ್ಲಿ ಈ ದೇವಸ್ಥಾನ 8 ಗ್ರಾಮಗಳಿಗೆ ಸಂಬಂಧಿಸಿದ ಗ್ರಾಮ ದೇವಸ್ಥಾನ ಮತ್ತು ಸೀಮಾ ದೇವಸ್ಥಾನ ಆಗಿತ್ತು. ಹಿಂದೆ ಇಲ್ಲಿ ಉತ್ಸವಾದಿ ಜಾತ್ರೆಗಳು ವಿಜ್ರಂಭಣೆಯಿಂದ ನಡೆಯುತ್ತಿದ್ದು ಶ್ರೀ ದೇವರ ಆರಾಧನೆಯೂ ಇಲ್ಲಿ ನಿರಂತರವಾಗಿ ನಡೆಯುತ್ತಿತ್ತು. ಕಾರಣಾಂತರಗಳಿಂದ ಕ್ರಮೇಣ ಜಾತ್ರೆ, ಉತ್ಸವ ಇತ್ಯಾದಿಗಳು ಸ್ಥಗಿತಗೊಂಡಿದೆ ಎಂದು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದೆ. ಪ್ರಸ್ತುತ ನಿತ್ಯಪೂಜೆ ಮಾತ್ರ ದೇವಳದಲ್ಲಿ ಜರಗುತ್ತಿದೆ.

ದೋಷಗಳ ಪರಿಹಾರ ಕಾರ್ಯ ಪೂರ್ಣ: ಪ್ರಶ್ನಾಚಿಂತನೆಯಲ್ಲಿ ಕಂಡ ಬಂದ ಪ್ರಕಾರ ಶ್ರೀ ಸಕಲೇಶ್ವರ ದೇವರ ಸಾನಿಧ್ಯವು ಇಂದಿಗೂ ಅತ್ಯಂತ ಜೀವ ಚೈತನ್ಯ ರೂಪದಲ್ಲಿದೆ. ಭಕ್ತಜನರ ಸರ್ವ ಕಾಮನೆಗಳನ್ನು ಈಡೇರಿಸುವ ದೇವರು ಇದಾಗಿದ್ದು ವಿವಾಹ ಸಿದ್ಧಿ, ಸಂತಾನ ಸಿದ್ಧಿ ಮೊದಲಾದ ಸರ್ವ ಕಾಮನೆಗಳನ್ನು ಪ್ರಾರ್ಥಿಸಬಹುದಾಗಿದೆ ಎಂದು ಪ್ರಶ್ನೆಯಲ್ಲಿ ಕಂಡು ಬಂದಿದೆ. ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದ ದೋಷಗಳ ಪರಿಹಾರ ಕಾರ್ಯಕ್ರಮ ಈಗಾಗಲೇ ಪೂರ್ಣಗೊಂಡಿದ್ದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ದೇವರಿಗೆ ಅನುಜ್ಞಾ ಕಲಶ, ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮ 28-03-2022ರಿಂದ 30-03-2022ರ ತನಕ ಸಂಪನ್ನಗೊಂಡಿದೆ. ಶ್ರೀ ದೇವಸ್ಥಾನದ ಅಭಿವೃದ್ಧಿಯ ಅಂಗವಾಗಿ ಈಗಾಗಲೇ ಗರ್ಭಗುಡಿಗೆ ಸಂಬಂಧಪಟ್ಟ ಮರದ ಕೆಲಸ, ನಮಸ್ಕಾರ ಮಂಟಪ ನಿರ್ಮಾಣ, ನೂತನ ಗಣಪತಿ ಗುಡಿಯ ನಿರ್ಮಾಣ, ಸುತ್ತುಪೌಳಿಯ ನಿರ್ಮಾಣ ಹಾಗೂ ಅರ್ಚಕರ ಮನೆ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದೆ. ಈ ಎಲ್ಲಾ ಕಾರ್ಯಗಳಿಗೆ ರೂಪಾಯಿ 90 ಲಕ್ಷಕ್ಕಿಂತ ಹೆಚ್ಚು ತಗಲಬಹುದೆಂದು ಅಂದಾಜಿಸಲಾಗಿದ್ದು ಈಗಾಗಲೇ ವಿಜ್ಞಾಪನ ಪತ್ರ ಬಿಡುಗಡೆಗೊಳಿಸಲಾಗಿದೆ. ಅತ್ಯಂತ ಶೀಘ್ರದಲ್ಲಿ ಶ್ರೀ ದೇವಸ್ಥಾನದ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡು ಬ್ರಹ್ಮಕಲಶೋತ್ಸವ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ.

ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಮಿತಿ ರಚನೆ: ಶ್ರೀ ದೇವಳದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಿಗಾಗಿ ಸಮಿತಿ ರಚಿಸಲಾಗಿದೆ. ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿ ಶ್ರೀಮತಿ ಆರ್. ಆಳ್ವ, ಬಿ. ವಿಶ್ವನಾಥ ರೈ ಮತ್ತು ಬಿ. ಪ್ರಫುಲ್ಲ ಡಿ. ಶೆಟ್ಟಿಯವರನ್ನು ಆಯ್ಕೆ ಮಾಡಲಾಗಿದ್ದು ಅಧ್ಯಕ್ಷರಾಗಿ ಬಿ. ರಮಾನಾಥ ರೈ, ಕಾರ್ಯಾಧ್ಯಕ್ಷರಾಗಿ ಬೆಳ್ಳಿಪ್ಪಾಡಿ ಕೌಶಲ್ ಶೆಟ್ಟಿ, ಕೋಶಾಧಿಕಾರಿಯಾಗಿ ಶ್ರೀಕಾಂತ್ ಕೈಪ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ನರೇಂದ್ರ ರೈ ನೆಲ್ತೊಟ್ಟು, ಅಧ್ಯಕ್ಷರಾಗಿ ಬಿ. ಗುಣರಂಜನ್ ಶೆಟ್ಟಿ, ಕಾರ್ಯಾಧ್ಯಕ್ಷರಾಗಿ ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಮೋನಪ್ಪ ಗೌಡ ಪಮ್ಮನಮಜಲು, ಕೋಶಾಧಿಕಾರಿಯಾಗಿ ಚಂದ್ರ ಶೆಟ್ಟಿಗಾರ್ ಅಲಂಗೋಡಿಯವರನ್ನು ಆಯ್ಕೆ ಮಾಡಲಾಗಿದೆ.

ಗೌರವ ಸಲಹೆಗಾರರಾಗಿ ಸೀತಾರಾಮ ಐತಾಳ್ ಕೊತ್ತಳಿಂಗೆ, ಚಂದ್ರಶೇಖರ ಐತಾಳ್ ಗುಡ್ಡೆಮನೆ, ಪದ್ಮನಾಭ ಆಳ್ವ ಗುತ್ತಿಮಾರು, ಕೇಶವ ಭಂಡಾರಿ ಕೈಪ, ಲಿಂಗಪ್ಪ ಶೆಟ್ಟಿ ಎಡಪುಣಿ, ಉಲ್ಲಾಸ್ ಕೋಟ್ಯಾನ್, ಸಾಂತಪ್ಪ ಗೌಡ ಪಾಲೆತ್ತಡಿ, ಮೋನಪ್ಪ ಪೂಜಾರಿ ಜೇಡರಪಾಲು, ಪೆರ್ನು ಗೌಡ ಕೂಟೇಲು, ಎಂ. ಎನ್. ಪ್ರಭಾಕರ್, ಗ್ರಾಮದ 12 ಮನೆಯವರ ಪ್ರತಿನಿಧಿಗಳಾಗಿ ಗುತ್ತಿನಮನೆ ನಾರಾಯಣ ಶೆಟ್ಟಿ, ರೆಂಜಾಜೆ ಪದ್ಮನಾಭ ಶೆಟ್ಟಿ, ಕಲ್ಲಡ್ಕ ಶ್ರೀಧರ ಆಳ್ವ, ಆಲಿಂಜ ಸುರೇಂದ್ರ ಗೌಡ, ಮಳುವೇಳು ಲಕ್ಷ್ಮಣ ಗೌಡ, ದೇವಸ್ಯ ವೆಂಕಪ್ಪ ಗೌಡ, ಕೂಟೇಲು ತಿಮ್ಮಪ್ಪ ಗೌಡ, ಕೋರ‍್ಯ ತುಕ್ರಪ್ಪ ಪೂಜಾರಿ, ಬಾರ್ಪಾದೆ ಸುಂದರ ಸಾಲಿಯಾನ್, ಅರಸಪಾಲು ರಾಮಪ್ಪ ಪೂಜಾರಿ, ಕೋರ್ತಾಜೆ ಮೋನಪ್ಪ ಪೂಜಾರಿ, ಉಪಾಧ್ಯಕ್ಷರುಗಳಾಗಿ ಲೋಕಪ್ಪ ಗೌಡ ಎಣ್ಣೆತ್ತೋಡಿ, ಶ್ರೀನಿವಾಸ ಶೆಟ್ಟಿ ಕಠಾರ, ದಿವಾಕರ ಶೆಟ್ಟಿ ಕಾರ್ನೋಜಿ, ಸುಬ್ರಹ್ಮಣ್ಯ ಶೆಟ್ಟಿ ರೆಂಜಾಜೆಗುತ್ತು, ನಿವೃತ್ತ ಎಎಸ್‌ಐ ವಿಶ್ವನಾಥ ರೈ ಶಾಂತಿನಗರ, ಎಎಸ್‌ಐ ರಾಮಚಂದ್ರ ಗೌಡ ಶಾಂತಿನಗರ, ಪದ್ಮನಾಭ ಪಕ್ಕಳ, ಕಾರ್ಯದರ್ಶಿಗಳಾಗಿ ಮನೋಹರ ಡಿ.ವಿ., ಲಕ್ಷ್ಮಣ ಗೌಡ ಕಂಬ್ಲದಡ್ಡ, ಮೋಹನ ಪಕ್ಕಳ, ಚಂದನ್ ತೆಂಕಪಾಡಿ, ರಾಮಣ್ಣ ಗೌಡ ಗುಂಡೋಳೆ, ವಸಂತ ಪೂಜಾರಿ ಕುಂಡಾಪು, ವಸಂತ ಗೌಡ ಪೋಳ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ. ಪೋಳ್ಯ ಎಡೆಪುಣಿ, ಪಮ್ಮನಮಜಲು, ಪಾಲೆತ್ತಡಿ, ಎಣ್ಣೆತ್ತೋಡಿ, ಜೇಡರಪಾಲು, ಸುರುಳಿಮಜಲು, ಬರೆಮೇಲು, ಅಲಂಗೋಡಿ, ಕಾರ್ನೋಜಿ ಇವುಗಳು ದೇವಸ್ಥಾನಕ್ಕೆ ಸಂಬಂಧಪಟ್ಟ ಮನೆಗಳು ಆಗಿವೆ.

LEAVE A REPLY

Please enter your comment!
Please enter your name here