ಪುತ್ತೂರು: ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಮತ್ತು ಪುತ್ತೂರು ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನ ಇದರ ಜಂಟಿ ಆಶ್ರಯದಲ್ಲಿ ಫೆ.14 ರಂದು ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರ ಅಧಿಕೃತ ಭೇಟಿ ಸಂದರ್ಭದಲ್ಲಿ ಪ್ರಪ್ರಥಮ ಬಾರಿಗೆ ಒಂದೇ ಸೂರಿನಡಿಯಲ್ಲಿ ವಿವಿಧ ವೈದ್ಯಕೀಯ ಸೌಲಭ್ಯಗಳ ಮತ್ತು ಸೇವಾ ಯೋಜನೆಗಳ ‘ರೋಟರಿ ಪುತ್ತೂರು ಸೇವಾ ಉತ್ಸವ್’ ಶ್ರೀ ಲಕ್ಷ್ಮೀ ವೆಂಕಟ್ರಣ ದೇವಸ್ಥಾನದ ಸುಕೃತೀಂದ್ರ ಕಲಾ ಮಂದಿರದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಲಿದೆ.
ಉಚಿತ ವೈದ್ಯಕೀಯ ಸೌಲಭ್ಯಗಳಾದ ಕಣ್ಣಿನ ತಪಾಸಣೆ ಹಾಗೂ ಸಲಹೆ, ದಂತ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆ, ರಕ್ತದೊತ್ತಡ, ಮಧುಮೇಹ ತಪಾಸಣೆ, ಥೈರಾಯಿಡ್ ಹಾರ್ಮೋನ್ ತಪಾಸಣೆ, ಎಲುಬು ಸಾಂದ್ರತೆ ತಪಾಸಣೆ ಹಾಗೂ ಸೇವಾ ಯೋಜನೆಗಳಾದ ಉಚಿತ ಗಾಲಿ ಕುರ್ಚಿಗಳ ಹಸ್ತಾಂತರ, ಉಚಿತ ಕೃತಕ ಕಾಲುಗಳ ಹಸ್ತಾಂತರ, ಕ್ಷಯ ರೋಗಿಗಳಿಗೆ ಪೌಷ್ಟಿಕಾಂಶ ಆಹಾರ ವಿತರಣೆ, ಪರ್ಲಡ್ಕ ಪ್ರಾಥಮಿಕ ಶಾಲೆಗೆ ಬೆಂಚುಗಳ ವಿತರಣೆ ಜರಗಲಿದೆ.
ಫಲಾನುಭವಿಗಳು ಈ ಶಿಬಿರದಲ್ಲಿ ಹಾಜರಿದ್ದು ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಉಮಾನಾಥ್ ಪಿ.ಬಿ, ಕಾರ್ಯದರ್ಶಿ ಡಾ.ಶ್ರೀಪ್ರಕಾಶ್ ಬಿ, ಸಮುದಾಯ ಸೇವಾ ವಿಭಾಗದ ನಿರ್ದೇಶಕ ಝೇವಿಯರ್ ಡಿ’ಸೋಜರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.