ಉಪ್ಪಿನಂಗಡಿ : ಇ-ಸಿಗರೇಟು ಮಾರಾಟ -ಮೊಬೈಲ್ ಅಂಗಡಿಗೆ ಪೊಲೀಸ್ ದಾಳಿ

0

ಉಪ್ಪಿನಂಗಡಿ: ಇ- ಸಿಗರೇಟ್ ಮಾರಾಟ ಮಾಡುತ್ತಿದ್ದ ಮೊಬೈಲ್ ಅಂಗಡಿಯೊಂದಕ್ಕೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿದ ಶನಿವಾರ ರಾತ್ರಿ ನಡೆದಿದೆ.


ಇಲ್ಲಿನ ಪೃಥ್ವಿ ಕಾಂಪ್ಲೆಕ್ಸ್‌ನ ಹಿಂಬದಿಯ ಒಳಸಂದಿನಲ್ಲಿರುವ ಮೊಬೈಲ್ ಅಂಗಡಿಯೊಂದರಲ್ಲಿ ಇ- ಸಿಗರೇಟ್ ಮಾರಲಾಗುತ್ತಿದ್ದ ಮಾಹಿತಿ ಪಡೆದ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್. ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ರಾಜೇಶ್ ಕೆ.ವಿ. ಅವರ ತಂಡ ಮೊಬೈಲ್ ಅಂಗಡಿಯಿಂದ ಇ- ಸಿಗರೇಟ್ ಗೆ ಬಳಸಲಾಗುವ ಅಮಲು ಪದಾರ್ಥ, ಸ್ಮೋಕ್ ಮಾಡಲು ಬೇಕಾದ ಟ್ಯೂಬ್ ಗಳನ್ನು ವಶಕ್ಕೆ ತೆಗೆದುಕೊಂಡಿದೆ. ಯುವ ಜನತೆಯನ್ನು ಆಕರ್ಷಿಸುವ ಇ- ಸಿಗರೇಟ್ ಮಾರಾಟ ಕಾನೂನು ಬಾಹಿರವಾಗಿದ್ದು, ಇದು ರಾಜ್ಯದಲ್ಲೇ ಅಪರೂಪದ ಪ್ರಕರಣವಾಗಿದೆ. ಪೊಲೀಸ್ ತನಿಖೆ ಪ್ರಗತಿಯಲ್ಲಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.

LEAVE A REPLY

Please enter your comment!
Please enter your name here