ಕಂಬಳಕ್ಕೆ ನಾಡ ಕ್ರೀಡೆಯ ಸ್ಥಾನಮಾನಕ್ಕೆ ಸರಕಾರದ ಚಿಂತನೆ:ಸಚಿವ ಕೋಟ ಶ್ರೀನಿವಾಸ ಪೂಜಾರಿರವರಿಂದ ಅಧಿವೇಶನದಲ್ಲಿ ಭರವಸೆ

0

ಬೆಂಗಳೂರು: ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆಯಾಗಿರುವ ಕಂಬಳಕ್ಕೆ ನಾಡ ಕ್ರೀಡೆಯ ಸ್ಥಾನಮಾನವನ್ನು ನೀಡುವ ಕುರಿತು ಸರಕಾರ ಚಿಂತಿಸುತ್ತಿದೆ. ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ಕಂಬಳಕ್ಕೆ ಸೂಕ್ತ ಸ್ಥಾನಮಾನ ಒದಗಿಸುವ ಕುರಿತು ಚಿಂತಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿಧಾನ ಮಂಡಲ ಅಧಿವೇಶನದಲ್ಲಿ ತಿಳಿಸಿದ್ದಾರೆ.

ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರು, ಕಂಬಳ ಕರಾವಳಿ ಭಾಗದ ಪ್ರಸಿದ್ಧ ಜಾನಪದ ಕ್ರೀಡೆಯಾಗಿದೆ. ದೈವಾರಾಧನೆಯೊಂದಿಗೆ ಕಂಬಳವನ್ನು ಆರಾದಿಸುವ ಪರಂಪರೆ ಇದೆ. ಬರೀ ಕ್ರೀಡೆಯಲ್ಲದೆ ಧಾರ್ಮಿಕ ಮಹತ್ವವೂ ಕಂಬಳಕ್ಕೆ ಇದೆ. ಕೃಷಿ ಬದುಕಿನ ಅಂಗವಾಗಿರುವ ಕಂಬಳವನ್ನು ಜನರು ಶ್ರದ್ಧೆ, ಭಕ್ತಿಯಿಂದ ಸೇವೆ ರೂಪದಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ಇದಕ್ಕೆ ಸೂಕ್ತ ಸೌಲಭ್ಯ ಮತ್ತು ಸ್ಥಾನಮಾನ ಸಿಗಬೇಕೆಂದು ಒತ್ತಾಯಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕರ್ನಾಟಕ ಕ್ರೀಡಾರತ್ನ, ಕ್ರೀಡಾ ಪೋಷಕ ಪ್ರಶಸ್ತಿಗಳನ್ನು ನೀಡುವ ಮೂಲಕ ಸರಕಾರ ಕಂಬಳವನ್ನು ಪ್ರೋತ್ಸಾಹಿಸುತ್ತಿದೆ. ಕಂಬಳಕ್ಕಾಗಿ ಕ್ರೀಡಾಂಗಣ ನಿರ್ಮಿಸುವ ಯೋಜನೆಗಳನ್ನು ಕೈಗೊಂಡಿದೆ. ಇನ್ನೀಗ ಕಂಬಳವನ್ನು ರಾಜ್ಯಮಟ್ಟದ ಕ್ರೀಡೆಯಾಗಿ ಪರಿಗಣಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here