ಶೇಕಡಾವಾರು ಮತ ಚಲಾವಣೆ
ಆರ್ಯಾಪು -76.69
ಕುಟ್ರುಪ್ಪಾಡಿ-71.05
ಅನಂತಾಡಿ-79.74
ನೆಟ್ಲಮುಡ್ನೂರು-73.3
ಪುತ್ತೂರು:ಪುತ್ತೂರು ತಾಲೂಕಿನ ಆರ್ಯಾಪು,ಕಡಬ ತಾಲೂಕಿನ ಕುಟ್ರುಪ್ಪಾಡಿ ಹಾಗೂ ಬಂಟ್ವಾಳ ತಾಲೂಕಿನ ಅನಂತಾಡಿ, ನೆಟ್ಲಮುಡ್ನೂರು ಗ್ರಾ.ಪಂಗಳಲ್ಲಿ ತೆರವಾಗಿರುವ ತಲಾ ಒಂದು ಸ್ಥಾನಗಳಿಗೆ ಫೆ.25ರಂದು ಉಪ ಚುನಾವಣೆಯು ಶಾಂತಿಯುತವಾಗಿ ಮುಕ್ತಾಯಗೊಂಡಿದೆ.ಆರ್ಯಾಪು ಶೇ.76.69, ಕುಟ್ರುಪ್ಪಾಡಿ ಶೇ.71.05, ಅನಂತಾಡಿ ಶೇ.79.74 ಹಾಗೂ ನೆಟ್ಲಮುಡ್ನೂರು ಗ್ರಾ.ಪಂನಲ್ಲಿ ಶೇ.73.3 ಮತದಾನವಾಗಿದೆ.
ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆಗಳು ಪ್ರಾರಂಭಗೊಂಡಿದ್ದು ಸಂಜೆ 5 ಗಂಟೆಯ ತನಕ ನಡೆಯಿತು.ಆರ್ಯಾಪು ಗ್ರಾ.ಪಂನ ವಾರ್ಡ್ 4ಕ್ಕೆ ಹಂಟ್ಯಾರ್ ಹಿ.ಪ್ರಾ ಶಾಲೆಯಲ್ಲಿ, ಕುಟ್ರುಪ್ಪಾಡಿಯ ವಾರ್ಡ್ 1ಕ್ಕೆ ಬಲ್ಯ ಹಿ.ಪ್ರಾ ಶಾಲೆಯಲ್ಲಿ, ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾ.ಪಂನ ವಾರ್ಡ್ 2ರ ತೆರವಾದ ಸ್ಥಾನಕ್ಕೆ ಬಾಬನಕಟ್ಟೆ ಹಿ.ಪ್ರಾ ಶಾಲೆಯಲ್ಲಿ ಹಾಗೂ ನೆಟ್ಲಮುಡ್ನೂರು ಗ್ರಾ.ಪಂನ ವಾರ್ಡ್ 2ರ ತೆರವಾದ ಸ್ಥಾನಕ್ಕೆ ನೇರಳಕಟ್ಟೆ ಹಿ.ಪ್ರಾ ಶಾಲೆಯಲ್ಲಿ ಮತದಾನ ನಡೆಯಿತು.
ಆರ್ಯಾಪು ವಾರ್ಡ್ 4ರಲ್ಲಿ 836, ಅನಂತಾಡಿಯ ವಾರ್ಡ್ 2ರಲ್ಲಿ 500, ನೆಟ್ಲಮುಡ್ನೂರು ವಾರ್ಡ್ 2ರಲ್ಲಿ 596 ಹಾಗೂ ಕುಟ್ರುಪ್ಪಾಡಿ ವಾರ್ಡ್ 1ರಲ್ಲಿ 750 ಮಂದಿ ಮತದಾರರು ಮತ ಚಲಾಯಿಸಿದ್ದಾರೆ.ಮತ ಎಣಿಕೆಯು ಫೆ.28ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ನಡೆದು ಫಲಿತಾಂಶ ಘೋಷಣೆಯಾಗಲಿದೆ.
ನಾಲ್ಕು ಗ್ರಾ.ಪಂಗಳಲ್ಲಿ ತಲಾ ಒಂದು ಸ್ಥಾನ ಸೇರಿ ಒಟ್ಟು 4 ಸ್ಥಾನಗಳಿಗೆ 9 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದು ಚುನಾವಣೆ ಎದುರಿಸಿದ್ದಾರೆ.ಆರ್ಯಾಪು ಗ್ರಾ.ಪಂನಲ್ಲಿ ಆರ್ಯಾಪು ವಾರ್ಡ್ 1ರ ಸಾಮಾನ್ಯ ಮೀಸಲು ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಯತೀಶ್ ಡಿ.ಬಿ ಸಂಟ್ಯಾರ್ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಪ್ರಜ್ವಲ್ ರೈ ತೊಟ್ಲ ಕಣದಲ್ಲಿದ್ದಾರೆ.ಕಡಬದ ಕುಟ್ರುಪ್ಪಾಡಿಯ ಬಲ್ಯ ವಾರ್ಡ್ 1ರ ಹಿಂದುಳಿದ ವರ್ಗ ಎ’ಗೆ ಮೀಸಲಾದ 1 ಸ್ಥಾನಕ್ಕೆಮೂರು ಮಂದಿ ಕಣದಲ್ಲಿದ್ದು ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕರುಣಾಕರ ಸಾಲ್ಯಾನ್ ಮತ್ರಾಡಿ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸುದೇಶ್ ಬೀರುಕ್ಕು ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಸುಧಾಕರ ಬಿ. ಬಾರಿಕೆ ಕಣದಲ್ಲಿದ್ದಾರೆ.ಬಂಟ್ವಾಳ ತಾಲೂಕಿನ ಅನಂತನಾಡಿ ಗ್ರಾ.ಪಂ.ನ ಹಿಂದುಳಿದ ವರ್ಗ
ಎ’ ಮಹಿಳಾ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಗೀತಾ ಚಂದ್ರಶೇಖರ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಶಶಿಕಲಾ ಹರಿಣಾಕ್ಷ ಪೂಜಾರಿ ಹಾಗೂ ನೆಟ್ಲ ಮುಡ್ನೂರು ಗ್ರಾ.ಪಂ.ನ ಹಿಂದುಳಿದ ವರ್ಗ `ಎ’ ಮಹಿಳಾ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸುಜಾತ ಜಗದೀಶ್ ಪೂಜಾರಿ ಮಿತ್ತಕೋಡಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಹರಿಣಾಕ್ಷಿ ಹರೀಶ್ ಪೂಜಾರಿ ಕಣದಲ್ಲಿದ್ದರು.
ಸಂಟ್ಯಾರು ಶಾಲೆಯಲ್ಲಿ ನಡೆದ ಆರ್ಯಾಪು ವಾರ್ಡ್ 1 ರ ಮತಗಟ್ಟೆಗೆ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ತಾ.ಪಂ ಮಾಜಿ ಸದಸ್ಯರಾದ ಹರೀಶ್ ಬಿಜತ್ರೆ, ಮೀನಾಕ್ಷಿ ಮಂಜುನಾಥ, ರಾಜೇಶ್ ರೈ ಪರ್ಪುಂಜ, ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷೆ ಪೂರ್ಣಿಮಾ ರೈ, ಸದಸ್ಯರಾದ ವಸಂತ ಶ್ರೀದುರ್ಗಾ, ರುಕ್ಮಯ್ಯ ಮೂಲ್ಯ, ಹರೀಶ್ ನಾಯಕ್ ವಾಗ್ಲೆ, ಸತೀಶ್ ನಾಕ್ ಪರ್ಲಡ್ಕ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ,ಕೆಪಿಸಿಸಿ ವಕ್ತಾರ ಅಮಲ ರಾಮಚಂದ್ರ, ಎಸ್.ಟಿ ಮೋರ್ಚಾದ ಅಧ್ಯಕ್ಷ ಮಹಾಲಿಂಗ ನಾಯ್ಕ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೂರ್ ಹಾಜಿ,ಶಶಿಕಿರಣ್ ರೈ ನೂಜಿಬೈಲು, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಮಹಾಬಲ ರೈ ಒಳತ್ತಡ್ಕ, ಮೌರೀಸ್ ಮಸ್ಕರೇನಸ್ ಸಹಿತ ಹಲವು ಮಂದಿ ಪಕ್ಷದ ಪ್ರಮುಖರು ಭೇಟಿ ನೀಡಿದ್ದರು.