ಮಾ.5: ಪುರುಷರಕಟ್ಟೆ ನಾಗಭೈರವೀ ದೇವಸ್ಥಾನದ ವಾರ್ಷಿಕೋತ್ಸವ

0

ಪುತ್ತೂರು: ಪುರುಷರಕಟ್ಟೆ ನಾಗಭೈರವೀ ದೇವಸ್ಥಾನದ 29ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಾರ್ವಜನಿಕ ಸತ್ಯನಾರಾಯಣ ಪೂಜೆ ಮಾ.5ರಂದು ನಡೆಯಲಿದೆ.

ಬೆಳಿಗ್ಗೆ 9ರಿಂದ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಗಣಪತಿ ಹೋಮ ಮತ್ತು ಸಾರ್ವಜನಿಕ ಗಣಪತಿ ಹೋಮ, ಭಜನೆ, ಶ್ರೀದೇವರಿಗೆ ನವಕ ಕಲಶಾಭಿಷೇಕ, ಪುತ್ತೂರು ಸಿಂಪಲ್ ಮೆಲೋಡಿಸ್‌ನವರಿಂದ ಭಕ್ತಿ ಹಾಗೂ ಸಂಗೀತ ರಸಮಂಜರಿ, ಮಧ್ಯಾಹ್ನ ಮಹಾಪೂಜೆ, ನಾಗದರ್ಶನ, ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ಸಂಜೆ 5ರಿಂದ ಭಜನೆ, ಸಾಮೂಹಿಕ ಸತ್ಯನಾರಾಯಣ ಪೂಜೆ, ಶ್ರೀದುರ್ಗಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ಹರೀಶ್ ಸ್ವಾಮಿ ಪುರುಷರಕಟ್ಟೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here