ಬಾರ್ಯ: ಅಕ್ರಮ ಮದ್ಯ ಮಾರಾಟ-ಆರೋಪಿ ಸೆರೆ

0

ಉಪ್ಪಿನಂಗಡಿ: ಅಕ್ರಮವಾಗಿ ಮದ್ಯ ಮಾರಾಟ ಪ್ರಕರಣವೊಂದನ್ನು ಪತ್ತೆ ಹಚ್ಚಿದ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಉಮೇಶ ಪೂಜಾರಿ (47) ಬಂಧಿತ ಆರೋಪಿ. ಈತ ಇಳಂತಿಲ ಗ್ರಾಮದ ಪೆದಮಲೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ. ಈತನಿಂದ ರೂ. 110 ನಗದು, 90 ಎಂ.ಎಲ್.ನ ಮದ್ಯ ತುಂಬಿದ 20 ಟೆಟ್ರಾ ಪ್ಯಾಕ್‌ಗಳನ್ನು ಹಾಗೂ 500 ಎಂ.ಎಲ್. ಬಿಯರ್‌ನ 12 ಟಿನ್‌ಗಳನ್ನು ವಶಕ್ಕೆ ಪಡೆದು, ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here