ಪುತ್ತೂರು; ನರಿಮೊಗರು ಗ್ರಾಮದ ಪುರುಷರಕಟ್ಟೆ ಪೊಸಮೆನ್ಪದವು ಮುಗೇರಡ್ಕ ಕಲ್ಕುಡ ಕಲ್ಲುರ್ಟಿ ದೈವಸ್ಥಾನದಲ್ಲಿ ಶ್ರೀ ಕಲ್ಕುಡ-ಕಲ್ಲುರ್ಟಿ ಹಾಗೂ ಪಂಜುರ್ಲಿ ಗುಳಿಗ ದೈವಗಳ ವರ್ಷಾವಧಿ ನೇಮೋತ್ಸವವು ಮಾ.೪ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.

ನೇಮೋತ್ಸವದ ಅಂಗವಾಗಿ ಬೆಳಿಗ್ಗೆ ಗಣಹೋಮ, ನಾಗ ತಂಬಿಲ, ಪರಿವಾರ ದೈವಗಳಿಗೆ ತಂಬಿಲ, ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.

ಸಂಜೆ ಶ್ರೀ ದೈವಗಳ ಭಂಡಾರ ತೆಗೆದು ಕಲ್ಕುಡ, ಕಲ್ಲುರ್ಟಿ ದೈವಗಳ ನೇಮ, ಪ್ರಸಾದ ವಿತರಣೆ, ಅನ್ನಸಂರ್ತಣೆಯ ಬಳಿಕ ಗಯಾಪದ ಕಲಾವಿದೆರ್ ಉಪ್ಪಿನಂಗಡಿಯವರಿಂದ `ಏತ್ ಪಂಡಲ ಆತೆ’ ಎಂಬ ಹಾಸ್ಯಮಯ ನಾಟಕ ನಡೆಯಿತು. ನಂತರ ಪಂಜುರ್ಲಿ ಹಾಗೂ ಗುಳಿಗ ದೈವಗಳ ನೇಮೋತ್ಸವ ನಡೆಯಿತು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಎಸ್.ಜಿ ಗ್ರೂಪ್ ನ ಆಡಳಿತ ನಿರ್ದೇಶಕ ಸತ್ಯಶಂಕರ್ ಭಟ್, ನರಿಮೊಗರು ಗ್ರಾ.ಪಂ ಉಪಾಧ್ಯಕ್ಷ ಸುಧಾಕರ ಕುಲಾಲ್, ಪಿಡಿಓ ರವಿಚಂದ್ರ ಹಾಗೂ ಸದಸ್ಯರು ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಆಗಮಿಸಿದ್ದರು

LEAVE A REPLY

Please enter your comment!
Please enter your name here