ಮುಂಡೂರು ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದಲ್ಲಿ ಜಾತ್ರೋತ್ಸವದ ಸಂಭ್ರಮಕ್ಕೆ ಚಾಲನೆ:ಹೊರೆಕಾಣಿಕೆ ಸಮರ್ಪಣೆ, ಉಗ್ರಾಣ ಮುಹೂರ್ತ, ರಂಗಪೂಜೆ, ಗ್ರಂಥಾಲಯಕ್ಕೆ ಚಾಲನೆ

0

ಪುತ್ತೂರು:ಮುಂಡೂರು ಗ್ರಾಮದ ಶ್ರೀ ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಪ್ರತಿಷ್ಠಾ ವರ್ಧಂತಿ, ವರ್ಷಾವಧಿ ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವಕ್ಕೆ ಮಾ.೭ರಂದು ಚಾಲನೆ ದೊರೆತಿದೆ.


ಮಾ.೭ರಂದು ಹೊರೆಕಾಣಿಕೆ ಸಮರ್ಪಣೆ, ಉಗ್ರಾಣ ಪ್ರವೇಶ ರಾತ್ರಿ ರಂಗಪೂಜೆ ನಡೆಯಿತು. ಇದೇ ಸಂದರ್ಭದಲ್ಲಿ ದೇವಸ್ಥಾನದಲ್ಲಿ ನಿರ್ಮಾಣಗೊಂಡಿರುವ ಧಾರ್ಮಿಕ ಅಧ್ಯಯನ ಕೇಂದ್ರಕ್ಕೆ ಪುಸ್ತಕಗಳ ಸಮರ್ಪಣೆಗೊಂಡು ಗ್ರಂಥಾಲಯದಲ್ಲಿ ಅಧ್ಯಯನಕ್ಕೆ ಚಾಲನೆ ನೀಡಲಾಯಿತು.


ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೂಡಂಬೈಲು ಡಾ|ರವಿ ಶೆಟ್ಟಿ ನೇಸರ ಕಂಪ, ಸದಸ್ಯರಾದ ಸದಾಶಿವ ಶೆಟ್ಟಿ ಅಜಲಾಡಿ ಪಟ್ಟೆ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಕಣ್ಣಾರ್ನೂಜಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮಣ್ಣ ಗೌಡ ತೌಡಿಂಜ, ಸುಬ್ರಹ್ಮಣ್ಯ ರಾವ್, ಅರ್ಚಕ ನಾಗೇಶ್ ಕುದ್ರೆತ್ತಾಯ, ಜಾತ್ರೋತ್ಸವ ಸಮಿತಿ ಉಪಾಧ್ಯಕ್ಷರಾದ ಉಮೇಶ್ ಗೌಡ ಗುತ್ತಿನಪಾಲು, ಶೇಷಪ್ಪ ಶೆಟ್ಟಿ ಪೊನೋಣಿ, ಗೌರವ ಸಲಹೆಗಾರರಾದ ಮುರಳೀಧರ ಭಟ್ ಬಂಗಾರಡ್ಕ, ಸುಧೀರ್ ಶೆಟ್ಟಿ ನೇಸರ, ಬಾಲಕೃಷ್ಣ ಕಣ್ಣಾರಾಯ ಬನೇರಿ, ಶ್ರೀಕಾಂತ್ ಆಚಾರ್ ಹಿಂದಾರು, ವೆಂಕಟೇಶ ಅಯ್ಯಂಗಾರ್ ಮಣಿಲ, ಸರೋಜಿನಿ ಶೆಟ್ಟಿ ನೇಸರ, ಉದಯ ಗೌಡ ಪಜಿಮಣ್ಣು, ಜಯಾನಂದ ಅಂಬಟ, ಬಾಲಚಂದ್ರ ಕಡ್ಯ, ಗಣೇಶ್ ಪಜಿಮಣ್ಣು, ಸದಾಶಿವ ಗೌಡ, ಬಾಲಕೃಷ್ಣ ಶೆಟ್ಟಿ ಪಂಜಳ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.


ಇಂದು ಜಾತ್ರೋತ್ಸವ, ದೈವಗಳ ನೇಮ:

ಜಾತ್ರೋತ್ಸವದಲ್ಲಿ ಮಾ.೮ರಂದು ಬೆಳಿಗ್ಗೆ ಕಲಶ ಪೂಜೆ, ಕಲಶಾಭಿಷೇಕ, ನಾಗ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ನಾಗತಂಬಿಲ, ದೈವಗಳಿಗೆ ತಂಬಿಲ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ಸಂಜೆ ದೈವಗಳ ಭಂಡಾರ ತೆಗೆಯುವುದು, ನಂತರ ಶ್ರೀದೇವರ ಬಲಿ ಹೊರಟು, ಉತ್ಸವ, ವಸಂತ ಕಟ್ಟೆಪೂಜೆ, ಬೆಡಿಮದ್ದು ಪ್ರದರ್ಶನ, ಶ್ರೀದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆದ ಬಳಿಕ ಕ್ಷೇತ್ರದ ದೈವಗಳಾದ ಉಳ್ಳಾಕುಲು, ರಕ್ತೇಶ್ವರಿ, ವ್ಯಾಘ್ರಚಾಮುಂಡಿ, ವರ್ಣರ ಪಂಜುರ್ಲಿ, ಬೊಟ್ಟಿಭೂತ, ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ. ಮಾ.೯ರಂದು ಕಲಶ, ಆರಾಧನೆ, ಮಧ್ಯಾಹ್ನ ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆಯೊಂದಿಗೆ ಜಾತ್ರೋತ್ಸವ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದೆ.

LEAVE A REPLY

Please enter your comment!
Please enter your name here