ಪಡುಮಲೆ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ

0

ಪಡುಮಲೆ ಭೂಮಿ ಇತಿಹಾಸ ಸೃಷ್ಟಿಸಿದೆ-ಎಡನೀರುಶ್ರೀ

ಬಡಗನ್ನೂರುಃ ಪ್ರಯತ್ನಗಳ ಜತೆಗೆ ಅಚಲವಾದ ಶ್ರದ್ಧೆ ಇದ್ದಾಗ ಮಾತ್ರ ಧಾರ್ಮಿಕ ಕೇಂದ್ರಗಳು ನಿರ್ಮಾಣವಾಗುತ್ತದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಗಳು ಹೇಳಿದರು.


ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ.ಅಷ್ಟಬಂಧ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಅವರು ಆರ್ಶೀವಚನ ನೀಡಿ ಮಾತನಾಡಿದರು. ಪಡುಮಲೆ ಪುಣ್ಯ ಭೂಮಿ ಇತಿಹಾಸ ಸೃಷ್ಟಿಸಿದ ಊರು ಅತ್ಯಂತ ಸುಂದರ ವಾದ ಶಿಲಾ ಕೆತ್ತನೆಯೊಂದಿಗೆ ಅಲ್ಪಾವಧಿಯಲ್ಲಿ ನಿರ್ಮಾಣವಾಗಿರುವುದು. ಸಂತೋಷ ದ ವಿಚಾರ ಪ್ರಯತ್ನದ ಜೊತೆಗೆ ಶ್ರದ್ಧೆ ಮೂಡಿದಾಗ ಧರ್ಮ ಗಟ್ಟಿಯಾಗುತ್ತದೆ. ಒಂದು ಊರಿನ ದೇವಾಲಯ ಆ ಊರಿನ ಸ್ಥಿತಿಗತಿಯನ್ನು ಬೆಳೆಸುತ್ತದೆ. ದೇವಾಲಯ ಜೀರ್ಣೋದ್ಧಾರ ಜೊತೆಗೆ ಇಡೀ ಊರು ಅಭಿವೃದ್ಧಿ ಹೊಂದುತ್ತದೆ. ಮುಂದೆ ನಿರಂತರ ಧಾರ್ಮಿಕ ಕಾರ್ಯಗಳೊಂದಿಗೆ ದೇವಾಲಯ ಪ್ರಜ್ವಲಿಸಲಿ ಎಂದು ಶುಭಹಾರೈಸಿದರು.


ಪುತ್ತೂರು ತಾ.ಪಂ. ಕಾರ್ಯನಿರ್ವಾಹಕಾಧಿಕಾರಿ ನವೀನ ಭಂಡಾರಿ, ಪೆರ್ಣೆ ಶ್ರೀ ಮುಚ್ಚಿಲೋಟು ಭಗವತಿ ಕ್ಷೇತ್ರದ ಆಡಳಿತ ಮಂಡಳಿ ಸದಸ್ಯ ಗೋಪಾಲಕೃಷ್ಣ ಮಾಸ್ಟರ್ ಪಂಜಕೊಟ್ಟಿ ಕಾಸರಗೋಡು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ ನಿಡಿಯಡ್ಕ, ಸಂದರ್ಭೋಚಿತ ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅರಿಯಡ್ಕ ವಲಯ ಮೇಲ್ವಿಚಾರಕ ಮೋಹನ್ ಕೆ, ಪುತ್ತೂರು ಶ್ರೀ ಕ್ಷೇ. ಧ.ಗ್ರಾ.ಯೋಜನೆ ರಿ. ತಾಲೂಕು ಕೇಂದ್ರ ಸಮಿತಿ ಅಧ್ಯಕ್ಷ ಉದಯ ಕುಮಾರ್ ಲೋಕೋಪಯೋಗಿ ಇಲಾಖಾ ಅಭಿಯಂತರ ಬಾಲಕೃಷ್ಣ ಭಟ್ ಪಟ್ಟಾಜೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು, ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಸಿ.ಯಚ್, ಲಕ್ಷೀನಾರಾಯಣ ರಾವ್ ಪಡುಮಲೆ , ಭಾಸ್ಕರ ರಾವ್ ಪಡುಮಲೆ, ಸುಶೀಲಾ ಪಡುಮಲೆ ಉಪಸ್ಥಿತರಿದ್ದರು..


ಸನ್ಮಾನ ಕಾರ್ಯಕ್ರಮ:

ದೇವಾಲಯ ನಕ್ಷೆ ರಚನೆ ಮಾಡಿ ದೇವಸ್ಥಾನದ ನಿರ್ಮಾಣದಲ್ಲಿ ಸಹಕರಿಸಿದ ಲೋಕೋಪಯೋಗಿ ಇಲಾಖಾ ಅಭಿಯಂತರ ಬಾಲಕೃಷ್ಣ ಭಟ್ ಪಟ್ಟಾಜೆ , ಹಾಗೂ ರಾಜಾಗೊಪುರ ನಿರ್ಮಾಣಕ್ಕೆ ೧೫ ಲಕ್ಷ ರೂಪಾಯಿ ಧನಸಹಾಯ ಮಾಡಿದ ರಮಾ ಸಿ ಲಕ್ಷ್ಮೀ ನಾರಾಯಣ ರಾವ್ ದಂಪತಿಯನ್ನು ಶಾಲು ಹಾಕಿ , ಫಲಪುಷ್ಷ ಸ್ಮರಣಿಕೆ ನೀಡಿ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಸಿ.ಯಚ್ ಅಭಿನಂದಿಸಿದರು.


ಪೌರ ಸನ್ಮಾನ :

ಶ್ರೀ ಕ್ಷೇತ್ರವನ್ನು ೨೮೬ ದಿವಸದಲ್ಲಿ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಳಿಸಿ ಬ್ರಹ್ಮಕಲಶೋತ್ಸವ ಕಾರ್ಯ ನೆರವೇರಲು, ಸಮರ್ಥ ನಾಯಕತ್ವ ವಹಿಸಿ ಹಗಲಿರುಳು ಶ್ರಮಿಸಿ, ಊರಿನ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾದ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಸಿ.ಯಚ್ ದಂಪತಿ ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು ದಂಪತಿಗಳಿಗೆ ಊರ ನಾಗರಿಕರ ಪರವಾಗಿ ಅಭಿನಂದಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಕಾರ್‍ಯದರ್ಶಿ ರಾಮಕೃಷ್ಣ ಭಟ್ ಸ್ವಾಗತಿಸಿದರು. ಉತ್ತಮ್ ಭಟ್ ಪಡ್ಪು ವಂದಿಸಿದರು. ಶಿಕ್ಷಕ ಚಂದ್ರಶೇಖರ ಸುಳ್ಯಪದವು, ರವೀಶ ಪಡುಮಲೆ ಹಾಗೂ ಶಿವಶಂಕರ ಭಟ್ ಕಾರ್ಯಕ್ರಮ
ನಿರೂಪಿಸಿದರು.


ಶ್ರೀ ಭ್ರಮರಾಂಬರಿ ಭಜನಾ ಸಂಘ ಬೆಟ್ಟಂಪಾಡಿ ಇವರಿಂದ ಭಕ್ತಿಗಾನ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here