ವಿಟ್ಲ: ಮಾದಕ ದ್ರವ್ಯ ಸಾಗಾಟ ಪತ್ತೆ: ಓರ್ವನ ಬಂಧನ – ಇನ್ನೋರ್ವ ಪರಾರಿ

0

ವಿಟ್ಲ: ಮಾದಕ ದ್ರವ್ಯ ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿರುವ ವಿಟ್ಲ ಠಾಣಾ ಪೊಲೀಸರು ಪರಾರಿಯಾಗಿರುವ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

ಬೆಳ್ತಂಗಡಿ ತಾಲೂಕು ಬಾರ್ಯ, ಸೂರ್ಯ ಪಡ್ಡಾಯಿ ನಿವಾಸಿ ಅಬ್ದುಲ್ ಅಜೀಜ್ (30 ವ.) ಬಂಧಿತ ಆರೋಪಿ. ವಿಟ್ಲ ಮೂಲದ ಸಾದಿಕ್ ಯಾನೆ ಬ್ಲೇಡ್ ಸಾದಿಕ್ ಪರಾರಿಯಾದವನಾಗಿದ್ದಾನೆ.

ಬಂಧಿತ ಆರೋಪಿಯಿಂದ 7.1 ಗ್ರಾಂ ಎಂಡಿಎಂಎ, 11,000 ರೂ. ನಗದು ಹಾಗೂ ಒಂದು ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಶಪಡಿಸಿಕೊಂಡಿರುವ ಸೊತ್ತಿನ ಮೌಲ್ಯ 14,200 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆ ವೇಳೆ ಪರಾರಿಯಾಗಿರುವ ಆರೋಪಿಯ ಪತ್ತೆಗೆ ಬಲೆ ಬೀಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here