ಸುಳ್ಯಪದವು: ಪಡುವನ್ನೂರು ಶಬರಿನಗರ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮ

0

ಬಡಗನ್ನೂರುಃ ಸ್ವಾಮಿ ಕೊರಗಜ್ಜ ಕ್ಷೇತ್ರ ಶಬರಿನಗರ ಸುಳ್ಯಪದವು ಇದರ ವಾರ್ಷಿಕ ನೇಮೋತ್ಸವ ಮತ್ತು ಸಭಾಂಗಣದ ಉದ್ಘಾಟನೆ ವಿವಿಧ ಕಾರ್ಯಕ್ರಮಗಳೊಂದಿಗೆ ಶ್ರೀ ಕ್ಷೇತ್ರದಲ್ಲಿ ನಡೆಯಿತು.


ಮಾ. ೧೯ ರಂದು ಬೆಳಗ್ಗೆ ಗಣಪತಿ ಹೋಮ, ಬಳಿಕ ಸ್ವಾಮಿ ಕೊರಗಜ್ಜ ಬಾಲ ಭಜನಾ ಸಂಘ ಶಬರಿನಗರ, ಶ್ರೀ ಮಹಾಲಕ್ಷ್ಮೀ ಮಹಿಳಾ ಭಜನಾ ಮಂಡಳಿ ಸುಳ್ಯಪದವು, ಹಾಗೂ ಶ್ರೀ ಅಯ್ಯಪ್ಪ ಭಜನಾ ಮಂದಿರ ಸುಳ್ಯಪದವು ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.


ಧಾರ್ಮಿಕ ಸಭಾ ಕಾರ್ಯಕ್ರಮ: ಕೊಂಡೆವೂರು, ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಕೊಂಡೆವೂರು ಅಶೀರ್ವಚನ ನೀಡಿ ಮಾತನಾಡಿ, ನಾವೆಲ್ಲರೂ ಮನುಷ್ಯರು, ಜೀವಿಸಲು ಭೂಮಿ, ನೀರು ಗಾಳಿ, ಬೆಳಕು ಕೊಟ್ಟಿದ್ದಾನೆ, ಭಗವಂತನನ್ನು ಒಲಿಸುವ ಸಂಸ್ಕೃತಿ ಭಾರತೀಯ ಮನುಷ್ಯನ ಹೃದಯದೊಳಗೆ ಸದ್ಭಾವನೆ ಉಂಟಾಗಲು ಧಾರ್ಮಿಕ ಕೇಂದ್ರಗಳು ಅಗತ್ಯ ಎಂದು ಹೇಳಿದರು. ಭರವಸೆಯೇ ದೇವರು ಇದರಿಂದ ಜೀವನ ಸಾರ್ಥಕವಾಗುತ್ತದೆ ಹೃದಯದೊಳಗೆ ಪರಿವರ್ತನೆ ಉಂಟಾಗುತ್ತದೆ ಹೃದಯದ ಅಮೂಲ್ಯ ಭಕ್ತಿ ಮತ್ತು ಸಮಾಜ ಪ್ರೀತಿಯಿಂದ ಜೀವನ ಪಾವನಗೊಳ್ಳುತ್ತದೆ. ತುಳುನಾಡಿನ ದೈವಗಳ ಶಕ್ತಿ ಬಗ್ಗೆ ವಿಶ್ವ ಸಂಸ್ಥೆಯಲ್ಲೂ ಸುದ್ದಿಯಾಗಿದೆ ಎಂದು ಅವರು ಸಾನಿಧ್ಯ ವೃದ್ಧಿಯೊಂದಿಗೆ ಲೋಕ ಕಲ್ಯಾಣವಾಗಲಿ ಎಂದು ಹಾರೈಸಿದರು.


ಪುತ್ತೂರು, ಅಕ್ಷಯ ಕಾಲೇಜಿನ ಸಂಚಾಲಕ ಜಯಂತ ನಡುಬೈಲು ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ,ಪರಶುರಾಮ ಸೃಷ್ಟಿ ತುಳುನಾಡು ನಮ್ಮದು ದೈವ ದೇವರುಗಳ ನೆಲೆಬೀಡು ನಂಬಿದ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ ಎಂಬ ನಂಬಿಕೆಯಿಂದ ಜೀವನ ಮಾಡುವ ಸಂಸ್ಕೃತಿ ನಮ್ಮದು.ದೈವಿಕ ಕಾರ್ಯಗಳ ಮೂಲಕ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ನೀಡಿ ಬೆಳೆಸುವ ಅಗತ್ಯ ಇದೆ ಎಂದು ಹೇಳಿ ಶುಭ ಹಾರೈಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸ್ವಾಮಿ ಕೊರಗಜ್ಜ ಸಮಿತಿ ಅಧ್ಯಕ್ಷ ಬೆಳಿಯಪ್ಪ ಗೌಡ ಶಬರಿನಗರ ಮಾತನಾಡಿ ಗ್ರಾಮದ ಜನತೆಯ ಸಹಕಾರದಲ್ಲಿ ಕ್ಷೇತ್ರದ ಅಭಿವೃದ್ಧಿ ಆಗಿದೆ ಅಧ್ಯಕ್ಷನಾಗಿ ನಾನು ಏನೂ ಅಲ್ಲ ಎಲ್ಲವೂ ಕೊರಗಜ್ಜನ ಇಚ್ಚೆ ಎಂದು ಹೇಳಿ ಮುಂದೆಯೂ ಗ್ರಾಮಸ್ಥರು ಸಹಕರಿಸುವಂತೆ ಕೇಳಿಕೊಂಡರು.


ಸುಳ್ಯಪದವು ಶ್ರೀ ಬಾಲಸುಬ್ರಹ್ಮಣ್ಯ ಹಿ.ಪ್ರಾ.ಶಾಲಾ ನಿವೃತ್ತ ಶಿಕ್ಷಕ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ರಘುನಾಥ ರೈ ನುಳಿಯಾಲು ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿ, ದೈವ ದೇವರ ಆರಾಧನೆಯಿಂದ ಆತ್ಮ ಶುದ್ದವಾಗುತ್ತದೆ ಎಂದರು.


ಮುಖ್ಯ ಅತಿಥಿಗಳಾಗಿ, ಪುತ್ತೂರು, ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ ಮಾತನಾಡಿ, ಧಾರ್ಮಿಕ ಕ್ಷೇತ್ರ ಹಾಗೂ ಶಿಕ್ಷಣ ಕ್ಷೇತ್ರ ಒಂದು ನಾಣ್ಯದ ಎರಡು ಮುಖಗಳು. ಶಿಕ್ಷಣ ಕ್ಷೇತ್ರ ಹಾಗೂ ಇತರ ವಿವಿಧ ಕ್ಷೇತ್ರಗಳು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮೂಡಿದಾಗ ಮಾತ್ರ ಸಮನ್ವಯತೆ ಬರಲು ಸಾಧ್ಯ ಎಂದರು.
ಖ್ಯಾತ ತುಳು ಚಲನಚಿತ್ರ ನಟ ಅರವಿಂದ ಬೋಳಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಲಿಸಿದ ಗುರುಗಳನ್ನು ಮರೆಯುವ ಕಾಲ. ಈ ಸಂದರ್ಭದಲ್ಲಿ ಗುರುಗಳನ್ನು ಮರೆಯದೆ ಗೌರವ ನೀಡುತ್ತಿರುವುದು ದೊಡ್ಡ ವಿಚಾರ. ಕೊರಗಜ್ಜ ದೈವ ನಂಬಿದ ಜನರಿಗೆ ಅಭಯ ನೀಡುತ್ತಾರೆ ಪ್ರಾರಂಭದಲ್ಲಿ ಕುತ್ತರ್ ಪದವಿನಲ್ಲಿ ಹಾಗೂ ಕೆಲವು ಭಾಗದಲ್ಲಿ ಮಾತ್ರ ಪೂಜಿಸುತ್ತಿದ್ದರು. ಈಗ ಹಲವು ಭಾಗಗಳಲ್ಲಿ ಕೊರಗಜ್ಜನ ಆರಾಧನೆ ನಡೆಯುತ್ತದೆ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದೆ. ಸ್ವಾಮಿ ಕೊರಗಜ್ಜ ದೈವ ಇಲ್ಲಿ ಜನರ ಸಕಲ ಸಂಕಷ್ಟಗಳನ್ನು ಪರಿಹರಿಸಿ ಇಷ್ಟಾರ್ಥ ಪೂರೈಸಲು ಶಕ್ತಿ ನೀಡಲಿ ಎಂದು ಹಾರೈಸಿದರು.


ಸಿವಿಲ್ ಇಂಜಿನಿಯರ್ ಮತ್ತು ದೈವ ವರ್ತಕರಾದ ರವೀಶ ಪಡುಮಲೆ, ದೈವದ ಕೋಡಿಯಡಿಯಲ್ಲೂ ಭಾರತೀಯ ಸಂವಿಧಾನದ ಪರಿಕಲ್ಪನೆ ಇದೆ ಎಂದು ಹೇಳಿ ಶುಭ ಹಾರೈಸಿದರು. ಪಂಜ ಉಪ ವಲಯ ಅರಣ್ಯಾಧಿಕಾರಿ ಸಂತೋಷ್ ಕುಮಾರ್ ರೈ, ಸಂದರ್ಭೋಚಿತ ಮಾತನಾಡಿ ಶುಭ ಹಾರೈಸಿದರು.


ವೇದಿಕೆಯಲ್ಲಿ ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕೆ, ತಾ.ಪಂ. ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಕೇರಳ ಕಾಸರಗೋಡು ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ ನಿಡಿಯಡ್ಕ ಉಪಸ್ಥಿತರಿದ್ದರು. ಸಮಿತಿ ಸದಸ್ಯ ಗುರುಕಿರಣ್ ರೈ ಎನ್ ಜಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು, ಮಾಧವ ನಾಯಕ್ ಸುಳ್ಯಪದವು ವಂದಿಸಿದರು, ಶಿಕ್ಷಕ ಚಂದ್ರಶೇಖರ ಸುಳ್ಯಪದವು ಕಾರ್ಯಕ್ರಮ ನಿರೂಪಿಸಿದರು.


ಸ್ವಾಮೀಜಿಯವರನ್ನು ಸುಂದರ ಪೂಜಾರಿ ದಂಪತಿ ಫಲಪುಷ್ಪ ನೀಡಿ ಗೌರವಿಸಿದರು.


ಸಮಿತಿ ಕಾರ್ಯದರ್ಶಿ ಪ್ರಕಾಶ್ ಮರದಮೂಲೆ, ಕೋಶಾಧಿಕಾರಿ ಭಾಸ್ಕರ ಹೆಗ್ಗಡೆ, ಚಂದ್ರಿಕಾ ಲೋಕೇಶ್, ಉಪಾಧ್ಯಕ್ಷ ಸದಾನಂದ ಬೋಳಂಕೂಡ್ಲು, , ವಿಶಾಲಾಕ್ಷಿ ರಾಘವ, , ಚಂದ್ರಶೇಖರ , ಸತೀಶ್ ಬೆಂಗಳೂರು, ಪ್ರವೀಣ್ ಮರದಮೂಲೆ ಆನಂದ ಪೂಜಾರಿ, ಪ್ರಧಾನ ಅರ್ಚಕ ಮಾಧವ ಸಾಲಿಯಾನ್ ಅತಿಥಿಗಳಿಗೆ ಶಾಲು ಹಾಕಿ ಗೌರವಿಸಿದರು.


ಅನ್ನಸಂತರ್ಪಣೆ: ಮಧ್ಯಾಹ್ನ ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು

ಪೂರ್ಣ ಕುಂಭ ಸ್ವಾಗತ

ಕೊಂಡೆವೂರು, ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರನ್ನು ಸುಳ್ಯಪದವು ಪೇಟೆಯಿಂದ ಶ್ರೀ ಕೊರಗಜ್ಜ ಸನ್ನಿಧಿಗೆ ಸಿಂಗಾರಿ ಮೇಳ, ಮತ್ತು ಕುಣಿತ ಭಜನೆ ಹಾಗೂ ವಾದ್ಯ ಘೋಷದೊಂದಿಗೆ ಮೆರವಣಿಗೆ ಮೂಲಕ ಪೂರ್ಣ ಕುಂಭ ಸ್ವಾಗತ ಮಾಡಲಾಯಿತು.

ಸುಳ್ಯಪದವು ಪೇಟೆಯಿಂದ ಶ್ರೀ ಕೊರಗಜ್ಜ ಸನ್ನಿಧಿಗೆ ಪಿಂಗಾರಿ ಮೇಳ ಮತ್ತು ಕುಣಿತ ಭಜನೆಯೊಂದಿಗೆ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮಿಜಿಯವರಿಗೆ ಪೂರ್ಣಕುಂಭ ಸ್ವಾಗತ ಮಾಡಲಾಯಿತು.

ನೂತನವಾಗಿ ನಿರ್ಮಿಸಿದ ಸಭಾಂಗಣದ ಉದ್ಘಾಟನೆಯನ್ನು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.

ಸಭಾ ಕಾರ್ಯಕ್ರಮವನ್ನು ಅಕ್ಷಯ ಕಾಲೇಜಿನ ಸಂಚಾಲಕ ಜಯಂತ ನಡುಬೈಲು ತೆಂಗಿನ ಸಿರಿ ಬಿಡಿಸುವ ಮೂಲಕ ಚಾಲನೆಯಿತ್ತರು.

ಸಂಜೆ ಶ್ರೀ ಗುಳಿಗ ದೈವದ ನೇಮೋತ್ಸವ, ರಾತ್ರಿ ಸಂಗೀತ ರಸಮಂಜರಿ, ಶ್ರೀ ಕೊರಗ ತನಿಯ ದೈವದ ನೇಮೋತ್ಸವ ನಡೆಯಲಿದೆ

LEAVE A REPLY

Please enter your comment!
Please enter your name here