ಮಾ.22-24: ಕಯ್ಯಾರುಪಾದೆ ತರವಾಡು ಮನೆಯ ಗೃಹಪ್ರವೇಶ, ದೈವಗಳ ಪ್ರತಿಷ್ಠಾ ಕಲಶೋತ್ಸವ, ನೇಮೋತ್ಸವ

0

ಪುತ್ತೂರು: ಮಂಜೇಶ್ವರ ತಾಲೂಕಿನ ಉಪ್ಪಳ ಪೈವಳಿಕೆ ಕಯ್ಯಾರುಪಾದೆ ತರವಾಡು ಮನೆಯ ದೈವ-ದೇವರುಗಳ ಟ್ರಸ್ಟ್ ಇದರ ಆಶ್ರಯದಲ್ಲಿ ಕಯ್ಯಾರುಪಾದೆ ತರವಾಡು ಮನೆ ಗೃಹಪ್ರವೇಶ ಧರ್ಮದೈವ ಶ್ರೀ ಧೂಮಾವತಿ, ಕುಪ್ಪೆಪಂಜುರ್ಲಿ ಚಾವಡಿ, ಕಲ್ಲುರ್ಟಿ ಸ್ಥಳ ಗುಳಿಗ ದೈವಗಳ ಪ್ರತಿಷ್ಠಾ ಕಲಶೋತ್ಸವ, ಹರಿಸೇವೆ ಮತ್ತು ನೇಮೋತ್ಸವವು ಮಾ.22 ರಿಂದ ಆರಂಭಗೊಂಡು ಮಾ.24 ರವರೇಗೆ ನಡೆಯಲಿದೆ. ವೇದಮೂರ್ತಿ ಬ್ರಹ್ಮಶ್ರೀ ತಂತ್ರಿ ಬಿ.ಎಸ್.ಎನ್ ಕಡಮಣ್ಣಾಯ ಬಂಬ್ರಾಣ ಕುಂಬ್ಳೆ ಇವರ ನೇತೃತ್ವದಲ್ಲಿ ತರವಾಡು ಮನೆಯ ಗೃಹಪ್ರವೇಶ, ದೈವಗಳ ಪ್ರತಿಷ್ಠಾ ಕಲಶೋತ್ಸವ, ಧಾರ್ಮಿಕ ವಿಧಿ ವಿಧಾನ, ವೈದಿಕ ಕಾರ್ಯಕ್ರಮಗಳು ನಡೆಯಲಿದೆ.

ಮಾ. 22ರಂದು ಸಂಜೆ ಗಂಟೆ ಶ್ರೀ ಕ್ಷೇತ್ರದ ತಂತ್ರಿಗಳು ಹಾಗೂ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ ಬಳಿಕ ದೇವತಾ ಪ್ರಾರ್ಥನೆ, ಆಚಾರ್ಯವರಣ ಪ್ರಸಾದ ಪರಿಗ್ರಹ, ಸ್ವಸ್ತಿ ಪುಣ್ಯಾಹವಾಚನ, ಸ್ಥಳಶುದ್ಧಿ, ಪ್ರಾಸಾದ ಶುದ್ದಿ, ರಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಪೂಜಾ ಬಲಿ, ಪ್ರಾಕಾರಬಲಿ, ದುರ್ಗಾಪೂಜೆ, ಪ್ರಸಾದ ವಿತರಣೆ, ಗೌರವಾರ್ಪಣೆ ನಡೆದು ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ಮಾ.23 ರಂದು ಬೆಳಿಗ್ಗೆ ಮಹಾಗಣಪತಿ ಹೋಮ ನಡೆದು 6.30 ರಿಂದ 7.50 ರ ರೇವತಿ ನಕ್ಷತ್ರ ಮೀನ ಲಗ್ನ ಸುಮುಹೂರ್ತದಲ್ಲಿ ಕಯ್ಯಾರುಪಾದೆ ತರವಾಡು ಮನೆಯ ಗೃಹಪ್ರವೇಶ, 10 ರಿಂದ 11.30 ರ ರೇವತಿ ನಕ್ಷತ್ರ, ವೃಷಭ ಲಗ್ನ ಸುಮುಹೂರ್ತದಲ್ಲಿ
ಧರ್ಮದೈವ ಶ್ರೀ ಧೂಮಾವತಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಸ್ಥಳ ಗುಳಿಗ ದೈವಗಳ ಪ್ರತಿಷ್ಠಾ ಮಹೋತ್ಸವ, ಕಲಶಾಭಿಷೇಕ ನಡೆಯಲಿದೆ. 11.30 ರಿಂದ ಶ್ರೀ ಸತ್ಯನಾರಾಯಣ ಪೂಜೆ, ಹರಿಸೇವೆ (ಕಯ್ಯಾರುಪಾದೆ ಕುಟುಂಬಸ್ಥರ ವೆಂಕಟ್ರಮಣ ದೇವರ ಮುಡಿಪು ಕಟ್ಟುವುದು) ನಂತರ ಮಹಾಪೂಜೆ ನಡೆದು ಭಕ್ತಾದಿಗಳಿಗೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಇದೇ ಸಂದರ್ಭದಲ್ಲಿ ಗೌರವಾರ್ಪಣೆ ಮತ್ತು ಆಶೀರ್ವಚನ ನಡೆಯಲಿದ್ದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಗೌರವಾರ್ಪಣೆ ಮತ್ತು ಆಶೀರ್ವಚನ ಮಾಡಲಿದ್ದಾರೆ. ಸಂಜೆ 6.30 ಕ್ಕೆ ಕಯ್ಯಾರುಪಾದೆ ತರವಾಡು ಮನೆಯಿಂದ ಶ್ರೀ ಕಲ್ಲುರ್ಟಿ ದೈವ ಮತ್ತು ಧರ್ಮದೈವ ಚಾವಡಿಯಿಂದ ಧರ್ಮದೈವ ಧೂಮಾವತಿ ಮತ್ತು ಪರಿವಾರ ದೈವಗಳ ಭಂಡಾರ ಇಳಿಸುವ ಕಾರ್ಯಕ್ರಮ ನಡೆದು ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 3.30 ಕ್ಕೆ ಕಲ್ಲುರ್ಟಿ ದೈವದ ನೇಮೋತ್ಸವ, 11.30 ಕ್ಕೆ ಕುಪ್ಪೆಪಂಜುರ್ಲಿ ದೈವದ ನೇಮೋತ್ಸವ ನಡೆಯಲಿದೆ. ಮಾ.24 ರಂದು ಬೆಳಿಗ್ಗೆ 5 ಕ್ಕೆ ಧರ್ಮದೈವ ಧೂಮಾವತಿ ನೇಮೋತ್ಸವ ನಂತರ ಅನ್ನಸಂತರ್ಪಣೆ. ಸಂಜೆ ಸ್ಥಳ ಗುಳಿಗ ದೈವದ ನೇಮ, ನಂತರ ಭಂಡಾರ ಆಯಾ ಮೂಲಸ್ಥಾನಕ್ಕೆ ತೆರಳಿ ಭಂಡಾರ ಏರಿಸುವುದು, ರಾಹುಗುಳಿಗನಿಗೆ ತಂಬಿಲ ಸೇವೆ, ಅನ್ನಸಂತರ್ಪಣೆ ನಡೆಯಲಿದೆ.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೈವ ದೇವರುಗಳ ಕೃಪೆಗೆ ಪಾತ್ರರಾಗುವಂತೆ ಕಯ್ಯಾರುಪಾದೆ ತರವಾಡು ಮನೆಯ ಯಜಮಾನ ರಾಮಚಂದ್ರ ಅಡಪ ಕೈಕಾರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ದೇರಣ್ಣ ಶೆಟ್ಟಿ ನಡುಬೈಲು, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಸೀತಾರಾಮ ರೈ ಕೈಕಾರ, ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸೀತಾರಾಮ ರೈ ದೇಲಂಪಾಡಿ, ಟ್ರಸ್ಟ್‌ನ ಅಧ್ಯಕ್ಷ ವಿನೋದ್ ಶೆಟ್ಟಿ ಮುಡಾಲ, ಬ್ರಹ್ಮಕಲಶೋತ್ಸವ ಸಮಿತಿ ಪ್ರ.ಕಾರ್ಯದರ್ಶಿ ತಾರಾನಾಥ ಶೆಟ್ಟಿ ಕುಯ್ಯಾರು, ಕೋಶಾಧಿಕಾರಿ ಸತೀಶ್ ರೈ ಪೊನೊನಿ, ಟ್ರಸ್ಟ್ ಮತ್ತು ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಶೆಟ್ಟಿ ಬೊಳ್ಳಾವು ಹಾಗೂ ಸಮಿತಿಯ ಪದಾಧಿಕಾರಿಗಳು, ಸರ್ವ ಸದಸ್ಯರುಗಳ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here