ನರಿಮೊಗರು, ಶಾಂತಿಗೋಡು ಗ್ರಾಮದಲ್ಲಿ ಸಣ್ಣನೀರಾವರಿ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಂತಿಗೋಡಿನಲ್ಲಿ ಉದ್ಘಾಟನೆ

0

ಪುತ್ತೂರು: ನರಿಮೊಗರು ಮತ್ತು ಶಾಂತಿಗೋಡು ಗ್ರಾಮದಲ್ಲಿ ಸಣ್ಣ ನೀರಾವರಿ, ಅಂತರ್ಜಲ ಅಭಿವೃದ್ಧಿ ಇಲಾಖೆ ಮತ್ತು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಆಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಂತಿಗೋಡಿನಲ್ಲಿ ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು. ಶಾಂತಿಗೋಡಿನಲ್ಲಿ ರೂ. 6.36 ಕೋಟಿಯ ಗ್ರಾಮ ಸಡಕ್ ರಸ್ತೆ ಮತ್ತು ರೂ. 1.50 ಕೋಟಿ ಎತ ನೀರಾವರಿ ಯೋಜನೆಯನ್ನು ಅವರು ಉದ್ಘಾಟಿಸಿದರು.


ಜಿ.ಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಗ್ರಾ.ಪಂ ಉಪಾಧ್ಯಕ್ಷ ಸುಧಾಕರ್ ಕುಲಾಲ್, ಕೃಷಿಕ ನಾರಾಯಣ ಗೌಡ ಪಾದೆ, ಸಡಕ್ ಯೋಜನೆಯ ಸಹಾಯಕ ಇಂಜಿನಿಯರ್ ಪದ್ಮರಾಜ್, ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ರಾಕೇಶ್, ಗುತ್ತಿಗೆದಾರ ಸತೀಶ್ ಬಪ್ಪಳಿಗೆ, ಅರ್ಚಕ ಬಾಲಚಂದ್ರ ಸಗ್ರಿತ್ತಾಯ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ತೋಳ್ಪಾಡಿ, ಗ್ರಾ.ಪಂ ಸದಸ್ಯರಾದ ವಸಂತಿ, ದಿನೇಶ್ ಮಜಲು, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶ್ಯಾಮಪ್ರಸಾದ್, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಕೃಷ್ಣ ಸಾಲಿಯಾನ್, ಉದಯಶಂಕರ್ ಭಟ್, ದೇವಪ್ಪ, ಸುಕುಮಾರ ತೋಳ್ಪಾಡಿ, ಯೋಗೀಶ್, ರವಿಶೆಟ್ಟಿ, ರೂಪಲತಾ, ಜಯ, ಬೆಳಿಯಪ್ಪ ವಿನೋದ್,ಜನಾರ್ದನ, ಅಂಗನವಡಿ ಕಾರ್ಯಕತೆ ನಳಿನಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here