





ಪುತ್ತೂರು:ಪಡ್ನೂರು ಗ್ರಾಮದ ಪಡ್ಡಾಯೂರು ಏಳ್ನಾಡುಗುತ್ತು ಶ್ರೀ ರುದ್ರಾಂಡಿ ಮತ್ತು ನೇತ್ರಾಂಡಿ ಹಾಗೂ ಇತರ ಪರಿವಾರ ದೈವಗಳ ಸಾನಿಧ್ಯದಲ್ಲಿ ವರ್ಷಂಪ್ರತಿ ಪಡ್ಡಾಯೂರು ಬಾಕಿಮಾರು ಗದ್ದೆಯಲ್ಲಿ ನಡೆಯುವ ಶ್ರೀ ರುದ್ರಾಂಡಿ ಮತ್ತು ನೇತ್ರಾಂಡಿ ಹಾಗೂ ಇತರ ಪರಿವಾರ ದೈವಗಳ ದೊಂಪದ ಬಲಿ ನೇಮೋತ್ಸವ ಮಾ.19 ರಂದು ನೆರವೇರಿತು.


ಬೆಳಿಗ್ಗೆ ಗಣಪತಿ ಹೋಮ, ನಾಗತಂಬಿಲ, ಶ್ರೀ ರುದ್ರಾಂಡಿ, ನೇತ್ರಾಂಡಿ ಹಾಗೂ ಇತರ ಪರಿವಾರ ದೈವಗಳಿಗೆ ತಂಬಿಲ ಸೇವೆ, ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ದೈವಗಳ ಮೂಲ ಸ್ಥಾನದಿಂದ ನೇಮ ನಡೆಯುವ ಬಾಕಿಮಾರು ಗದ್ದೆಗೆ ದೈವಗಳ ಭಂಡಾರ ಆಗಮನ, ರಾತ್ರಿ ಅನ್ನಸಂತರ್ಪಣೆಯ ಬಳಿಕ ರುದ್ರಾಂಡಿ, ನೇತ್ರಾಂಡಿ ಹಾಗೂ ಇತರ ಪರಿವಾರ ದೈವಗಳ ದೊಂಪದ ಬಳಿ ನೇಮೋತ್ಸವ ನಡೆಯಿತು.






ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್, ದೈವಸ್ಥಾನದ ಅಧ್ಯಕ್ಷ ರಾಜ್‌ಕುಮಾರ್ ಅಧಿಕಾರಿ, ಏಳ್ನಾಡು ಗುತ್ತಿನ ಮನೆಯ ವೃಷಭದೇವ ಅಧಿಕಾರಿ, ಅಜಿತ್ ಕುಮಾರ್ ರೈ, ನ್ಯಾಯವಾದಿ ಚಿದಾನಂದ ಬೈಲಾಡಿ, ಸಮಿತಿ ಕಾರ್ಯದರ್ಶಿ ಆನಂದ ಗೌಡ ಮೂವಪ್ಪು, ಸಮಿತಿ ಸದಸ್ಯರು ಸೇರಿದಂತೆ ನೂರಾರು ಮಂದಿ ಭಕ್ತಾದಿಗಳು ನೇಮೋತ್ಸವದಲ್ಲಿ ಭಾಗವಹಿಸಿದ್ದರು.








