ಬಡಗನ್ನೂರುಃ ಕುದ್ಕಾಡಿ ಮನೆತನದ ಶ್ರೀ ರಕ್ತೇಶ್ವರೀ ಮತ್ತು ಪರಿವಾರ ದೈವಗಳ ನೇಮೋತ್ಸವ ಮಾ. 24 ರಂದು ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿಗಳವರ ಮಾರ್ಗದರ್ಶನದಲ್ಲಿ ಹಾಗೂ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಗಳವರ ನೇತೃತ್ವದಲ್ಲಿ ಪ್ರಧಾನ ಅರ್ಚಕ ಮಹಾಲಿಂಗ ಭಟ್ಟರವರ ಸಹಭಾಗಿತ್ವದಲ್ಲಿ ನಡೆಯಿತು.
ಮಾ.24ರಂದು ಬೆಳಗ್ಗೆ ಕುದ್ಕಾಡಿ ತರವಾಡು ಮನೆಯಲ್ಲಿ ಗಣಪತಿ ಹೋಮ, ನಾಗದೇವರ ತಂಬಿಲ ಸೇವೆ, ಹರಿಸೇವೆ, ಸಂಜೆ ಗಂ 6.30 ಕ್ಕೆ ದೇವಸ್ಥಾನದಿಂದ ಭಂಡಾರ ತೆಗೆಯುವುದು, ತೊಡಂಗಲ್ ನಂತರ ಮೇಲೇರಿ ಆಗ್ನಿಸ್ಪರ್ಶ, ಬಳಿಕ ಅನ್ನಸಂತರ್ಪಣೆ ನಡೆಯಿತು.
ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಜಾಂಬವತಿ ಕಲ್ಯಾಣ ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ನಡೆಯಿತು.
ಬಳಿಕ ಪೊಟ್ಟ ಭೂತದ ನೇಮ ಹಾಗೂ ರಕ್ತೇಶ್ವರಿ ದೈವದ ನೇಮ ಪ್ರಸಾದ ವಿತರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಕುದ್ಕಾಡಿ ಮನೆತನದ ಯಜಮಾನ ಬಾಲಕೃಷ್ಣ ರೈ ಮತ್ತು ಕುದ್ಕಾಡಿ ಕುಟುಂಬಸ್ಥರು ಹಾಗೂ ಬಂಧು ಮಿತ್ರರು ಮತ್ತು ಊರಿನವರು ಭಾಗವಹಿಸಿದ್ದರು.