ಕೊನೆಮಜಲು ಭಜನಾ ತರಬೇತಿ ಕಮ್ಮಟಕ್ಕೆ ಚಾಲನೆ

0

ರಾಮಕುಂಜ: ಕಡಬ ತಾಲೂಕಿನ ಕೊಯಿಲ ಗ್ರಾಮದ ಕೊನೆಮಜಲು ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂದಿರದಲ್ಲಿ ಕಡಬ ತಾಲೂಕು ಭಜನಾ ಪರಿಷತ್ತಿನ ಭಜನಾ ತರಬೇತಿ ಕಮ್ಮಟಕ್ಕೆ ಚಾಲನೆ ನೀಡಲಾಯಿತು.


ಕಡಬ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಸುಂದರ ಗೌಡ ಬಿಳಿನೆಲೆ ಚಾಲನೆ ನೀಡಿದರು. ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂದಿರ ಸಮಿತಿ ಅಧ್ಯಕ್ಷ ಉಮೇಶ್ ನೂಜಿಮಾರ್ ಅಧ್ಯಕ್ಷತೆ ವಹಿಸಿದ್ದರು.

ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಯಧುಶ್ರೀ ಆನೆಗುಂಡಿ, ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಅಧ್ಯಕ್ಷ ಜನಾರ್ದನ ಗೌಡ, ತರಬೇತುದಾರರಾದ ಮೋಹನ್ ಬಿಳಿನೆಲೆ, ದಿಶಾಂತ್ ಬಿಳಿನೆಲೆ, ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂದಿರ ಸಮಿತಿ ಉಪಾಧ್ಯಕ್ಷರಾದ ವೀರಪ್ಪ ದಾಸಯ್ಯ ಪಾಣಿಗ, ಜಗನ್ನಾಥ ಶೆಟ್ಟಿ ಕಾರೆಗುಡ್ಡೆ, ಕೇಶವ ಗೌಡ ಕೊನೆಮಜಲು ಶುಭಹಾರೈಸಿದರು. ಕಾರ್ಯದರ್ಶಿ ಯತೀಶ್ ಪುತ್ಯೆ ಸ್ವಾಗತಿಸಿ ನಿರೂಪಿಸಿದರು.

LEAVE A REPLY

Please enter your comment!
Please enter your name here