ಮರ್ದಾಳ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ

0

ಸಂಪೂರ್ಣ ಶಿಲಾಮಯ ದೇವಾಲಯ

ಕಡಬ: ಇತಿಹಾಸ ಪ್ರಸಿದ್ಧ ಮರ್ದಾಳ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನವೀಕರಣ ಹಾಗೂ ಜೀರ್ಣೋದ್ಧಾರ ಕಾರ್ಯಕ್ಕೆ ಮಾ.27 ಸೋಮವಾರದಂದು ಚಾಲನೆ ನೀಡಲಾಯಿತು.

ಸೋಮವಾರ ಬೆಳಿಗ್ಗೆ ದೇವಳದ ಪ್ರಧಾನ ಅರ್ಚಕ ರಮೇಶ್ ಭಟ್ ಕೆರ್ಮಾಯಿ ನೇತೃತ್ವದಲ್ಲಿ ದೇವರಿಗೆ ಹಾಗೂ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿ ಕರಸೇವೆಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಭಟ್ ಪಿಲಿಮಜಲು, ಉಪಾಧ್ಯಕ್ಷರಾದ ನಾರಾಯಣ ಶೆಟ್ಟಿ ಅತ್ಯಡ್ಕ, ಪೂವಪ್ಪ ಗೌಡ ಪೂಜಾರಿ ಮನೆ, ಪ್ರಧಾನ ಕಾರ್ಯದರ್ಶಿ ಸತೀಶ್ ಕೆ.ಬಸ್ತಿ ಕೊಡೆಂಕಿರಿ, ಜತೆ ಕಾರ್ಯದರ್ಶಿ ವಾಸುದೇವ ಬೈಪಡಿತ್ತಾಯ, ಸದಸ್ಯರುಗಳಾದ ಮನೋಹರ ರೈ ಅಲಿಮಾರು ಪಟ್ಟೆ, ಶ್ಯಾಮಪ್ರಸಾದ್ ರೈ ಪಣೆಬೈಲು, ಸತ್ಯನಾರಾಯಣ ಹೆಗ್ಡೆ ನಡುಮಜಲು, ಉಮೇಶ್ ಹೊಸಮನೆ, ಸಲಹಾ ಸಮಿತಿ ಅಧ್ಯಕ್ಷ ಹರೀಶ್ ಕೋಡಂದೂರು, ಕಾರ್ಯದರ್ಶಿ ತಿರುಮಲೇಶ್ವರ ಗೌಡ ಕೊಲ್ಯ ಉಪಸ್ಥಿತರಿದ್ದರು. ಸುಮಾರು 500 ಹೆಚ್ಚು ಭಕ್ತಾದಿಗಳು ದೇವಳದ ಕರಸೇವೆಯಲ್ಲಿ ಭಾಗವಹಿಸಿದರು.

ಸಂಪೂರ್ಣ ಶಿಲಾಮಯ ದೇಗುಲ:

ಮರ್ದಾಳ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನವು ಸಾವಿರಾರು ವರ್ಷಗಳ ಇತಿಹಾಸವಿದ್ದು, ಮಾಗಣೆಗೆ ಸೇರಿದ ದೇವಾಲಯವಾಗಿದೆ. ಕರಾಸುರ ಪ್ರತಿಷ್ಠಾಪಿತ ದೇವಾಲಯ ಎಂಬ ಪುರಾಣ ಹಿನ್ನಲೆ ಇದೆ. ದೇವಾಲಯವು ಗಜಾಪೃಷ್ಠಾಕರ ಶೈಲಿಯಲ್ಲಿದ್ದು, ಪ್ರಸ್ತುತ ಜಿಲ್ಲೆಯಲ್ಲಿಯೇ ಅತೀ ದೊಡ್ಡ ಗರ್ಭಗುಡಿ ಇರುವ ಮಹಾಲಿಂಗೇಶ್ವರ ದೇವಾಲಯವಾಗಿದೆ. ರಾಜರ ಕಾಲದಲ್ಲಿ ಅತ್ಯಂತ ವೈಭವದಿಂದ ಕೂಡಿದ ದೇವಾಲಯವಾಗಿತ್ತು ಎಂದು ಇತಿಹಾಸವಿದೆ. ದೇವಾಲಯದ ಬಲಭಾಗದಲ್ಲಿ ಒಂದು ಶಾಸನವಿದ್ದು ಇ ಶಾಸನವು ದೇವಾಲಯದಲ್ಲಿ 4 ರಾಜರು ಮಾಡಿಕೊಂಡ ಒಂದು ಒಪ್ಪಂದದ ಕುರುಹು ವಿಚಾರಗಳು ಎಂದು ಕೆಲವು ಇತಿಹಾಸಿಕ ದಾಖಲೆಯಲ್ಲಿ ಕಂಡು ಬಂದಿದೆ. ಇದೀಗ ಅಷ್ಟಮಂಗಳ ಪ್ರಶ್ನೆಯಲ್ಲಿ ಸಂಪೂರ್ಣ ಶಿಲಾಮಯ ದೇಗುಲ ನಿರ್ಮಾಣವಾಗಬೇಕು ಎಂದು ಕಂಡುಬಂದಿದೆ. ಈ ನಿಟ್ಟಿನಲ್ಲಿ ಭಕ್ತರು ಕಾರ್ಯಪ್ರವೃತ್ತರಾಗಿದ್ದು ಇದೀಗ ನಿತ್ಯ ಕರಸೇವೆಗೆ ಚಾಲನೆ ನೀಡಲಾಗಿದೆ.

LEAVE A REPLY

Please enter your comment!
Please enter your name here