ಇಚ್ಲಂಪಾಡಿಯ ಜೆಸ್ವಿನ್ ಜೋಸೆಫ್‌ರಿಗೆ ಕೆನಡಾ ಲ್ಯಾಂಬ್ಡನ್ ಕಾಲೇಜಿನಿಂದ ಪದವಿ ಪ್ರದಾನ

0

ನೆಲ್ಯಾಡಿ: ಕಡಬ ತಾಲೂಕಿನ ಇಚ್ಲಂಪಾಡಿ ನಿವಾಸಿ ಜೆಸ್ವಿನ್ ಜೋಸೆಫ್‌ರವರಿಗೆ ಮಾ.14ರಂದು ಕೆನಡಾದ ಟೊರಂಟೋದಲ್ಲಿ ನಡೆದ 2021-22ನೇ ಸಾಲಿನ ಪದವಿ ದಿನದಂದು ಸ್ನಾತಕೋತ್ತರ ಪದವಿ ನೀಡಲಾಯಿತು.


ಲ್ಯಾಂಬ್ಡನ್ ಕಾಲೇಜ್ ಟೊರಂಟೋ ಕ್ಯಾಂಪಸ್ ಇದರ ವತಿಯಿಂದ ನಡೆದ ಪದವಿ ದಿನದಲ್ಲಿ ಕಾಲೇಜಿನ ಡಾಯರೇಕ್ಷರಾದ ಮೈಕಲ್ ವೊರಾಕ್ಸ್‌ರವರು ಸ್ನಾತಕೋತ್ತರ ಪದವಿ ಪ್ರದಾನ ಮಾಡಿದರು. 2021-22ನೇ ಬ್ಯಾಚ್‌ನಲ್ಲಿ ವ್ಯಾಸಂಗ ಮಾಡಿರುವ ಜೆಸ್ವಿನ್‌ರವರು ತನ್ನ ಸ್ನಾತಕೋತ್ತರ ಪದವಿಯನ್ನು ‘ಕ್ವಾಲಿಟಿ ಇಂಜಿನಿಯರಿಂಗ್ ಮ್ಯಾನೇಜ್‌ಮೆಂಟ್’ ಎಂಬ ವಿಷಯದಲ್ಲಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ್ದರು. ಇವರು ಪುತ್ತೂರು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ್ದರು. ಇವರು ಕಡಬ ತಾಲೂಕು ಇಚ್ಲಂಪಾಡಿ ನಿವಾಸಿ, ಪುತ್ತೂರು ತಾ.ಪಂ.ಮಾಜಿ ಅಧ್ಯಕ್ಷೆ ಕೆ.ಟಿ.ವಲ್ಸಮ್ಮರವರ ಹಿರಿಯ ಪುತ್ರ.

LEAVE A REPLY

Please enter your comment!
Please enter your name here