ಪೆರಿಗೇರಿ ಶ್ರೀ ಅಯ್ಯಪ್ಪ ಭಜನಾ ಮಂದಿರದ ಪುನಃ ಪ್ರತಿಷ್ಠಾ ಮಹೋತ್ಸವ, ಧಾರ್ಮಿಕ ಸಭೆ

0

ಭಜನೆಯಿಂದ ಭಗವಂತನನ್ನು ಕಾಣಬಹುದು : ಸಂಜೀವ ಮಠಂದೂರು

ಪುತ್ತೂರು: ಪೆರಿಗೇರಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಪುನಃ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಮಾ.27 ರಂದು ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಾಸಕ ಸಂಜೀವ ಮಠಂದೂರುರವರು ಮಾತನಾಡಿ, ಭಜನೆಯಿಂದ ಭಗವಂತನನ್ನು ಕಾಣಬಹುದು. ದೇಶದ ಸಂಸ್ಕೃತಿ, ವಿಶ್ವಕ್ಕೆ ಮಾದರಿ.ಕಲೆಯಲ್ಲಿ ಕೂಡಾ ಭಗವಂತನನ್ನು ನೆನೆಯುತ್ತೇವೆ.ಹಿಂದೂ ಸಮಾಜವನ್ನು ಕಟ್ಟಲು ಭಜನಾ ಮಂದಿರಗಳಿಂದ ಸಾಧ್ಯ,ದೇಶದ ದೇವಸ್ಥಾನಗಳು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮೋದಿ ಸರ್ಕಾರ ಶ್ರಮಿಸುತ್ತಿದೆ. ರಾಜ್ಯದಲ್ಲಿ ದೇವಸ್ಥಾನ ಮತ್ತು ಗೋವುಗಳನ್ನು ರಕ್ಷಿಸುವ ಸಲುವಾಗಿ ಮಸೂದೆ ಜಾರಿಗೆ ತಂದಿದ್ದೇವೆ ಎಂದು ಹೇಳಿ ಶುಭ ಹಾರೈಸಿದರು.


ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ ಕನ್ನಯ ಸಭಾಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಸಾಮಾಜಿ ಕಾರ್ಯಕರ್ತ ಯತೀಶ್ ಅರುವಾರ ಧಾರ್ಮಿಕ ಉಪನ್ಯಾಸ ನೀಡಿದರು. ಅತಿಥಿಗಳಾಗಿ ಪುತ್ತೂರು ಪುರಸಭಾ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ,ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಪಾಂಡುರಂಗ ಭಟ್, ಪೆರಿಗೇರಿ ಶ್ರೀ ಆದಿಶಕ್ತಿ ಮಹಮ್ಮಾಯಿ ಆರಾಧನಾ ಸಮಿತಿ ಮತ್ತು ಪಿಡಿಒ ದೇವಪ್ಪ, ಮಂದಿರದ ಗುರುಸ್ವಾಮಿ ಮೋಹನ ಗೌಡ, ಪೆರಿಗೇರಿ ಭಜನಾ ಮಂದಿರದ ಅಧ್ಯಕ್ಷ ಅರವಿಂದ ಗೌಡ ಕನ್ನಯ, ಬಡಗನ್ನೂರು ಗ್ರಾಪಂ ಸದಸ್ಯ ವಸಂತ ಗೌಡ ಕನ್ನಯ, ನವಚೈತನ್ಯ ಯುವಕ ಮಂಡಲದ ಅಧ್ಯಕ್ಷ ವಿಜಯ ಕುಮಾರ್ ಹೊಸನಗರ, ಉಪ್ಪಿನಂಗಡಿ ಶ್ರೀ ಆಂಜನೇಯ ದೇವಸ್ಥಾನದ ಧರ್ಮದರ್ಶಿ ಕೃಷ್ಣ ಶೆಣೈರವರುಗಳು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಪಾಂಡುರಂಗ ಭಟ್ ದಂಪತಿ, ಶ್ರೀನಿವಾಸ ಗೌಡ ದಂಪತಿ, ಬೆಳಿಯಪ್ಪ ಗೌಡ ದಂಪತಿ, ಕಮಲಾಕ್ಷ ಗೌಡ ದಂಪತಿ, ಮೋಹನ ಗೌಡ ಗುರುಸ್ವಾಮಿ, ಪ್ರಸಾದ್ ಮತ್ತು ದಿನೇಶ್ ಆಲಂತ್ತಡ್ಕ, ಮೋಹನ್ ಗೌಡ ಕನ್ನಯ, ಪವನ್ ಗೌಡ ಕನ್ನಯ, ವಿನಯ ಆಚಾರ್ಯ ನೆಕ್ಕರೆ, ಪ್ರಶಾಂತ್ ಗೌಡ ಕನ್ನಯರವರುಗಳನ್ನು ಶಾಲು,ಸ್ಮರಣಿಕೆ, ಫುಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು.


ಪ್ರಸಾದ್ ಕನ್ನಯ ಆಲಂತ್ತಡ್ಕ ಸ್ವಾಗತಿಸಿ, ಸುಬ್ಬಯ್ಯ ರೈ ಕೊಲ ವಂದಿಸಿದರು. ಚೈತ್ರಾ ಮಾಲಕೊಚ್ಚಿ, ಜಯಚಂದ್ರ ಕೇಪುಳಕಾನ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕಿಶೋರ್ ಡಿ.ಶೆಟ್ಟಿಯವರ ಕೂಟದಿಂದ `ಕಟೀಲ್ದಪ್ಪ ಉಳ್ಳಾಲ್ದಿ’ ಎಂಬ ಪೌರಾಣಿಕ ತುಳು ನಾಟಕ ನಡೆಯಿತು.

LEAVE A REPLY

Please enter your comment!
Please enter your name here