ಸವಣೂರು ಯುವಕ ಮಂಡಲಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷ -ಜಿತಾಕ್ಷ ಜಿ.,ಉಪಾಧ್ಯಕ್ಷ-ಚೇತನ್ ಕುಮಾರ್ ಕೋಡಿಬೈಲು,ಪ್ರಧಾನ ಕಾರ್ಯದರ್ಶಿ-ಕೀರ್ತನ್ ಕೋಡಿಬೈಲು

ಸವಣೂರು : ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ಮಹಾಸಭೆ ಹಾಗೂ 2023-24ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಯುವಕ ಮಂಡಲದ ಯುವ ಸಭಾಭವನದಲ್ಲಿ ಯುವಕ ಮಂಡಲದ ಅಧ್ಯಕ್ಷ ಪ್ರಕಾಶ್ ಮಾಲೆತ್ತಾರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ 2022-23ನೇ ಸಾಲಿನ ವಾರ್ಷಿಕ ವರದಿಯನ್ನು ಸಂಘದ ಕಾರ್ಯದರ್ಶಿ ಜಿತಾಕ್ಷ ಜಿ. ಅವರು ಸಭೆಯ ಮುಂದಿಟ್ಟರು.

ಸಭೆಯಲ್ಲಿ 2023-24ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಸಾಲಿಗೆ ಅಧ್ಯಕ್ಷರಾಗಿ ಜಿತಾಕ್ಷ ಜಿ.,ಉಪಾಧ್ಯಕ್ಷರಾಗಿ ಚೇತನ್ ಕುಮಾರ್ ಕೋಡಿಬೈಲು,ಪ್ರಧಾನ ಕಾರ್ಯದರ್ಶಿಯಾಗಿ ಕೀರ್ತನ್ ಕೋಡಿಬೈಲು,ಕೋಶಾಧಿಕಾರಿಯಾಗಿ ಹಿತೇಶ್ ಮೆದು,ಕ್ರೀಡಾಕಾರ್ಯದರ್ಶಿಯಾಗಿ ವಿನಯ್ ನಾಲ್ಗುತ್ತು,ಸಂಘಟನಾ ಕಾರ್ಯದರ್ಶಿಯಾಗಿ ದಯಾನಂದ ಮೆದು,ಜತೆ ಕಾರ್ಯದರ್ಶಿಯಾಗಿ ತೇಜಸ್ ಕೆ.,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಂತೋಷ್ ಕೆ.ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ಗಿರಿಶಂಕರ ಸುಲಾಯ,ದಿನೇಶ್ ಮೆದು,ಸುರೇಶ್ ರೈ ಸೂಡಿಮುಳ್ಳು ,ತಾರಾನಾಥ ಕಾಯರ್ಗ,ದಿವಾಕರ ಬಸ್ತಿ,ಸಚಿನ್ ,ಮಹೇಶ್ ಕೆ.ಸವಣೂರು,ದಯಾನಂದ ಮೆದು ಮೊದಲಾದವರಿದ್ದರು.

LEAVE A REPLY

Please enter your comment!
Please enter your name here