ಬಡಗನ್ನೂರುಃ ಶ್ರೀ ನಾಗದೇವರು, ಶ್ರೀ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ದೈವಸ್ಥಾನ ಕುಕ್ಕಾಜೆ ಬಡಗನ್ನೂರು ಇದರ ವಾರ್ಷಿಕ ನೇಮೋತ್ಸವವು ಮಾ.27 ಮತ್ತು 28 ರಂದು ಬ್ರಹಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ವೇಧಮೂರ್ತಿ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆಯಿತು.
ಮಾ.27 ರಂದು ಬೆಳಗ್ಗೆ ಗಂ 9 ಕ್ಕೆ ಗಣಪತಿ ಹೋಮ, ನವಕ ಕಲಶಾಭಿಷೇಕ, ನಾಗದೇವರಿಗೆ ತಂಬಿಲ ಸೇವೆ, ರಾತ್ರಿ ಗಂ 8 ಕ್ಕೆ ಶ್ರೀ ದೈವಗಳ ಭಂಡಾರ ತೆಗೆಯುವುದು, 8.30 ಕ್ಕೆ ತೊಡಂಙಲ್ ನಂತರ ಅನ್ನಸಂತರ್ಪಣೆ ನಡೆಯಿತು.
ಮಾ.28 ರಂದು ಬೆಳಗ್ಗೆ ಶ್ರೀ ರಕ್ತೇಶ್ವರಿ ದೈವದ ನೇಮ, ಪ್ರಸಾದ ವಿತರಣೆ, ಬಳಿಕ ಪ್ರಸಾದ ಭೋಜನ ನಡೆಯಿತು ಅಪರಾಹ್ನ , ಶ್ರೀ ಗುಳಿಗ ದೈವದ ನೇಮ, ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಪಾಟಾಳಿ ಅಣಿಲೆ, ಕಾರ್ಯದರ್ಶಿ ಉದಯ ಕುಮಾರ್ ಎಸ್, ಗೌರವ ಸಲಹೆಗಾರರಾದ ಗಣೇಶ್ ರೈ ಮುಳಿಪಡ್ಪು, ದೇವದಾಸ್ ರೈ ಕರ್ಪುಡಿಕಾನ, ದಾಮೋದರ ಮಣಿಯಾಣಿ ಕುಳದಪಾರೆ, ಉಪಾಧ್ಯಕ್ಷ ಗಣೇಶ ರೈ ಬಡಕ್ಕಾಯೂರು ಗುತ್ತು, ಕೋಶಾಧಿಕಾರಿ ಪ್ರಜ್ವಲ್ ಎ, ಸದಸ್ಯರಾದ ದಿನೇಶ್ ಪಾಟಾಳಿ, ಇಂದಿರಾವತಿ, ಎನ್, ಬಾಬು ಎಂ, ನಾರಾಯಣ ನಾಯ್ಕ ಅಣಿಲೆ, ರವಿರಾಜ ಎಸ್. ಎಂ.ಕುಕ್ಕಾಜೆ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.