ಬಡಗನ್ನೂರು: ಆಲಂತಡ್ಕ ಶ್ರೀ ವನಶಾಸ್ತಾರ ದೇವಸ್ಥಾನದ ಪ್ರತಿಷ್ಥಾ ವಾರ್ಷಿಕೋತ್ಸವ ಅಂಗವಾಗಿ ಗಣಪತಿ ಹೋಮ, ಶ್ರೀ ವನಶಾಸ್ತಾವು ಪೂಜೆ, ನಾಗ ದೇವರಿಗೆ ತಂಬಿಲ ಸೇವೆ ಮತ್ತು ಗುಳಿಗ ತಂಬಿಲ ಸೇವೆ ಮಾ.29 ರಂದು ಅಲಂತಡ್ಕ ವನಶಾಸ್ತಾವು ಸನ್ನಿಧಿಯಲ್ಲಿ ನಡೆಯಿತು.
ಮಾ.29 ರಂದು ಬೆಳಗ್ಗೆ ಗಣಪತಿ ಹೋಮ ತಂಬಿಲ ಸೇವೆ, ಬಳಿಕ ಭಜನಾ ಕಾರ್ಯಕ್ರಮ ನಡೆಯಿತು. ಭಜನಾ ಕಾರ್ಯಕ್ರಮವನ್ನು ವಿನಾಯಕ ಭಟ್ ನೂಚಿಲೋಡು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು.
ಶ್ರೀ ವನಶಾಸ್ತಾವು ಭಜನಾ ತಂಡದವರಿಂದ ಮಕ್ಕಳ ಕುಣಿತ ಭಜನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಭಾಸ್ ರೈ ಬೆಳ್ಳಿಪ್ಪಾಡಿ, ಸಮಿತಿ ಸದಸ್ಯರಾದ ವಿನಯ ಭಟ್ ನೂಚಿಲೋಡು, ಓಡ್ಯಪ್ಪ ಗೌಡ ಅಲಂತಡ್ಕ, ಪದ್ಮಯ್ಯ ಗೌಡ, ಜನಾರ್ದನ ಗೌಡ ಅಲಂತಡ್ಕ, ಕುಶಾಲಪ್ಪ ಗೌಡ ಅಲಂತಡ್ಕ, ಸುಂದರ ನಾಯ್ಕ ನೂಚಿಲೋಡು, ಚಂದ್ರಾವತಿ ಕೇಶವಗೌಡ ಅಲಂತಡ್ಕ, ಪುಷ್ಪಲತ ದೇವಪ್ಪ ಗೌಡ ಅಲಂತಡ್ಕ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.