ಕುಂಬ್ರ ಕೆಪಿಎಸ್ ಪ್ರೌಢಶಾಲಾ ವಿಭಾಗದ ಸಹಶಿಕ್ಷಕಿ ಶಾರದಾ ಕೆ. ನಿವೃತ್ತಿ

0

ಪುತ್ತೂರು: ಕುಂಬ್ರ ಕೆಪಿಎಸ್ ಪ್ರೌಢಶಾಲಾ ವಿಭಾಗದ ಸಹಶಿಕ್ಷಕಿ ಶಾರದಾ ಕೆ.ರವರು ಮಾ.31ರಂದು ಕರ್ತವ್ಯದಿಂದ ನಿವೃತ್ತಿ ಹೊಂದಲಿದ್ದಾರೆ. 1990ರಲ್ಲಿ ಸಾಜ ಕಿ.ಪ್ರಾ.ಶಾಲೆಯಲ್ಲಿ ಕರ್ತವ್ಯಕ್ಕೆ ಸೇರಿದ ಇವರು ಬಡಗನ್ನೂರು ಕೊಯಿಲ, ಇರ್ದೆ-ಉಪ್ಪಳಿಗೆ, ಗುಮ್ಮಟೆಗದ್ದೆ, ಕೆಮ್ಮಾರ ಉ.ಹಿ.ಪ್ರಾ.ಶಾಲೆ ಹಾಗೂ ಪುತ್ತೂರು ಬಿಆರ್‌ಸಿ ಕೇಂದ್ರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸಿ 2014ರಲ್ಲಿ ಕುಂಬ್ರ ಕೆಪಿಎಸ್ ಶಾಲೆಗೆ ಸಹಶಿಕ್ಷಕಿಯಾಗಿ ಭಡ್ತಿಗೊಂಡು ಒಟ್ಟು 33 ವರ್ಷ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದುತ್ತಿದ್ದಾರೆ. ಇವರು ಪತಿ ಸತ್ಯನಾರಾಯಣ ಭಟ್‌ರವರೊಂದಿಗೆ ಮರೀಲ್ ಆರಾಧ್ಯ ಲೇಔಟ್‌ನ ಸಿರಿಕೃಪದಲ್ಲಿ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here