ಮುರುಳ್ಯ: ಶಿರಾಡಿ, ಕೊಡಮಣಿತ್ತಾಯ ದೈವಸ್ಥಾನದ ವಾರ್ಷಿಕ ನೇಮೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಸಂಭ್ರಮ

0

ಪುತ್ತೂರು: ಎಣ್ಮೂರು ಮಲ್ಯತ್ತರು ಮುರುಳ್ಯ ಶಿರಾಡಿ ದೈವ ಮತ್ತು ಕೊಡಮಣಿತ್ತಾಯ ದೈವಸ್ಥಾನದ ವಾರ್ಷಿಕ ನೇಮೋತ್ಸವದಲ್ಲಿ ದರ್ಬೆ ಮೇಘ ಕಲಾ ಆರ್ಟ್ಸ್ ಮತ್ತು ಮೇಘ ಡಾನ್ಸ್ ಸ್ಟುಡಿಯೋ, ಹರೀಶ್‌ ಕುಮಾರ್‌ ಪಿ ಪಡುಮಲೆ ಪ್ರಾಯೋಜಕತ್ವದಲ್ಲಿ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ನಾಗವಲ್ಲಿ ಖ್ಯಾತಿಯ ನಕ್ಷತ್ರ ಕಲಾತಂಡ ದೇವಿನಗರ ಆಲಂಕಾರು, ರಾಜ್ಯಪ್ರಶಸ್ತಿ ವಿಜೇತ ಮುರಳಿ ಬ್ರದರ್ಸ್‌ ಮತ್ತು ಸಂಗಮ್‌ ಬ್ರದರ್ಸ್‌ ಪುತ್ತೂರು, ಅಭಿನವ ಡ್ಯಾನ್ಸ್‌ ಅಕಾಡೆಮಿ ಪೆರ್ನೆ ತಂಡಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬಳಿಕ ಕಾರ್ಯಕ್ರಮ ನೀಡಿದ ಸಾಂಸ್ಕೃತಿಕ ಕಲಾತಂಡದ ಪ್ರಮುಖರನ್ನು ದೈವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ತದನಂತರ ಆರ್.ಪಿ ಕ್ರಿಯೇಶನ್‌ ಪಂಬರು ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆದು ಬಳಿಕ ದೈವಗಳ ನೇಮೋತ್ಸವ ನಡೆಯಿತು.

ರಾಜ್ಯಪ್ರಶಸ್ತಿ ವಿಜೇತ ಪದ್ಮರಾಜ್‌ ಬಿ.ಸಿ ಚಾರ್ವಾಕ ಕಾರ್ಯಕ್ರಮ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here