ವಿದ್ಯಾರ್ಥಿಗಳ ಭವಿಷ್ಯದ ಅಕ್ಷಯ ಪಾತ್ರೆ ಈ ಅಕ್ಷಯ ಕಾಲೇಜು

0

ಉದ್ಯೋಗ ಪೂರಕ ಕೋರ್ಸ್‌ಗಳು | ಹಲವು ಪ್ರಥಮಗಳ ಸರದಾರ | ಪ್ರಥಮ ಬ್ಯಾಚ್‌ನಲ್ಲಿಯೇ ರ್‍ಯಾಂಕ್

ಪುತ್ತೂರು: ವಿದ್ಯಾರ್ಥಿಗಳಿಗೆ ತಮ್ಮ ಪರೀಕ್ಷಾ ಫಲಿತಾಂಶ ಬಂದಿತೆಂದರೆ ಖುಷಿಯೊಡನೆ ಗೊಂದಲವೂ ಮನೆಮಾಡುತ್ತಿದ್ದು ತಮ್ಮ ಮುಂದಿನ ಆಯ್ಕೆಯ ಬಗೆಗಿನ ಭಯ ಹಾಗೂ ಸೂಕ್ತವಾದ ಮಾರ್ಗದರ್ಶನದ ಕೊರತೆ ಅವರನ್ನು ಮುಂದೇನು?' ಎಂಬಂತೆ ಚಿಂತೆಗೀಡು ಮಾಡುತ್ತದೆ. ನೂರಾರು ವೃತ್ತಿಪರ ಕೋರ್ಸ್‌ಗಳನ್ನು ಆಯ್ಕೆ ಮಾಡುವ ಸವಾಲು ವಿದ್ಯಾರ್ಥಿಗಳ ಹಾಗೂ ಅವರ ಪೋಷಕರ ಮುಂದಿದೆ. ಯಾವ ಕೋರ್ಸನ್ನು ಆಯ್ದುಕೊಳ್ಳಬಹುದು.?, ಯಾವ ಕಾಲೇಜಿಗೆ ಸೇರಬೇಕು.? ಹೀಗೆ ಹತ್ತಾರು ಪ್ರಶ್ನೆಗಳು ಉದ್ಭವಿಸುತ್ತವೆ. ಹಿಂದೊಂದು ಕಾಲವಿತ್ತು, ಉತ್ತಮ ಶಿಕ್ಷಣ ಪಡೆಯಬೇಕಾದರೆ ವಿದೇಶಕ್ಕೋ, ಮಹಾನಗರಕ್ಕೋ ಹೋಗಬೇಕಿತ್ತು. ಆದರೆ ಈಗ ಗ್ರಾಮೀಣ ಭಾಗದಲ್ಲೇ ಗುಣಮಟ್ಟದ ಜತೆಗೆ ಭವಿಷ್ಯದಲ್ಲಿ ಉದ್ಯೋಗ-ಉದ್ಯಮಕ್ಕೆ ಪೂರಕವಾದ ಶಿಕ್ಷಣ ದೊರಕುತ್ತಿದ್ದು, ಪುತ್ತೂರಿನ ಅಕ್ಷಯ ಕಾಲೇಜು ಗುಣಮಟ್ಟದ ಶಿಕ್ಷಣದೊಂದಿಗೆ ವೃತ್ತಿಪರ ಕೋರ್ಸ್‌ಗಳನ್ನು ನೀಡುತ್ತಿದೆ. ನಗರಭಾಗದಿಂದ ಅನತಿ ದೂರದಲ್ಲಿ ಕಲಿಕೆಗೆ ಬೇಕಾದ ಸುಂದರ ವಾತಾವರಣವಿರುವ ಸಂಪ್ಯದಲ್ಲಿರುವ ಅಕ್ಷಯ ಕಾಲೇಜು ಎಲ್ಲಾ ಮೂಲ ಸೌಕರ್ಯಗಳೊಂದಿಗೆ ಸುಸಜ್ಜಿತ ವಿದ್ಯಾಸಂಸ್ಥೆಯಾಗಿ ಬೆಳೆಯುತ್ತಿದೆ.

ಸಮರ್ಥ ನಾಯಕತ್ವದ ಸಮಾಜ ಸೇವಕ ಉದ್ಯಮಿ ಜಯಂತ ನಡುಬೈಲುರವರ ನೇತೃತ್ವದ ಆಡಳಿತ ಮಂಡಳಿ ಗುಣಮಟ್ಟದ ಶಿಕ್ಷಣದಲ್ಲಿ ರಾಜಿ ಮಾಡಿಕೊಳ್ಳದೆ ವಿದ್ಯಾರ್ಥಿಗಳಿಗೆ ಭವಿಷ್ಯದ ಜ್ಞಾನವನ್ನು ಧಾರೆ ಎರೆಯುತ್ತಿದೆ. ಸಾಮಾನ್ಯವಾಗಿ ಪಿಯುಸಿಯಾದ ಬಳಿಕ ಬಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಬಿ.ಎ., ಬಿ.ಸಿ.ಎ., ಇಂಜಿನಿಯರಿಂಗ್, ಮೆಡಿಕಲ್ ಮೊದಲಾದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು. ಆದರೆ ಈಗ ಕಾಲ ಬದಲಾಗಿದ್ದು ವೃತ್ತಿಪರ ಶಿಕ್ಷಣಗಳನ್ನು ಆಯ್ಕೆ ಮಾಡಿಕೊಂಡವನೇ ಭವಿಷ್ಯದಲ್ಲಿ ಉತ್ತಮ ಜೀವನ ಸಾಗಿಸುತ್ತಾನೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರ ಎಲ್ಲಾ ಗೊಂದಲಗಳಿಗೂ ಪುತ್ತೂರಿನ ಅಕ್ಷಯ ಕಾಲೇಜು ಉತ್ತರವನ್ನು ನೀಡುವ ಕಾರ್ಯ ಮಾಡುತ್ತಿದೆ. ಹೀಗಾಗಿ ಯಾವುದೋ ಕೋರ್ಸನ್ನು ಪಡೆದು ಭವಿಷ್ಯದಲ್ಲಿ ಸರಿಯಾದ ಉದ್ಯೋಗವಿಲ್ಲದೆ ಕೊರಗುವ ಬದಲು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಒಮ್ಮೆ ಅಕ್ಷಯ ಕಾಲೇಜಿಗೆ ಭೇಟಿ ಕೊಟ್ಟು ಕೋರ್ಸ್‌ಗಳ ಕುರಿತು ಮಾಹಿತಿ ಪಡೆದುಕೊಂಡರೆ ತಮ್ಮ ಎಲ್ಲಾ ಗೊಂದಲಗಳಿಗೂ ತೆರೆ ಬೀಳಲಿದೆ.

ಉದ್ಯೋಗ ಪೂರಕ ಕೋರ್ಸ್‌ಗಳು:
ಬಿ.ಕಾಂ.ನ ಏವಿಯೇಶನ್ ಆಂಡ್ ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್, ಬಿಎಸ್ಸಿಯ ಫ್ಯಾಶನ್ ಡಿಸೈನಿಂಗ್/ಇಂಟೀರಿಯರ್ ಡಿಸೈನಿಂಗ್, ಡೆಕೋರೇಶನ್ ಕೋರ್ಸ್, ಬಿಸಿಎಯ ಡಾಟ ಆನಲಿಟಿಕ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಂಡ್ ಸೈಬರ್ ಸೆಕ್ಯೂರಿಟಿ, ಬಿಬಿಎಯ ಸಪ್ಲೈ ಚೈನ್ ಆಂಡ್ ಲಾಜಿಸ್ಟಿಕ್ ಮ್ಯಾನೇಜ್‌ಮೆಂಟ್, ಬಿಎಚ್‌ಎಸ್‌ನ ಬ್ಯಾಚುಲರ್ ಇನ್ ಹಾಸ್ಪಿಟಾಲಿಟಿ ಸೈನ್ಸ್ ಕೋರ್ಸ್‌ಗಳು ಇಂದು ಜಾಗತಿಕವಾಗಿ ಹೆಚ್ಚಿನ ಅವಕಾಶವನ್ನು ಕಲ್ಪಿಸಿ ಎಲ್ಲರ ಗಮನ ಸೆಳೆಯುತ್ತಿದೆ. ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಈ ಕುರಿತು ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾಹಿತಿಯ ಕೊರತೆಯೂ ಕಂಡುಬರುತ್ತಿದೆ. ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಕೊಡಗು ಹೀಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉದ್ಯೋಗ ಪೂರಕ ಕೋರ್ಸ್‌ಗಳನ್ನು ಹೊಂದಿರುವ ಮೊದಲ ಮತ್ತು ಏಕೈಕ ಕಾಲೇಜು ಎಂಬ ಹೆಗ್ಗಳಿಕೆಯನ್ನೂ ಅಕ್ಷಯ ಕಾಲೇಜು ಪಡೆದುಕೊಂಡಿದೆ. ಜಿಲ್ಲೆಯಲ್ಲಿಯೇ ಗುಣಮಟ್ಟ ಆಧಾರಿತ ಶಿಕ್ಷಣ ನೀಡುವ ಸಂಸ್ಥೆ ಇದಾಗಿದ್ದು ಜಿಲ್ಲೆ, ಹೊರಜಿಲ್ಲೆ, ಹೊರ ರಾಜ್ಯಗಳಿಂದ ನೂರಾರು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿರುವುದು ಇದಕ್ಕೆ ನಿದರ್ಶನ.

ಉತ್ತಮ ಭವಿಷ್ಯಕ್ಕೆ ಅಕ್ಷಯ ಕಾಲೇಜು:
ಭವಿಷ್ಯತ್ತಿನ ಸುಂದರ ಬದುಕಿಗೆ ವಿದ್ಯಾರ್ಥಿಗಳಿಗೆ ಅಕ್ಷಯ ಕಾಲೇಜು ಅತ್ಯುತ್ತಮ ಆಯ್ಕೆಯಾಗಿದ್ದು, ಬಿ.ಕಾಂ.(ಏವಿಯೇಶನ್ ಆಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್) ಪದವಿಯ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ, ಕನ್ನಡ ಮಾಧ್ಯಮದಿಂದ ಬಂದ ವಿದ್ಯಾರ್ಥಿಗಳಿಗೆ ಶುಲ್ಕ ರಹಿತ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನೂ ನೀಡುತ್ತಿದೆ. ವಿಶ್ವವಿದ್ಯಾನಿಲಯದಿಂದ ಹಲವು ಪ್ರಥಮ ರ್‍ಯಾಂಕ್‌ಗಳನ್ನು ಪಡೆದಿರುವ ಅಕ್ಷಯ ಕಾಲೇಜು ಶೈಕ್ಷಣಿಕ ಬದಲಾವಣೆಗೆ ಅನುಸಾರವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ವೃತ್ತಿಪರ ಶಿಕ್ಷಣ ಪಡೆಯಲು ಅವಕಾಶವಾಗುವಂತೆ ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಯೊಂದಿಗೆ ಪ್ರಾರಂಭವಾದ ಪುತ್ತೂರಿನ ಪ್ರಪ್ರಥಮ ಡಿಸೈನಿಂಗ್ ಕಾಲೇಜಾಗಿದ್ದು, ನುರಿತ ಶಿಕ್ಷಕ ವೃಂದದೊಡನೆ ಪುತ್ತೂರಿನ ಸಂಪ್ಯದಲ್ಲಿ ಅತ್ಯಂತ ಆಕರ್ಷಕ ಮತ್ತು ಸುಸಜ್ಜಿತ ಕ್ಯಾಂಪಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಹಲವು ಪ್ರಥಮಗಳ ಸರದಾರ:

ಪುತ್ತೂರು ನಗರ ವ್ಯಾಪ್ತಿಯಲ್ಲಿ ಎಲ್ಲಾ ಸೌಕರ್ಯವಿರುವ ಅಕ್ಷಯ ಕಾಲೇಜಿನಲ್ಲಿ ವಿಶಾಲವಾದ ಕ್ಲಾಸ್‌ರೂಮ್, ಉತ್ತಮ ಕ್ಯಾಂಪಸ್ ಅಕ್ಷಯ ಸಂಸ್ಥೆಯ ವಿಶೇಷತೆಗಳಲ್ಲೊಂದಾಗಿದೆ. ದೂರದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯವೂ ಇರುತ್ತದೆ. ವಿಶ್ವವಿದ್ಯಾಲಯದಿಂದ ಸತತ ರ್‍ಯಾಂಕ್ ಪಡೆದುಕೊಂಡ ಪುತ್ತೂರಿನ ಪ್ರಥಮ ಡಿಸೈನ್ ಕಾಲೇಜು ಎಂಬ ಹೆಗ್ಗಳಿಕೆಯೂ ಇರುತ್ತದೆ. ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಶೇಷ ತರಬೇತಿಯನ್ನೂ ಈ ಸಂಸ್ಥೆ ನೀಡುತ್ತಿದೆ. ಅನುಭವವಿರುವ ಅಧ್ಯಾಪಕ ವೃಂದ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ದುಡಿಯುತ್ತಿದ್ದು, ಪಠ್ಯದ ಯಾವುದೇ ಗೊಂದಲಗಳಿಗೂ ಸಮರ್ಥ ಉತ್ತರ ನೀಡುವ ಸಾಮರ್ಥ್ಯವನ್ನೂ ಮೈಗೂಡಿಸಿಕೊಂಡವರಾಗಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕೌಶಲ್ಯಭರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇಲ್ಲಿ ಇತರೆ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ನೀಡಲಾಗುತ್ತಿದೆ.

ಸೃಜನಶೀಲ ಚಟುವಟಿಕೆಗೆ ಪ್ರೋತ್ಸಾಹ:
ಉನ್ನತ ಶ್ರೇಣಿಯಲ್ಲಿ ಅಂಕಗಳಿಸಿದ ಅಂಕ ಮತ್ತು ಸಾಂಸ್ಕೃತಿಕ, ಕ್ರೀಡಾಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಹೆಚ್ಚಿನ ವಿನಾಯತಿ ನೀಡುವ ಮೂಲಕ ಇಲ್ಲಿ ಪದವಿ ಗಳಿಸಿದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವನ್ನು ರೂಪಿಸಲು ಅವಕಾಶ ನೀಡಲಾಗುತ್ತಿದೆ. ಬಡ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಶೈಕ್ಷಣಿಕ ಸಾಲ ಸೌಲಭ್ಯಕ್ಕೆ ಸಹಕಾರ ನೀಡಲಾಗುತ್ತದೆ. ಕ್ರೀಡಾ ಚಟುವಟಿಕೆಗೆ ಇಲ್ಲಿ ನಿರಂತರ ಪ್ರೋತ್ಸಾಹ ನೀಡಲಾಗುತ್ತಿದ್ದು, ಯೋಗ ಸಾಧಕಿ ಮತ್ತು ಎನ್‌ಎಸ್‌ಎಸ್ ನಾಯಕಿ ಪ್ರಣಮ್ಯ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಚಾಂಪಿಯನ್ ಆಗಿದ್ದಲ್ಲದೆ, ವರ್ಲ್ಡ್ ರೆಕಾರ್ಡ್ ಸಾಧನೆಯ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಹಾಗೆಯೇ ಪ್ರತೀಕ್ಷಾ ರೈ ಅವರು ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು, ದೇವಿಕಾ ರಾಜ್ಯ ಡಾಡ್ಜ್ ಬಾಲ್ ತಂಡಕ್ಕೆ ಆಯ್ಕೆಯಾಗಿರುವುದು ಕಾಲೇಜಿನ ಹೆಗ್ಗಳಿಕೆಯಾಗಿದೆ. ಎನ್‌ಎಸ್‌ಎಸ್, ಸ್ಪೋರ್ಟ್ಸ್, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಪಿಯು ವಿದ್ಯಾರ್ಥಿಗಳ ಕೌಶಲ್ಯತೆಯನ್ನು ಹೆಚ್ಚಿಸಲು ಅಟೆರ್ನಸ್‌ನಂತಹ ಸ್ಪರ್ಧೆಗಳನ್ನು ಹಾಗೂ ವಿದ್ಯಾರ್ಥಿಗಳ ಮನರಂಜನೆಗಾಗಿಅಕ್ಷಯ ವೈಭವ’ಗಳಂತಹ ಕಾರ್ಯಕ್ರಮಗಳನ್ನು ನಡೆಸಿದ್ದು, ವಿವಿಧ ಸಂಸ್ಥೆ ಹಾಗೂ ಇಲಾಖೆಗಳ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳ ಅಭಿವೃದ್ಧಿಗೆ ಇತರ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಲೇ ಇರುತ್ತದೆ.


ಪ್ರಥಮ ಬ್ಯಾಚ್‌ನಲ್ಲಿಯೇ ರ್‍ಯಾಂಕ್, ವಿಫುಲ ಉದ್ಯೋಗ:
ಮಂಗಳೂರು ವಿಶ್ವವಿದ್ಯಾನಿಲಯದ ೨೦೨೨-೨೩ನೇ ಸಾಲಿನ ಫ್ಯಾಶನ್ ಡಿಸೈನಿಂಗ್ ಪದವಿ ಪರೀಕ್ಷೆಯಲ್ಲಿ ಕಾಲೇಜಿನ ಪ್ರಥಮ ಬ್ಯಾಚ್‌ನಲ್ಲೇ ವಿದ್ಯಾರ್ಥಿನಿಯರಾದ ಸ್ವರ್ಣಜ್ಯೋಸ್ನ ಎಂ ಪ್ರಥಮ ರ್‍ಯಾಂಕ್ ಹಾಗೂ ಜಸ್ಮಿತಾ ಎನ್.ಆರ್ ದ್ವಿತೀಯ ರ್‍ಯಾಂಕ್ ಗಳಿಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಜೊತೆಗೆ ಕಳೆದ ಸಾಲಿನ ಬ್ಯಾಚ್‌ನಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೂ ಉದ್ಯೋಗ ದೊರಕಿದ್ದು, ಕಾಲೇಜಿನ ಹೆಗ್ಗಳಿಕೆಯಾಗಿದೆ.
ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಹಾಗೂ ಆಧುನೀಕರಣದ ಪ್ರಭಾವದಿಂದ ವಿಶ್ವದಾದ್ಯಂತ ಸಮರ್ಪಕವಾಗಿ ಎದುರಿಸಲು ವೃತ್ತಿಪರ ಶಿಕ್ಷಣ ಅಗತ್ಯವಾಗಿದೆ. ಅದರ ಕೊರತೆ ಗ್ರಾಮೀಣ ಪ್ರದೇಶದಲ್ಲಿ ಇರುವುದನ್ನು ಮನಗಂಡು, ಈ ಕೊರತೆಯನ್ನು ನೀಗಿಸುವುದರಲ್ಲಿ ಪುಟ್ಟ ಹೆಜ್ಜೆಯನ್ನಿಟ್ಟಿದೆ. ವಿದ್ಯಾರ್ಥಿಗಳಲ್ಲಿ ಸಾಧಿಸಬೇಕೆನ್ನುವ ಆತ್ಮವಿಶ್ವಾಸ ಹಾಗೂ ಛಲವಿರಬೇಕು. ಸ್ವಾವಲಂಭಿಯಾಗಿ ಬದುಕಬಲ್ಲೆ ಎನ್ನುವ ಆಶಯದೊಂದಿಗೆ ಅಂತಹ ವಿದ್ಯಾರ್ಥಿಗಳನ್ನು ಸ್ವತಂತ್ರ ವ್ಯಕ್ತಿಯನ್ನಾಗಿ ಸಮಾಜದಲ್ಲಿ ಬಾಳಿ ಬದುಕು ರೂಪಿಸಲು ಸಾಧ್ಯವಿದೆ ಎಂಬುದೇ ಈ ಸಂಸ್ಥೆಯ ಮುಖ್ಯ ಉದ್ಧೇಶವಾಗಿದೆ.
ಸಂಸ್ಥೆಯನ್ನು ಚೇರ್‌ಮ್ಯಾನ್ ಜಯಂತ್ ನಡುಬೈಲುರವರು ಮುನ್ನೆಡೆಸುತ್ತಿದ್ದು, ವ್ಯವಸ್ಥಾಪಕಿ ನಿರ್ದೇಶಕಿಯಾಗಿ ಶ್ರೀಮತಿ ಕಲಾವತಿ ಜಯಂತ್, ಪ್ರಾಂಶುಪಾಲರಾಗಿ ಸಂಪತ್ ಕೆ.ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ.ರವರೊಂದಿಗೆ ನುರಿತ ಉಪನ್ಯಾಸಕ ವೃಂದ ಹಾಗೂ ಆಡಳಿತ ಸಿಬ್ಬಂದಿ ವೃಂದ ಸಂಸ್ಥೆಯ ಯಶಸ್ಸಿನತ್ತ ಕೈಜೋಡಿಸುತ್ತಿದ್ದಾರೆ.

ಎ.12:ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ
ದಿಕ್ಸೂಚಿ ಮಾರ್ಗದರ್ಶಿ..
ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗಾಗಿ ಸಂಸ್ಥೆಯು ದಿಕ್ಸೂಚಿ ಹೆಸರಿನಲ್ಲಿ ಮಾರ್ಗದರ್ಶಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ವಿಜಯಾ ಬ್ಯಾಂಕಿನ ನಿವೃತ್ತ ಪ್ರಬಂಧಕರಾದ ಜಯರಾಮ್ ರೈ ನುಳಿಯಾರ್, ಪ್ರೇರಕ ಭಾಷಣಗಾರ, ವೃತ್ತಿ ಸಲಹೆಗಾರ, ಪೋಷಕರ ತರಬೇತುದಾರಾಗಿರುವ ಮೊಹಮದ್ ರಫೀಕ್, ಪುತ್ತೂರಿನ ಸಮಾಜ ಕಲ್ಯಾಣ ಇಲಾಖೆಯ ಡಾಟ ಎಂಟ್ರಿ ವಿಭಾಗದ ರವಿರವರು ಭಾಗವಹಿಸಲಿದ್ದಾರೆ. ಶೈಕ್ಷಣಿಕ ಸಾಲ ಸೌಲಭ್ಯ, ವಿವಿಧ ವಿದ್ಯಾರ್ಥಿವೇತನ, ವಿವಿಧ ಅತ್ಯುತ್ತಮ ವೃತ್ತಿಪರ ಕೋರ್ಸುಗಳ ಮಾಹಿತಿ, ಉತ್ತಮ ಭವಿಷ್ಯಕ್ಕಾಗಿ ಸಮಗ್ರ ಮಾಹಿತಿ ಮುಂತಾದುವುಗಳು ಕಾರ್ಯಾಗಾರದಲ್ಲಿ ಒಳಗೊಂಡಿದೆ. ವಿದ್ಯಾರ್ಥಿಗಳಿಗೆ ಪ್ರವೇಶವು ಉಚಿತವಾಗಿದ್ದು ಎ.೧೦ ರಂದು ಭಾಗವಹಿಸುವ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿದೆ.

ವೃತ್ತಿ ಆಧಾರಿತ ಕೋರ್ಸ್‌ಗಳು..
-ಬಿಎಸ್ಸಿ ಫ್ಯಾಶನ್ ಡಿಸೈನಿಂಗ್ ಕೋರ್ಸ್:

ಶೇ.100 ಉದ್ಯೋಗದ ಭರವಸೆಯನ್ನು ಒದಗಿಸುತ್ತಿದ್ದು, ಫ್ಯಾಶನ್ ಮತ್ತು ನಮ್ಮ ಜೀವನ ಶೈಲಿ ಒಂದೇ ನಾಣ್ಯದ ಎರಡು ಮುಖಗಳಂತಿದೆ. ಫ್ಯಾಶನ್ ಡಿಸೈನರ್‌ಗಳಿಗೆ ವಿಫುಲ ಅವಕಾಶಗಳಿದ್ದು, ಮಾಡೆಲಿಂಗ್, ಸಿನಿಮಾರಂಗ, ವಸ್ತ್ರವಿನ್ಯಾಸ, ರೀಟೇಲ್ ಬಯರ್, ರಿಟೇಲ್ ಮ್ಯಾನೇಜರ್, ಮರ್ಚಂಡೈಸರ್‌ಗಳಿಗೆ ದೇಶ ವಿದೇಶಗಳ ಕಂಪನಿಗಳಲ್ಲಿ ತಿಂಗಳಿಗೆ ಲಕ್ಷಕ್ಕಿಂತಲೂ ಅಧಿಕ ಸಂಬಳದ ಉದ್ಯೋಗಾವಕಾಶಗಳಿವೆ.


-ಬಿಎಸ್ಸಿ ಇಂಟೀರಿಯರ್ ಡಿಸೈನಿಂಗ್ ಕೋರ್ಸ್:
ಹೊಸ ವೃತ್ತಿ ಜೀವನದ ಅವಕಾಶಗಳನ್ನು ಗಳಿಸುತ್ತಿದ್ದು ಇಂದಿನ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಳಾಂಗಣ ವಿನ್ಯಾಸಗಾರರಿಗೆ ಹಲವು ಉದ್ಯೋಗಗಳಿದ್ದು, ವಾಸ್ತುಶಿಲ್ಪ ಸಂಸ್ಥೆಗಳು,ಪೀಠೋಪಕರಣ ಕಂಪನಿಗಳು, ನಿರ್ಮಾಣ ಸಂಸ್ಥೆಗಳು,ಹೋಟೇಲ್, ರೆಸಾರ್ಟ್, ಕಾರ್ಪೊರೇಟ್ ವಲಯ, ಸ್ವಯಂ ಉದ್ಯೋಗ ಹೀಗೆ ಬಹುತೇಕ ಎಲ್ಲ ಕ್ಷೇತ್ರ ಮತ್ತು ಉದ್ಯೋಗ ಕ್ಷೇತ್ರಗಳಿಗೆ ಪ್ರತಿಭಾನ್ವಿತ ಇಂಟೀರಿಯರ್ ಡಿಸೈನರ್‌ಗಳ ಅವಶ್ಯಕತೆಯಿದೆ.


-ಬಿ.ಕಾಂ ವಿಥ್ ಏವಿಯೇಶನ್ ಹಾಸ್ಪಿಟಾಲಿಟಿ ಮ್ಯಾನೇಜ್‌ಮೇಂಟ್:
ಏರ್‌ಪೋರ್ಟ್‌ನಲ್ಲಿ ಗ್ರೌಂಡ್ ಲೆವೆಲ್ ಸ್ಟಾಫ್, ಕ್ರೂಝ್ ಮೆಂಬರ್ ಹುದ್ದೆಗಳ ಜೊತೆಗೆ, ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್ ಮೂಲಕ ೩ ಸ್ಟಾರ್, ೫ಸ್ಟಾರ್ ಹೋಟೆಲ್‌ಗಳಲ್ಲಿ ಉತ್ತಮ ಉದ್ಯೋಗ ಗಳಿಸಬಹುದಾಗಿದೆ.


-ಬಿ.ಬಿ.ಎ ಸಪ್ಲೈ ಚೈನ್ ಲಾಜಿಸ್ಟಿಕ್ ಮ್ಯಾನೇಜ್ಮೆಂಟ್:
ಟ್ರಾನ್ಸ್‌ಪೋರ್ಟ್ ಸೆಕ್ಟರ್, ಶಿಪ್ಪಿಂಗ್ ಕಂಪೆನಿ, ಟೂರಿಸಂ ಇತ್ಯಾದಿ ಕ್ಷೇತ್ರದಲ್ಲಿ ಬಹುತೇಕ ಬೇಡಿಕೆಗಳನ್ನು ಹೊಂದಿದೆ.


-ಬಿ.ಎಸ್ಸಿ ಇನ್ ಹಾಸ್ಪಿಟಾಲಿಟಿ ಸಯನ್ಸ್:
ಕ್ಯಾಬಿನ್ ಕ್ರೂ, ಏರ್‌ಲೈನ್ಸ್, ಟೂರಿಸಂ, ಪಂಚತಾರಾ ಹೋಟೇಲ್ ಮೊದಲಾದ ಕ್ಷೇತ್ರಗಳಲ್ಲಿ ಫೀಲ್ಡ್ ಮ್ಯಾನೇಜರ್ ಮೊದಲಾದ ಉನ್ನತ ಉದ್ಯೋಗಗಳನ್ನು ಗಳಿಸಬಹುದಾಗಿದೆ.


-ಬಿಸಿಎ ವಿಥ್ ಆರ್ಟಿಫಿಷಲ್ ಇಂಟಲಿಜೆನ್ಸಿ ಕೋರ್ಸ್:
ವಿದ್ಯಾರ್ಥಿಗಳು ಸಾಫ್ಟ್‌ವೇರ್ ಕಂಪೆನಿ, ಮಾರ್ಕೆಟಿಂಗ್, ಇ-ಕಾಮರ್ಸ್ ಮತ್ತು ಸಾಫ್ಟ್‌ವೇರ್ ಡೆವಲಪ್ಪರ್ ಮುಂತಾದ ಉದ್ಯೋಗಗಳನ್ನು ಹೊಂದಬಹುದು.

ಹೆಚ್ಚಿನ ಮಾಹಿತಿಗಾಗಿ..
ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು(9141160704), ಆಡಳಿತಾಧಿಕಾರಿ(8088381678), ಕಛೇರಿ 08251-200030, 8050108510 ಅಲ್ಲದೆ www.akshayacollegeputtur.com http://www.akshayacollegeputtur.com ಸಂಪರ್ಕಿಸಿ.

LEAVE A REPLY

Please enter your comment!
Please enter your name here