ರಾಮಕುಂಜ: ಕೆಮ್ಮಾರ ಮಸೀದಿ ಬಳಿ ನಿವಾಸಿ, ಅಹಮದ್ ಹಾಜಿ ಮುಸ್ಲಿಯಾರ್ ಆತೂರು (80ವ.)ರವರು ಕೆಲ ದಿನಗಳ ಆನಾರೋಗ್ಯದಿಂದ ಎ.10ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಅಹಮದ್ ಹಾಜಿ ಮುಸ್ಲಿಯಾರ್‌ರವರು ಕೆಮ್ಮಾರ, ಆತೂರು, ಕೊಕ್ಕಡ ಮಸೀದಿಯಲ್ಲಿ ಖತೀಬ್ ಆಗಿ ಸೇವೆ ಸಲ್ಲಿಸಿ ಬಳಿಕ ಮುಂಬೈಯ ಡೋಂಗ್ರಿಯ ಮಸೀದಿಯಲ್ಲಿ ಸುಮಾರು 25 ವರ್ಷಗಳ ಕಾಲ ಖತೀಬ್ ಆಗಿ ಸೇವೆ ಸಲ್ಲಿಸಿ ಕೆಲ ವರ್ಷಗಳ ಹಿಂದೆ ನಿವೃತ್ತಿ ಹೊಂದಿ ಮನೆಯಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದರು. ಖ್ಯಾತ ಧಾರ್ಮಿಕ ಪಂಡಿತ ದಿವಂಗತ ಡಾ. ಶಾಹ್ ಮುಸ್ಲಿಯಾರ್‌ರವರ ಸಹೋದರರಾಗಿರುವ ಅಹಮದ್ ಹಾಜಿ ಮುಸ್ಲಿಯಾರ್‌ರವರು ಅತ್ಯಂತ ಸರಳ ಮತ್ತು ಸೌಮ್ಯ ಸ್ವಭಾವದ ವ್ಯಕ್ತಿತ್ವ ಹೊಂದಿ, ಮೋನು ಮುಸ್ಲಿಯಾರ್ ಎಂದೇ ಚಿರಪರಿಚಿತರಾಗಿದ್ದರು.
ಅಹಮದ್ ಹಾಜಿ ಮುಸ್ಲಿಯಾರ್‌ರವರು ಪತ್ನಿ ಜೊಹರಾಬಿ, ಪುತ್ರಿಯರಾದ ಅಸೀನ, ಹಬೀಬ, ಅನೀದ, ಹಕೀಮ, ಪುತ್ರರಾದ ಅಬ್ದುಲ್ಲ ಶರೀಫ್, ಕಮರುದ್ದೀನ್, ಜಾಫರ್ ಸಾದಿಕ್, ಅಬ್ದುಲ್ ಲತೀಫ್, ಮುಸ್ತಫಾರನ್ನು ಅಗಲಿದ್ದಾರೆ.