ಹವ್ಯಾಸಿ ಯಕ್ಷಗಾನ ಕಲಾವಿದ ವಾಸಪ್ಪ ಗೌಡ ನಾಲ್ಗುತ್ತು ನಿಧನ

0

ನೆಲ್ಯಾಡಿ: ಕಡಬ ತಾಲೂಕಿನ ಬಲ್ಯ ಗ್ರಾಮದ ನಾಲ್ಗುತ್ತು ಮನೆ ನಿವಾಸಿ ವಾಸಪ್ಪ ಗೌಡ(76ವ.)ರವರು ಅಲ್ಪಕಾಲದ ಅಸೌಖ್ಯದಿಂದ ಎ.4ರಂದು ಸ್ವಗೃಹದಲ್ಲಿ ನಿಧನರಾದರು.

ವಾಸಪ್ಪ ಗೌಡ ಅವರು ಬಲ್ಯ ವಿನಾಯಕ ಯಕ್ಷಗಾನ ಮಂಡಳಿಯ ಮಾಜಿ ಅಧ್ಯಕ್ಷರಾಗಿದ್ದು, ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದರು. ಯಕ್ಷಗಾನ ಮಂಡಳಿಯಲ್ಲಿ ಸಕ್ರೀಯ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರು.

ಮೃತರು ಪತ್ನಿ ಸುಶೀಲಾ, ಪುತ್ರರಾದ ಯಶೋಧರ, ಕೇಶವ, ಮಗಳು ರಾಜೀವಿ, ಅಳಿಯ ನಾರಾಯಣ ಬೊಮ್ಮಳಿಕೆ, ಸೊಸೆ ಸುನಂದ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here