ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮ ‘ಶಿವಾರ್ಪಣಂ’ ನ 7ನೇ ದಿನದ ಎ.16ರಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ ನಾರಾವಿ ಯವರು ಚಾಲನೆ ನೀಡಿದರು.
ಕೃಷ್ಣವೇಣಿ ಮುಳಿಯ, ಡಾ| ವಿಜಯ ಸರಸ್ವತಿ, ಶ್ರಿಮತಿ ಶುಭಾ ,ಡಾ| ಅನುಪಮರವಿರವರು ಓಂಕಾರ ಮತ್ತು ಶಂಖ ನಿನಾದ ಮೊಳಗಿಸಿದರು. ಸಾಂಸ್ಕೃತಿಕ ಸಮಿತಿಯ ಸದಸ್ಯರಾದ ಸುಬ್ಬಪ್ಪ ಕೈಕಂಬ, ಡಾ. ಶಶಿಧರ ಕಜೆ ಉಪಸ್ಥಿತರಿದ್ದರು.
ಬಳಿಕ ಗಾನ ಭಾರತಿ ಕಲಾಶಾಲೆ ಪುತ್ತೂರು, ವಿದುಷಿ ಪವಿತ್ರಾ ರೂಪೇಶ್, ವಿಶ್ವ ಮೋಹನ ನೃತ್ಯ ಕಲಾಶಾಲೆ ಕಡಬ, ಹಂಸ ದ್ವನಿ ಮ್ಯೂಸಿಕಲ್ ಗ್ರೂಪ್ಸ್ ಮಂಗಳೂರು, ಆರಾಧನ ನೃತ್ಯ ಕೇಂದ್ರ ಮೂಡಬಿದ್ರೆ, ಮೂಕಾಂಬಿಕ ಕಲ್ಚರಲ್ ಅಕಾಡೆಮಿ ಪುತ್ತೂರು, ಹಾಗು ಪುನೀತ್ ಆರ್ಕೆಸ್ಟ್ರಾ ಪುತ್ತೂರು ಇವರಿಂದ ಶಾಸ್ತ್ರೀಯ ಸಂಗೀತ, ಭರತನಾಟ್ಯ ಸಹಿತ ವಿವಿಧ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ನಡೆದವು.
ಪ್ರೊ. ಸುಬ್ಬಪ್ಪ ಕೈಕಂಬ ಮತ್ತು ಡಾ. ಶಶಿಧರ ಕಜೆ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಶ್ರೀಮತಿ ಲಕ್ಷ್ಮೀ ವಿ.ಜಿ ಭಟ್, ಪ್ರೊ. ವಿ.ಜಿ ಭಟ್. ಶ್ರೀ ಗೋಪಾಲಕೃಷ್ಣ, ಡಾ| ರಾಜೇಶ್ ಬೇಜ್ಜಂಗಳ ಸಹಕರಿಸಿದರು.