ಅಕ್ಷಯ ತೃತೀಯಾ : ವಿಜಿತ್ ಜ್ಯುವೆಲ್ಲರ್ಸ್ ನಲ್ಲಿ ಕಿಕ್ಕಿರಿದು ತುಂಬಿದ ಗ್ರಾಹಕರು

0

ಪುತ್ತೂರು: ಅಕ್ಷಯ ತೃತೀಯಾ ದಿನದಂದು ಚಿನ್ನ ಖರೀದಿಗೆ ಶುಭ ದಿನ ಎಂಬ‌ ನಂಬಿಕೆಯ ಹಿನ್ನೆಲೆಯಲ್ಲಿ ಏ. 22 ರಂದು ಪುತ್ತೂರಿನ ಕೋರ್ಟು ರಸ್ತೆಯಲ್ಲಿರುವ ವಿಜಿತ್ ಜ್ಯುವೆಲ್ಲರ್ಸ್ ನಲ್ಲಿ ಬೆಳಗ್ಗಿನಿಂದಲೇ ಗ್ರಾಹಕರು ಚಿನ್ನ ಖರೀದಿಗೆ ಮುಂದಾಗಿದ್ದರು. ಚಿನ್ನದ ಗುಣಮಟ್ಟ ಮತ್ತು ಅದೃಷ್ಟಶಾಲಿ ಎಂಬ ಟ್ರೇಡ್ ಮಾರ್ಕ್‌ಗೆ ಒಳಪಟ್ಟಿರುವ ಪುತ್ತೂರಿನ ವಿಜಿತ್ ಜ್ಯುವೆಲ್ಲರ್ಸ್ ಗ್ರಾಹಕರ ಮನೆ ಮಾತಾಗಿದೆ. ಹೀಗಾಗಿ ಇಲ್ಲಿ ಪ್ರತಿದಿನವೂ ಗ್ರಾಹಕರು ತುಂಬಿರುವ ದೃಶ್ಯ ಕಂಡುಬರುತ್ತದೆ. ಅಕ್ಷಯ ತೃತೀಯಾದ ಶುಭದಿನದಂದು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸುತ್ತಿರುವುದರಿಂದ ಮಳಿಗೆ ಕಿಕ್ಕಿರಿದು ತುಂಬಿದ್ದ ದೃಶ್ಯ ಕಂಡುಬಂತು.
ಮಳಿಗೆಯ ಮ್ಹಾಲಕ ಎ.‌ ಅಚ್ಚುತ ಆಚಾರ್ಯ, ವಿಜಿತ್ ಆಚಾರ್ಯ ಮತ್ತು ಮನೆಯವರು ಹಾಗೂ ಸಿಬಂದಿಗಳು ಗ್ರಾಹಕರನ್ನು ಬರಮಾಡಿಕೊಂಡರು.

LEAVE A REPLY

Please enter your comment!
Please enter your name here