ನೆಲ್ಯಾಡಿ: ಬೆಥನಿ ಅಸೆಂಬ್ಲಿ ಆಫ್ ಗಾಡ್ ಚರ್ಚ್‌ನ ನವೀಕೃತ ಕಟ್ಟಡದ ಉದ್ಘಾಟನೆಯು ಎ.20ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನರಲ್ ಪ್ರಸ್ಬಿಟರ್ ರೆ.ಜಸ್ಟಿನ್ ಜೋನ್ ಅವರು ವಹಿಸಿದ್ದರು. ಅಸೆಂಬ್ಲಿ ಅಫ್ ಗಾಡ್‌ನ ಆಲ್ ಇಂಡಿಯಾ ಸೂಪರಿಂಟೆಂಡೆಂಟ್ ಆಗಿರುವ ರೆ.ಪೋಲ್ ತಂಗಯ್ಯ ಅವರು ಕಟ್ಟಡವನ್ನು ಉದ್ಘಾಟಿಸಿ ಆಶೀರ್ವದಿಸಿದರು. ಸೌತ್ ಕೆನರಾ ಸೆಕ್ಷನ್ ಇದರ ಪ್ರಸ್ಬಿಟರ್ ಆಗಿರುವ ರೆ.ಟಿ.ಐ.ಜೋಯ್ ಸ್ವಾಗತಿಸಿದರು. ರೆ.ತೋಮಸ್ ಪಿ.ಎಂ.ವಂದಿಸಿದರು.