ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ ಕಡಬ ತಾಲೂಕು ನೆಲ್ಯಾಡಿ ವಲಯದ ಕೌಕ್ರಾಡಿ ಒಕ್ಕೂಟದ ವತಿಯಿಂದ ಅಡಿಲು ಎಂಬಲ್ಲಿ ನೂತನವಾಗಿ ಆರಂಭಗೊಂಡ “ಪ್ರಗತಿ” ಎಂಬ ಪ್ರಗತಿ ಬಂಧು ಸ್ವ ಸಹಾಯ ಸಂಘವನ್ನು ಹಿರಿಯರಾದ ಲಕ್ಷ್ಮಣ ಗೌಡರವರು ಉದ್ಘಾಟಿಸಿದರು.
ವಲಯದ ಮೇಲ್ವಿಚಾರಕ ವಿಜೇಶ್ ಜೈನ್ರವರು ಪ್ರಗತಿ ಬಂಧು ಸ್ವ ಸಹಾಯ ಸಂಘದ ನಿಯಮಗಳ ಬಗ್ಗೆ, ಯೋಜನೆಯ ಕಾರ್ಯಕ್ರಮದ ಬಗ್ಗೆ ಮಾಹಿತಿ ಮಾರ್ಗದರ್ಶನವನ್ನು ನೀಡಿದರು. ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಗೌಡರವರು ಅಧ್ಯಕ್ಷತೆ ವಹಿಸಿ, ಹೊಸ ತಂಡಕ್ಕೆ ಶುಭ ಹಾರೈಸಿದರು. ನೂತನ ಪ್ರಗತಿ ಬಂಧು ತಂಡದ ಸದಸ್ಯರಾದ ಮಮತಾ ಜಿ., ತೀರ್ಥ ಎ., ರೂಪಾಲತಾ ಕೆ.ಪಿ., ಲಾವಣ್ಯಾಕ್ಷಿ, ಶೋಭಾ, ಮೈಮುನ, ಸೇಸಪ್ಪ ಗೌಡ, ಶೋಭಾ, ರಾಮಣ್ಣ ಗೌಡ ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ನಮಿತಾ ಎಸ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ದಾಖಲಾತಿ ಸಮಿತಿ ಸದಸ್ಯೆ ಕುಮುದಾ ವಂದಿಸಿದರು.