ನರಿಮೊಗರು ಬಿಲ್ಲವ ಗ್ರಾಮ ಸಮಿತಿ ಮಹಾಸಭೆ, ಗುರುಪೂಜೆ, ಪುಸ್ತಕ ವಿತರಣೆ: ಯುವವಾಹಿನಿ ಸಂಚಲನ ಸಮಿತಿಯ ಪದಗ್ರಹಣ

0

ಪುತ್ತೂರು: ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಆಶ್ರಯದಲ್ಲಿ ಬಿಲ್ಲವ ಗ್ರಾಮ ಸಮಿತಿ ನರಿಮೊಗರು, ಬಿಲ್ಲವ ಮಹಿಳಾ ವೇದಿಕೆ ನರಿಮೊಗರು ಮತ್ತು ಯುವವಾಹಿನಿ ಗ್ರಾಮ ಸಂಚಲನಾ ಸಮಿತಿ ನರಿಮೊಗರು ವತಿಯಿಂದ ಗುರುಪೂಜೆ, ಭಜನೆ, ಸನ್ಮಾನ ಮತ್ತು ಯುವವಾಹಿನಿ ಸಂಚಲನಾ ಸಮಿತಿಯ ಪದಗ್ರಹಣ ಕಾರ್ಯಕ್ರಮ ಹಾಗೂ ವಾರ್ಷಿಕ ಮಹಾಸಭೆ ಮತ್ತು ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಏ.30 ರಂದು ಮುಕ್ವೆಯ ಲಿಂಗಪ್ಪ ಪೂಜಾರಿಯವರ ಮಣಿಕಂಠ ನಿಲಯದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ ನಾರಾಯಣ ಗುರುಗಳು ತಿಳಿಸಿದಂತೆ ಸಂಘಟನೆಯಿಂದ ಬಲಯುತರಾಗಿರಿ ಎನ್ನುವ ತತ್ವಾದರ್ಶವನ್ನು ನಮ್ಮ ಜೀವನದಲ್ಲೇ ಅಳವಡಿಸಿಕೊಳ್ಳಬೇಕು ಎಂದರು.

ದಿಕ್ಸೂಚಿ ಬಾಷಣ ಮಾಡಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ವಿದ್ಯಾನಿಧಿ ಸಂಚಾಲಕ, ವಕೀಲ ಮನೋಹರ ಎ ಆರುವಾರಗುತ್ತು ಮಾತನಾಡಿ 18ನೇ ಶತಮಾನದಲ್ಲಿ ನಮ್ಮ ಜೀವನ ಶೈಲಿ ಮತ್ತು ಸಾಮಾಜಿಕ ಸ್ಥಿತಿಗತಿಯು ಹೇಗಿತ್ತು. ಬ್ರಹ್ಮಶ್ರೀ ನಾರಾಯಣ ಗುರುಗಳ ಕಾಲಘಟ್ಟದ ನಂತರ ಪ್ರಸ್ತುತವಾಗಿ ಯಾವರೀತಿ ಇದೆ ಅದನ್ನು ನಾವು ಯಾವ ರೀತಿಯಲ್ಲಿ ಉಳಿಸಿಕೊಂಡು ಬೆಳೆಸಿಕೊಂಡು ಹೋಗಬಹುದು ಎನ್ನುವ ಬಗ್ಗೆ ತಿಳಿಸಿದರು.

ತಾಲೂಕು ಬಿಲ್ಲವ ಸಂಘದ ಕೋಶಾಧಿಕಾರಿ, ನರಿಮೊಗರು ವಲಯದ ಸಂಚಾಲಕರಾಗಿರುವ ಬಿ.ಟಿ. ಮಹೇಶ್‌ಚಂದ್ರ ಸಾಲ್ಯಾನ್ ನೂತನ ತಂಡದ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಅಧ್ಯಕ್ಷರಾಗಿ ವೇದನಾಥ ಸುವರ್ಣ, ಕಾರ್ಯದರ್ಶಿಯಾಗಿ ಚಂದ್ರಕಲಾ ಮುಕ್ವೆ, ಮಹಿಳಾ ವೇದಿಕೆ ಅಧ್ಯಕ್ಷರಾಗಿ ಜಯಲಕ್ಷ್ಮೀ ಕೂಡುರಸ್ತೆ ಆಯ್ಕೆಯಾದರು.

ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷರಾದ ಉಮೇಶ್ ಬಾಯಾರುರವರು ನರಿಮೊಗರು ಗ್ರಾಮ ಸಂಚನಾ ಸಮಿತಿಯ ನೂತನ ತಂಡವನ್ನು ಘೋಷಿಸಿ ಶುಭಹಾರೈಸಿದರು. ಸಂಚಾಲಕರಾಗಿ ಸುಜಿತ್ ಅಂಚನ್ ದೋಳ, ಸಹಸಂಚಾಲಕರಾಗಿ ಚರಣ್ ಕೂಡುರಸ್ತೆ, ಪ್ರಧಾನ ಸಂಘಟನಾ ಕಾರ್ಯದರ್ಶಿಯಾಗಿ ಹರೀಶ್ ಎಂ ಕೈಪಂಗಳದೋಳ ಆಯ್ಕೆಯಾದರು.

ಸಭಾಧ್ಯಕ್ಷತೆ ವಹಿಸಿದ ಪದ್ಮನಾಭ ಬೆದ್ರಾಳ ಮಾತನಾಡಿ ತಮ್ಮ ಅಧಿಕಾರಾವಧಿಯಲ್ಲಿ ಉತ್ತಮ ಕಾರ್ಯನಿರ್ವಹಣೆ ಮಾಡಿ ಸಂಘದ ಏಳ್ಗೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿ, ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ನರಿಮೊಗರು ಬಿಲ್ಲವ ಗ್ರಾಮ ಸಮಿತಿಯ ಕಾರ್ಯದರ್ಶಿ ಅನೂಪ್ ಕುಮಾರ್ ಎಸ್. ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಹರೀಶ್ ಎಂ. ಕೈಪಂಗಳ ದೋಳ ಲೆಕ್ಕಪತ್ರ ಮಂಡಿಸಿದರು. ಬಿಲ್ಲವ ಸಂಘದ ಪ್ರಭಾರ ಕಾರ್ಯದರ್ಶಿ ಚಿದಾನಂದ ಸುವರ್ಣ, ಗ್ರಾಮ ಸಮಿತಿ ಗೌರವ ಸಲಹೆಗಾರ ಸದಾನಂದ ಕೆ., ಕೇಶವ ಮುಕ್ವೆ , ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಚಂದ್ರಕಲಾ ಮುಕ್ವೆ, ಬಿಲ್ಲವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭವಿಷ್ ವಿ ಸುವರ್ಣ, ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಮಂದಿರದ ಕಾರ್ಯನಿರ್ವಹಣಾಧಿಕಾರಿ ಹೊನ್ನಪ್ಪ ಪೂಜಾರಿ ಕೈಂದಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಪದಾಧಿಕಾರಿಗಳು, ಸರ್ವಸದಸ್ಯರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು ಬಳಿಕ ಪ್ರಸಾದ ಭೋಜನ ನಡೆಯಿತು.

ಗೀತಿಕಾ, ಹೃತಿಕಾ, ದೀಪಿಕಾ, ವಿಥಾಲಿ, ಚಾರ್ವಿ ಪ್ರಾರ್ಥಿಸಿದರು, ಯಮುನಾ ವೀರಮಂಗಲ ಸ್ವಾಗತಿಸಿದರು, ರಂಜಿತ್, ರತನ್, ಹರೀಶ್, ಜನಾರ್ದನ್, ಲಕ್ಮೀ, ನಮಿತಾ, ರಕ್ಷಿತ್, ರಂಜಿತ್ ನಡುಗುಡ್ಡೆ, ಜೀವನ್,ದೀಕ್ಷಿತ್, ಮೋಹನ್ ಬಂದ ಅತಿಥಿಗಳನ್ನು ಹೂವು ನೀಡಿ ಶಾಲು ಹಾಕಿ ಸ್ವಾಗತಿಸಿದರು. ಪ್ರಿಯಶ್ರೀ ಕೂಡುರಸ್ತೆ ಮತ್ತು ದೀಪಿಕ ಸನ್ಮಾನ ಪತ್ರ ವಾಚಿಸಿದರು. ಸುಜಿತ್ ಅಂಚನ್ ದೋಳ ಧನ್ಯವಾದ ಸಮರ್ಪಿಸಿದರು. ಪ್ರಿಯಶ್ರೀ ವೀರಮಂಗಲ ಹಾಗೂ ಅವಿನಾಶ್ ಹಾರಾಡಿ ಕಾರ್ಯಕ್ರಮ ನಿರೂಪಿಸಿದರು.

ಅರ್ಚಕರಾದ ಜಗದೀಶ ಶಾಂತಿ ನೇತೃತ್ವದಲ್ಲಿ ಗುರುಪೂಜೆ ನಡೆಯಿತು. ಮಹಿಳಾ ವೇದಿಕೆ ವತಿಯಿಂದ ಭಜನೆ ನಡೆಯಿತು. ಗ್ರಾಮದ 92 ಸ್ವಜಾತಿ ವಿದ್ಯಾರ್ಥಿಗಳಿಗೆ ವರ್ಷಪೂರ್ತಿ ಅವಶ್ಯವಿರುವ ಪುಸ್ತಕಗಳನ್ನು ವಿತರಿಸಲಾಯಿತು.

ಸನ್ಮಾನ: ಗ್ರಾಮ ಸಮಿತಿಯ ಏಳಿಗೆಗೆ ಶ್ರಮಿಸಿದ ಹಿರಿಯರಾದ ಸದಾನಂದ ಕೆ, ಪೂವಪ್ಪ ಪೂಜಾರಿ, ಕಸ್ತೂರಿ ಮಣಿಯ, ಕರಾಟೆಯಲ್ಲಿ ರಾಷ್ಟ್ರಮಟ್ಟದ ಸಾಧನೆಯನ್ನು ಮಾಡಿ ಬ್ಲ್ಯಾಕ್‌ಬೆಲ್ಟ್ ಪಡೆದಿರುವ ಮೋನಪ್ಪ-ಭಾರತಿ ದಂಪತಿ ಪುತ್ರಿ ಕು.ದೀಕ್ಷಾ ಕರ್ಗಲ್ಲು, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕು. ಸ್ನೇಹ, ಇವರಗಳನ್ನು ಸನ್ಮಾನಿಸಿ ಗೌರವಾಭಿವಂದನೆಗಳನ್ನು ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here