ಪುತ್ತೂರು ವಕೀಲರ ಸಂಘದ ಕಚೇರಿಗೆ ಅಶೋಕ್ ರೈ ಭೇಟಿ-ಮತಯಾಚನೆ

0

ಪುತ್ತೂರು: ಪುತ್ತೂರು ಕೋರ್ಟು‌ಆವರಣದಲ್ಲಿರುವ ವಕೀಲರ ಸಂಘದ ಕಚೇರಿಗೆ ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಭೇಟಿ ನೀಡಿ ಮತಯಾಚನೆ ನಡೆಸಿದರು.

ವಕೀಲರ ಜೊತೆ ಮಾತುಕತೆ ನಡೆಸಿದ ಅಶೋಕ್ ರೈ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಕೇಳಿಕೊಂಡರು. ಈ ಸಂದರ್ಭದಲ್ಲಿ ವಕೀಲರು ಆನಾಜೆಯಲ್ಲಿರುವ ನ್ಯಾಯಾಲಯ ಸಂಕೀರ್ಣದವರೆಗೆ ಸಿಟಿ ಬಸ್ ಸೌಕರ್ಯ ಕಲ್ಪಿಸಿದರೆ ಕಕ್ಷಿದಾರರಿಗೆ ಪ್ರಯೋಜನವಾಗಲಿದೆ. ಆನಾಜೆ ಕೋರ್ಟಿಗೆ ತೆರಳುವ ರಸ್ತೆಯನ್ನು ಅಗಲೀಕರಣ ಮಾಡಬೇಕು ಮತ್ತು ಸೋಲಾರ್ ಅಳವಡಿಕೆಯ ಕುರಿತು ಚರ್ಚಿಸಿದರು. ಶಾಸಕನಾಗಿ ಆಯ್ಕೆಯಾದಲ್ಲಿ ತಮ್ಮ ಬೇಡಿಕೆಗಳ ಕಡೆ ಹೆಚ್ಚು ಒತ್ತು ನೀಡಲಾಗುವುದು ಎಂದು ಅಶೋಕ್ ರೈ ತಿಳಿಸಿ, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಈ ವೇಳೆ ಅನಿತಾ ಹೇಮನಾಥ ಶೆಟ್ಟಿ, ಕುಂಬ್ರ ದುರ್ಗಾಪ್ರಸಾದ್ ರೈ, ಭಾಸ್ಕರ ಗೌಡ ಕೋಡಿಂಬಾಳ ಸೇರಿದಂತೆ ವಕೀಲರ ಸಂಘದ ಸದಸ್ಯರು ಉಪಸ್ಥಿತರಿದ್ದರು. ಬಳಿಕ ನ್ಯಾಯಾಲಯ ಸಿಬಂದಿಗಳು, ಪುತ್ತೂರು ತಾಲೂಕು ಕಚೇರಿಯ ಸಿಬಂದಿಗಳಲ್ಲಿ‌ಮತಯಾಚನೆ‌ ನಡೆಸಿದರು.

LEAVE A REPLY

Please enter your comment!
Please enter your name here