ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಶನ್ ಪುತ್ತೂರು ನಗರ ವಲಯದ ಪದಾಧಿಕಾರಿಗಳ ಆಯ್ಕೆ; ಅಧ್ಯಕ್ಷ: ದಿನೇಶ್ ಸಂಪ್ಯ, ಕಾರ್ಯದರ್ಶಿ: ಆಶಾ ಕಲ್ಲಾರೆ: ಕೋಶಾಧಿಕಾರಿ ಆರ್.ಪಿ. ಜಯದೇವ್ ನಾಯಕ್

0

ಪುತ್ತೂರು: ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಶನ್ ಪುತ್ತೂರು ನಗರ ವಲಯದ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ. ಇತ್ತೀಚೆಗೆ ದರ್ಬೆ ಸಣ್ಣ ಕೈಗಾರಿಕಾ ಸಭಾಭವನದಲ್ಲಿ ಪುತ್ತೂರು ಕ್ಷೇತ್ರ ಸಮಿತಿಯ ಮುಂದಾಳತ್ವದಲ್ಲಿ ಪದಾಧಿಕಾರಿಗಳ ಆಯ್ಕೆಯು ನಡೆಯಿತು.

ನಗರ ವಲಯ ಅಧ್ಯಕ್ಷರಾಗಿ ದಿನೇಶ್ ಸಂಪ್ಯ, ಪ್ರಧಾನ ಕಾರ್ಯದರ್ಶಿಯಾಗಿ ಆಶಾ ಕಲ್ಲಾರೆ, ಕೋಶಾಧಿಕಾರಿಯಾಗಿ ಆರ್.ಪಿ ಜಯದೇವ್, ಉಪಾಧ್ಯಕ್ಷರಾಗಿ ಗುಲಾಬಿ, ಪವಿತ್ರ ಎಂ. ರೈ, ಕೃಷ್ಣನಗರ, ಜೊತೆ ಕಾರ್ಯದರ್ಶಿಯಾಗಿ ಚಂದ್ರಿಕಾ ಹರಿಣಿ ಆಯ್ಕೆಯಾದರು. ಸದಸ್ಯರಾಗಿ ರಘುನಾಥ ಬಿ. ಪುತ್ತೂರು, ಜಯಂತ್ ಉರ್ಲಾಂಡಿ, ಜಯರಾಮ ಬಿ.ಎನ್, ಯಶೋಧರ ಜೈನ್ ದರ್ಬೆ, ಉಮಾ ಯು ನಾಯ್ಕ್ ಪುತ್ತೂರು, ಭಾರತಿ ಹೆಚ್. ಎಳ್ಮುಡಿ, ಸುಜಾತ ಮಂದಾರ, ಚಂದ್ರಕಲಾ ಬನ್ನೂರು, ಮೀನಾಕ್ಷಿ, ಜಯಶ್ರೀ ಆಚಾರ್ಯ, ವಿಜಯಲಕ್ಷ್ಮೀ ಪುತ್ತೂರು, ಸವಿತಾ ಜೆ.ಕೆ ಪುತ್ತೂರು, ಚಂದ್ರಕಲಾ ಹಾರಾಡಿ, ರಮೇಶ್ ಕೆಮ್ಮಾಯಿ, ಜಯನಂದ ಹೆಗ್ಡೆಬೊಳುವಾರು, ಧರ್ಮಾವತಿ, ನಮೃತಾ ಎನ್ ಪುತ್ತೂರು, ಪ್ರಶಾಂತಿ, ವನಿತಾ, ಶ್ವೇತಾ, ಯಶೋಧ ಮುದಲಾಜೆ, ಪೂರ್ಣಿಮ ಇವರನ್ನು ಸಮಿತಿಯಿಂದ ಆಯ್ಕೆ ಮಾಡಲಾಯಿತು.

ಕ್ಷೇತ್ರ ಸಮಿತಿಯ ಪದಾಧಿಕಾರಿಗಳು ಮಾತನಾಡಿ ನೂತನ ಸದಸ್ಯತ್ವ ನೋಂದಾವಣೆ ಹಾಗೂ ನವೀಕರಣಕ್ಕೆ ಅವಕಾಶವಿದೆ. ನೂತನ ಸದಸ್ಯತ್ವ ನೊಂದಾವಣಿಗೆ ನಿಗದಿ ಪಡಿಸಿದ ಹಣ ಹಾಗೂ ಒಂದು ಭಾವಚಿತ್ರ ಮತ್ತು ನವೀಕರಣಕ್ಕೂ ನಿಗದಿ ಪಡಿಸಿದ ಹಣ ನೀಡಬೇಕು ಎಂದು ಹೇಳಿ, ಮುಂದಿನ ಎರಡು ವರ್ಷದ ಅವಧಿಗೆ ನೂತನ ಸಮಿತಿ ರಚನೆಯನ್ನು ಮಾಡಿ ಸದಸ್ಯರಿಗೆ ಮಾಹಿತಿ ನೀಡಿದರು. ನೂತನ ಸಮಿತಿಯವರಿಗೆ ಲೆಕ್ಕ ಪತ್ರ ಪುಸ್ತಕವನ್ನು ಹಸ್ತಾಂತರ ಮಾಡಿ ನಿಮ್ಮ ಅವಧಿಯಲ್ಲಿ ಅಸೋಸಿಯೇಶನ್ ಅಭಿವೃದ್ಧಿ ಹೊಂದಲಿ ಎಂದು ಹೇಳಿ ಕ್ಷೇತ್ರ ಸಮಿತಿಯಿಂದ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ನಗರ ವಲಯ ಅಧ್ಯಕ್ಷರಾದ ನಿಕಟಪೂರ್ವ ಅಧ್ಯಕ್ಷ ಯಶೋಧರ ಜೈನ್, ದರ್ಬೆ ದೇವ ಟ್ರೇಡರ್ಸ್ ಮಾಲಕ ಟಿ.ವಿ ರವೀಂದ್ರನ್, ರಾಜ್ಯ ಸಮಿತಿ ಲೆಕ್ಕ ಪರಿಶೋಧಕ ರಘುನಾಥ ಬಿ. ಪುತ್ತೂರು, ಟೈಲರ್ ಅಸೋಸಿಯೇಶನ್ ದ.ಕ ಜಿಲ್ಲಾ ಅಧ್ಯಕ್ಷ ಜಯಂತ ಉರ್ಲಾಂಡಿ, ಪುತ್ತೂರು ಕ್ಷೇತ್ರ ಸಮಿತಿ ಅಸೋಸಿಯೇಶನ್‌ನ ಅಧ್ಯಕ್ಷ ಜಯರಾಮ್ ಬಿ.ಎನ್., ಎಕ್ಸ್‌ರೆ ಟಕ್ನಿಷಿಯನ್ ಸಾರ್ವಜನಿಕ ಆಸ್ಪತ್ರೆಯ ಪಕೀರ ಗೌಡ (ಎ-ಜಿ.ಎಂ. ಗೌಡ ಪುತ್ತೂರು) ಫ್ಯಾಶನ್ ಡಿಸೈನ್ ಮಾಲಕಿ ನಮೃತಾ ಎನ್ ಪುತ್ತೂರು, ಟೈಲರ್ ಅಸೋಸಿಯೇಶನ್ ಪುತ್ತೂರು ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಉಮಾ ಯು ನಾಯ್ಕ್, ಪುತ್ತೂರು ಕ್ಷೇತ್ರ ಸಮಿತಿ ಟೈಲರ್ ಅಸೋಸಿಯೇಶನ್ ಕೋಶಾಧಿಕಾರಿ ಸುಜಾತ ಮಂದಾರ ಉಪಸ್ಥಿತರಿದ್ದರು. ಶಂಬು ಬಲ್ಯಾಯ ಶಾಂತಿಗೋಡು ಮುಂಡೋಡಿ ಕಾರ‍್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here