ಪುರುಷರಕಟ್ಟೆ ಸರಸ್ವತಿ ವಿದ್ಯಾಮಂದಿರಕ್ಕೆ ಪ್ರಥಮ ಬ್ಯಾಚ್‌ನಲ್ಲೇ 100% ಫಲಿತಾಂಶ

0

ಪುತ್ತೂರು: 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿಯ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಪುರುಷರಕಟ್ಟೆಯಲ್ಲಿರುವ ಶ್ರೀ ಸರಸ್ವತಿ ವಿದ್ಯಾಮಂದಿರವು ಪ್ರಥಮ ಬ್ಯಾಚ್‌ನಲ್ಲೇ ವಿಶಿಷ್ಠ ಸಾಧನೆ ಮಾಡಿದ್ದು ಶೇ.100 ಅಂಕ ಪಡೆದುಕೊಂಡಿದೆ.

ಪ್ರಥಮ ಬ್ಯಾಚ್‌ನಲ್ಲಿ 10 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿರುತ್ತಾರೆ. 5 ಮಂದಿ ವಿಶಿಷ್ಠ ಶ್ರೇಣಿ ಹಾಗೂ 5 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಪೈಕಿ 606 ಅಂಕ ಪಡೆದ ಅನುಶ್ರೀ ಪ್ರಥಮ ಹಾಗೂ 590 ಅಂಕ ಪಡೆದ ಪಾವಣಿ ಶಾಲೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ವೈಭವ್-571, ಭವಿಷ್ಯ -567, ಹಾಗೂ ವೀಕ್ಷಾ-529 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ಹಾಗೂ 5 ಮಂದಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here