ಎಸೆಸ್ಸೆಲ್ಸಿ ಪರೀಕ್ಷೆ: ಉಪ್ಪಿನಂಗಡಿ ಸೈಂಟ್ ಮೇರೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶೇ.100 ಫಲಿತಾಂಶ

0

ಪುತ್ತೂರು: ಈಗಾಗಲೇ ಎಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಉಪ್ಪಿನಂಗಡಿ ಸೈಂಟ್ ಮೇರೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ. ಒಟ್ಟು 46 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 9 ಮಂದಿ ಡಿಸ್ಟಿಂಕ್ಷನ್, 33 ಮಂದಿ ಪ್ರಥಮ ಶ್ರೇಣಿ ಹಾಗೂ 4 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಶ್ರೀಧರ್ ಪೂಜಾರಿ ಹಾಗೂ ಶ್ವೇತಾರವರ ಪುತ್ರಿ ಆತ್ಮಿರವರು 609(97.4%) ಅಂಕಗಳನ್ನು ಪಡೆದು ಟಾಪರ್ ಎನಿಸಿಕೊಂಡಿದ್ದಾರೆ. ಮಹಮದ್ ನಝೀಬುದ್ದೀನ್ ಹಾಗೂ ಶಮೀಲರವರ ಪುತ್ರಿ ದಿಯಾ ಮಹೆಕ್ ರವರು 605(96.8%) ರವರು ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಹಾಗೂ ಕುಂಞಣ್ಣ ಬಿ ಹಾಗೂ ಸುಮಿತ್ರ ಕೆ.ರವರ ಪುತ್ರಿ ಸ್ಮಂದನಾ ಗೌಡರವರು 601(96.16%) ಅಂಕಗಳನ್ನು ಪಡೆದು ತೃತೀಯ ಸ್ಥಾನ ಗಳಿಸಿಕೊಂಡಿದ್ದಾರೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here