‘ಅಶೋಕ್ ರೈಯವರಲ್ಲಿ 25 ಲಕ್ಷ ಕೇಳಿದ್ದಲ್ಲ ನಮಗೆ ಬರಬೇಕಾದ 3.5 ಕೋಟಿಯನ್ನು ಕೇಳಿದ್ದು’; ನಾವು ಎಲ್ಲೂ ತರೆ ಮರೆಸಿಕೊಂಡಿಲ್ಲ; ಯೂ ಟ್ಯೂಬ್ ಚಾನೆಲ್‌ನಲ್ಲಿ ತಮ್ಮಣ್ಣ ಶೆಟ್ಟಿ, ವಿಜೆ ಅಜಯ್ ಅಂಚನ್ ಸ್ಪಷ್ಟನೆ

0

ಪುತ್ತೂರು:ನಾವು ಅಶೋಕ್ ಕುಮಾರ್ ರೈಯವರಲ್ಲಿ 25 ಲಕ್ಷ ರೂ.ಕೇಳಿದ್ದಲ್ಲ ನಮಗೆ ಬರಬೇಕಾದ 3.5 ಕೋಟಿ ರೂ.ಗಳನ್ನು ಕೇಳಿದ್ದು ಎಂದು ತಮ್ಮಣ್ಣ ಶೆಟ್ಟಿ ಎಂಬವರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಸ್ಪಷ್ಟನೆ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಯೂಟ್ಯೂಬ್ ಚಾನೆಲ್ ಮೂಲಕ ವಿಜೆ ಅಜಯ್ ಅಂಚನ್ ಮತ್ತು ತಮ್ಮಣ್ಣ ಶೆಟ್ಟಿಯವರು ಸ್ಪಷ್ಟನೆ ನೀಡಿದ್ದಾರೆ. ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈಯವರು ತಮ್ಮ ವಿರುದ್ಧ ನೀಡಿರುವ ದೂರಿನ ವಿಚಾರ ಪ್ರಸ್ತಾಪಿಸಿದ್ದು, ನಾವು ಎಲ್ಲಿಯೂ ಮರೆಮಾಚಿಲ್ಲ. ತಲೆಮರೆಸಿಕೊಂಡಿಲ್ಲ. ದಿನನಿತ್ಯ ನಾವು ಮಂಗಳೂರುನಲ್ಲಿಯೇ ಓಡಾಡಿಕೊಂಡಿದ್ದೇವೆ. ನಾವು ಮರೆಮಾಚುವ ಸೀನೇ ಇಲ್ಲ.ನಾವು 25 ಲಕ್ಷ ರೂ.ಡಿಮಾಂಡ್ ಮಾಡಿಲ್ಲ. ಬೆದರಿಕೆ ಕರೆಯನ್ನೂ ಮಾಡಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ನಾವು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೇಕಾದರೆ ಪ್ರಮಾಣ ಮಾಡಲೂ ಸಿದ್ಧ ಎಂದು ಅವರು ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ. ನಾನು ಅವರಲ್ಲಿ ಕ್ಷಮೆ ಕೇಳಿಲ್ಲ. ನನಗೇ ಅವರು ಫೋನ್ ಮಾಡಿಸಿದ್ದಾರೆ ಎಂದೂ ತಮ್ಮಣ್ಣ ಶೆಟ್ಟಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here