ರೈಲ್ವೇ ನಿಲ್ದಾಣದ ಬಳಿ ನಿಲ್ಲಿಸಲಾಗಿದ್ದ ಬೈಕ್‌ನಿಂದ ಪೆಟ್ರೋಲ್ ಕಳವು -ಕಳ್ಳರನ್ನು ಬೆನ್ನಟ್ಟಿದ ಸಾರ್ವಜನಿಕರು !

0


ಪುತ್ತೂರು: ಪುತ್ತೂರು ರೈಲ್ವೇ ನಿಲ್ದಾಣದ ಬಳಿ ನಿಲ್ಲಿಸಲಾಗಿದ್ದ ಧ್ವಿಚಕ್ರ ವಾಹನಗಳಿಂದ ಪೆಟ್ರೋಲ್ ಕದಿಯುತ್ತಿದ್ದ ಚೋರರ ಬಗ್ಗೆ ಮಾಹಿತಿ ಪಡೆದ ಸಾರ್ವಜನಿಕರು ಅವರನ್ನು ಹಿಡಿಯಲು ಪ್ರಯತ್ನಿಸಿ ವಿಫಲರಾದ ಘಟನೆ ನಡೆದಿದೆ.ಕಳೆದ ಹಲವು ಸಮಯಗಳಿಂದ ಇಲ್ಲಿ ನಿಲ್ಲಿಸಲಾಗುತ್ತಿದ್ದ ಬೈಕ್‌ ಗಳಿಂದ ಈ ಖದೀಮರು ಪೆಟ್ರೋಲ್‌ ಕದಿಯುತ್ತಿದ್ದು ಕಳ್ಳರನ್ನು ರೆಡ್‌ ಹ್ಯಾಂಡ್‌ ಆಗಿ ಹಿಡಿಯಬೇಕೆಂದು ಹಲವು ಸಮಯದಿಂದ ಕಾದುಕುಳಿತಿದ್ದರು. ಆದರೆ ಇಂದು ಪೆಟ್ರೋಲ್‌ ಕದಿಯುವ ಸಮಯದಲ್ಲಿ ಕಳ್ಳರನ್ನು ಹಿಡಿಯುವ ಪ್ರಯತ್ನ ಸಾರ್ವಜನಿಕರು ನಡೆಸಿದರಾದರು ಮೂವರು ಚಾಣಾಕ್ಷ ಕಳ್ಳರು ಪರಾರಿಯಾಗಿದ್ದಾರೆ.

LEAVE A REPLY

Please enter your comment!
Please enter your name here