ಶ್ರದ್ಧಾಂಜಲಿ ಬ್ಯಾನರ್ ಪ್ರಕರಣ : ಮತ್ತೆ 7 ಮಂದಿ ಪೊಲೀಸ್ ವಶಕ್ಕೆ-ಡಿವೈಎಸ್ಪಿ ಕಚೇರಿಗೆ ತೆರಳಿ ವಿಚಾರಿಸಿದ ಅರುಣ್ ಕುಮಾರ್ ಪುತ್ತಿಲ !

0

ಹಿಂದುಗಳು ಯಾರೆ ಆಗಿರಲಿ, ಯಾವುದೇ ಪಕ್ಷದಲ್ಲಿರಲಿ ಅವರನ್ನು ವಿಚಾರಿಸುವುದು ಹಿಂದುತ್ವದ ಕರ್ತವ್ಯ – ಅರುಣ್ ಕುಮಾರ್ ಪುತ್ತಿಲ

ಪುತ್ತೂರು: ಪುತ್ತೂರು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿ ಇರುವ ಅರಣ್ಯ ಇಲಾಖೆಯ ಆವರಣಗೋಡೆಯ ಎದುರು “ಬಿಜೆಪಿ ಹೀನಾಯವಾಗಿ ಸೋಲಲು ಕಾರಣಕರ್ತರಾದ ನಿಮಗೆ ಭಾವಪೂರ್ಣ ಶ್ರದ್ದಾಂಜಲಿ” ನೊಂದ ಹಿಂದು ಕಾರ್ಯಕರ್ತರೆಂಬ ಚಪ್ಪಲಿ ಹಾರ ಹಾಕಲಾಗಿರುವ ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಏಳು ಮಂದಿ ಆರೋಪಿಗಳನ್ನು ಪೊಲೀಸರು ಮೇ 15ರ ತಡರಾತ್ರಿಯೇ ವಶಕ್ಕೆ ಪಡೆದುಕೊಂಡಿದ್ದಾರೆ.


ಬ್ಯಾನರ್ ಅಳವಡಿಸಿದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮೇ 15 ಸಂಜೆ ನರಿಮೊಗರು ನಿವಾಸಿಗಳಾದ ವಿಶ್ವನಾಥ್ ಮತ್ತು ಮಾಧವ ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದರು. ವಿಚಾರಣೆ ವೇಳೆ ಅವರೊಂದಿಗೆ ಇನ್ನೂ ಹಲವರಿದ್ದರು ಎಂಬ ಮಾಹಿತಿ ಮೇರೆಗೆ ಪತ್ತೆ ಕಾರ್ಯ ನಡೆಸಿದ ಪೊಲೀಸರು ತಡ ರಾತ್ರಿ 7 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡರು. ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿರುವುದಾಗಿ ತಿಳಿದು ಬಂದಿದೆ. ವಶಕ್ಕೆ ಪಡೆದುಕೊಂಡಿರುವ ಆರೋಪಿಗಳನ್ನು ಬೇಲೇಬಲ್ ಕೇಸ್ ಮಾಡಿ ಬಿಡಲಾಗಿದ್ದು, ಅವರ ವಿರುದ್ಧ ಶಾಂತಿಭಂಗ ಪ್ರಕರಣ ದಾಖಲಿಸಿ, ನೋಟೀಸ್ ಜಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿ ಒಟ್ಟು 11 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.


ಅರುಣ್ ಕುಮಾರ್ ಪುತ್ತಿಲ ಭೇಟಿ:
ಘಟನೆಗೆ ಸಂಬಂಧಿಸಿ ಆರೋಪಿಗಳು ಹಿಂದುಗಳೆಂಬ ಮಾಹಿತಿ ತಿಳಿದಂತೆ ತಡರಾತ್ರಿ ಡಿವೈಎಸ್ಪಿ ಕಚೇರಿಗೆ ಅರುಣ್ ಕುಮಾರ್ ಪುತ್ತಿಲ ಅವರು ಭೇಟಿ ಮಾಡಿ ವಿಚಾರಿಸಿದ್ದಾರೆ ಎಂದು ತಿಳಿದು ಬಂದಿದೆ. ಇದು ಪಕ್ಷದಲ್ಲಿ ಚರ್ಚೆಗೆ ಕಾರಣವಾಗುತ್ತಿದೆ.


ಹಿಂದುಗಳು ಯಾರೆ ಆಗಿರಲಿ, ಯಾವುದೇ ಪಕ್ಷದಲ್ಲಿರಲಿ ಅವರನ್ನು ವಿಚಾರಿಸುವುದು ಹಿಂದುತ್ವದ ಕರ್ತವ್ಯ :
ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿ ಹಿಂದುಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ವಿಚಾರ ತಿಳಿದು ಡಿವೈಎಸ್ಪಿ ಕಚೇರಿಗೆ ತೆರಳಿ, ವಶದಲ್ಲಿರುವವರು ಹಿಂದುಗಳೆಂದು ವಿಚಾರಿಸಿದ್ದೇನೆ. ಯಾಕೆಂದರೆ ಹಿಂದುಗಳು ರಾಷ್ಟ್ರೀಯ ಪಕ್ಷಕ್ಕೆ ದುಡಿದವರು. ಅವರನ್ನು ಹಿಂದುತ್ವದ ಆಧಾರದಲ್ಲಿರುವಾಗ ಹಿಂದುಗಳಿಗೆ ತೊಂದರೆ ಆದಾಗ ಠಾಣೆಗೆ ಭೇಟಿ ನೀಡಿ ವಿಚಾರಿಸುವುದು ಕರ್ತವ್ಯ ಎಂದು ವಿಚಾರಿಸಿದ್ದೇನೆ. ಹಿಂದುಗಳು ಯಾರೆ ಆಗಿರಲಿ., ಯಾವುದೇ ಪಕ್ಷದಲ್ಲಿರಲಿ ವಿಚಾರಿಸುವುದು ಹಿಂದುತ್ವದ ಕರ್ತವ್ಯ ಎಂದು ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here