ಪಾಣಾಜೆ ಸುಬೋಧ ಪ್ರೌಢಶಾಲೆಯಲ್ಲಿ 2005-06 ನೇ ಸಾಲಿನ ವಿದ್ಯಾರ್ಥಿಗಳ ಪುನರ್‌ಮಿಲನ

0

ಗ್ರಾಮೀಣ ಶಾಲೆಯಲ್ಲಿ ಮತ್ತೆ ಆಡಿ ನಲಿದು ಸಂಭ್ರಮಿಸಿ ಗತ ನೆನಪಿಸಿಕೊಂಡ ವಿದ್ಯಾರ್ಥಿಗಳು

ಪಾಣಾಜೆ: ಇಲ್ಲಿನ ಸುಬೋಧ ಪ್ರೌಢಶಾಲೆಯ 2005-06ನೇ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳ ಪುನರ್ ಮಿಲನ ಕಾರ್ಯಕ್ರಮ ಮೇ 25 ರಂದು ನಡೆಯಿತು. ನಿವೃತ್ತ ಮುಖ್ಯಗುರುಗಳಾದ ಶ್ರೀಕೃಷ್ಣ ಭಟ್, ಸುಬ್ರಹ್ಮಣ್ಯ ಶಾಸ್ತ್ರಿ, ನಾರಾಯಣ ಎಸ್ ಕೆ.‌ ಹಾಗೂ ಶಾಲಾ ಸಂಚಾಲಕ ಮಹಾಬಲೇಶ್ವರ ಭಟ್ ಗಿಳಿಯಾಲು, ಪಾಣಾಜೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಪೇಂದ್ರ ಬಲ್ಯಾಯ ದೇವಸ್ಯ ರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪಾಣಾಜೆ ವಿದ್ಯಾವರ್ಧಕ ಸಂಘದ ಸದಸ್ಯರಾದ ಕಡಂದೇಲು ಈಶ್ವರ ಭಟ್, ಹಾಲಿ ಮುಖ್ಯಗುರು ಶ್ರೀಪತಿ ಭಟ್ ಇಂದಾಜೆ, ಹಿಂದಿ ಭಾಷಾ ಶಿಕ್ಷಕಿ ನಿರ್ಮಲ, ಚಿತ್ರಕಲಾ ಶಿಕ್ಷಕಿ ಶಾರದಾ, ಆಂಗ್ಲ ಭಾಷಾ ಶಿಕ್ಷಕಿ ವಿನುತಾ, ದೈಹಿಕ ಶಿಕ್ಷಣ ಶಿಕ್ಷಕ ಸುಧೀರ್ ರೈ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಪುರಂದರ ಎಂ.ಜಿ., ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವೀಂದ್ರ ಭಂಡಾರಿ ಬೈಂಕ್ರೋಡು ಉಪಸ್ಥಿತರಿದ್ದರು.

ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಮಾತುಗಳನ್ನು ಆಡಿದರು. ಹಿರಿಯ ವಿದ್ಯಾರ್ಥಿ ದಿನೇಶ್ ಕುಮಾರ್ ಆರ್ಲಪದವು‌ ಪ್ರಸ್ತಾವನೆಗೈದರು. ಜ್ಯೋತಿ ಕ್ರಾಸ್ತಾ ಆರ್ಲಪದವು ಸ್ವಾಗತಿಸಿ, ಸಾತ್ವಿಕ್ ಖಂಡೇರಿ ವಂದಿಸಿದರು. ಶ್ವೇತಾ ಹಾಗೂ ಸುಪ್ರಿಯಾ ಗಣೇಶ್ ಪ್ರಾರ್ಥಿಸಿದರು. ಹಿರಿಯ ವಿದ್ಯಾರ್ಥಿಗಳು ಸ್ವ-ಪರಿಚಯ ಮಾಡಿಕೊಂಡರು. ಶಾಲೆಯಲ್ಲಿ ಸಂಸ್ಕೃತ ಪಂಡಿತರಾಗಿ ಕರ್ತವ್ಯ ನಿರ್ವಹಿಸಿದ್ದ ವಿ. ಜಿ. ಭಟ್ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ವಿವಿಧ ಆಟೋಟಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಒಟ್ಟಾರೆಯಾಗಿ ವಿದ್ಯಾರ್ಥಿಗಳು ತಮ್ಮ ಕಲಿಕಾ‌ ದಿನಗಳನ್ನು ಮರು ನೆನಪಿಸಿಕೊಂಡು ಶಾಲೆಯ ಪರಿಸರದಲ್ಲಿ ಕಳೆಯಲು ತಮ್ಮ ಒಂದು ದಿನವನ್ನು ಮೀಸಲಿಟ್ಟರು.

ಶಾಲೆಗೆ ರೂ. 25 ಸಾವಿರ ದೇಣಿಗೆ ಹಸ್ತಾಂತರ:
ಆ ಸಾಲಿನ ಹಿರಿಯ ವಿದ್ಯಾರ್ಥಿಗಳು ಒಟ್ಟು ಸೇರಿ ರೂ. 25000/-ವನ್ನು ಶಾಲೆಗೆ ದೇಣಿಗೆಯಾಗಿ ನೀಡಿ ಹಸ್ತಾಂತರಿಸಿದರು. ಹಿರಿಯ ವಿದ್ಯಾರ್ಥಿಗಳಾದ ಶ್ವೇತಾ, ಸುಪ್ರಿಯಾ ಗಣೇಶ್, ಗೀತಾ, ಸುಹಾಸಿನಿ, ವಾರಿಜ, ಪುಷ್ಪಾ, ಆಶಾ, ಪವಿತ್ರಾ, ಶಾರದಾ, ರಜಿತಾ, ಗೀತಾ ರುಬೀನ, ರಂಝಿನಾ ಬಾನು, ಧನಂಜಯ್ ಸಾತ್ವಿಕ್, ರಝಾಕ್, ಪ್ರವೀಣ್ ಎ.ಪಿ., ಪ್ರವೀಣ್ ಮಿತ್ತಡ್ಕ, ಅಶ್ರಫ್ ಎಂ. ಕೆ., ವಸಂತ್ ಟಿ., ಪ್ರದೀಪ್ ರಾಜ್ ಬೊಳ್ಳುಕಲ್ಲು, ಶಿವಕುಮಾರ್ ಪಿ. ಕೆ.‌, ಸಲೀಂ, ನಾರಾಯಣ ಬಾಳೆಮೂಲೆ ಯವರು ತಮ್ಮ ಗುರುಗಳಿಗೆ ಸವಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಹೊರ ಜಿಲ್ಲೆ, ಹೊರ ರಾಜ್ಯಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಸೇವೆಯಲ್ಲಿರುವ ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡದ್ದು ವಿಶೇಷವಾಗಿತ್ತು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು.

LEAVE A REPLY

Please enter your comment!
Please enter your name here