ಬೆಂಗಳೂರು- ನೃತ್ಯಗುರುಗಳಾದ ವಿದುಷಿಗಳಾದ ನಯನಾ ವಿ.ರೈ, ಸ್ವಸ್ತಿಕಾ ಶೆಟ್ಟಿಯವರಿಗೆ ಆರ್ಯಭಟ ಅಂತರ್ರಾಷ್ಟ್ರೀಯ ಪ್ರಶಸ್ತಿ ಪ್ರಧಾನ

0

ಪುತ್ತೂರು: ಪದಡ್ಕ ವಿಶ್ವಕಲಾನಿಕೇತನ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್ ಆಂಡ್ ಕಲ್ಚರ್ ಪುತ್ತೂರು ನೃತ್ಯ ಸಂಸ್ಥೆಯ ಸ್ಥಾಪಕ ದಿ.ಕುದ್ಕಾಡಿ ವಿಶ್ವನಾಥ ರೈಯವರ ಪತ್ನಿ ವಿದುಷಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಕರ್ನಾಟಕ ಕಲಾಶ್ರೀ ಕುದ್ಕಾಡಿ ನಯನಾ ವಿ.ರೈ ಹಾಗೂ ಅವರ ಪುತ್ರಿ ವಿದುಷಿ ಸ್ವಸ್ತಿಕಾ ಆರ್.ಶೆಟ್ಟಿ ಇವರಿರ್ವರಿಗೆ ಭರತನಾಟ್ಯ ರಂಗದಲ್ಲಿ ಮಾಡಿದ ಸಾಧನೆ ಹಾಗೂ ಸೇವೆಗಾಗಿ ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯಿಂದ 2023ನೇ ಸಾಲಿನ ಪ್ರತಿಷ್ಠಿತ 48ನೇ ವಾರ್ಷಿಕ ಆರ್ಯಭಟ ಅಂತರ್ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೇ 25.ರಂದು ಸಂಜೆ ನಡೆದ ಆರ್ಯಭಟ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ವಿದುಷಿ ನಯನಾ ವಿ.ರೈ ಹಾಗೂ ವಿದುಷಿ ಸ್ವಸ್ತಿಕಾ ರೈಯವರಿಗೆ ಆರ್ಯಭಟ ಅಂತರ್ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಪಿ.ಎಸ್ ದಿನೇಶ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ, ಚಲನಚಿತ್ರ ನಟ ಹಾಗೂ ನಿರ್ಮಾಪಕ ಟಿ.ಎಸ್ ನಾಗಾಭರಣ, ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ಹೆಚ್.ಎಲ್.ಎನ್ ರಾವ್‌ರವರು ಅತಿಥಿಗಳಾಗಿ ಆಗಮಿಸಿ ಪ್ರಶಸ್ತಿಯನ್ನು ಪ್ರಧಾನ ಮಾಡಿದರು. ಪ್ರಶಸ್ತಿ ಪ್ರಧಾನ ಸಮಾರಂಭದ ಮೊದಲು ಸಾಂಸ್ಕೃತಿಕ ಹಬ್ಬ ನಡೆಯಿತು.

LEAVE A REPLY

Please enter your comment!
Please enter your name here