ಕಡಬ: ಕಂಬದಲ್ಲಿ ದುರಸ್ತಿ ವೇಳೆ ವಿದ್ಯುತ್‌ ಪ್ರವಹಿಸಿ ಪವರ್‌ಮ್ಯಾನ್‌ ಮೃತ್ಯು

0

ಕಡಬ:ವಿದ್ಯುತ್ ಕಂಬವೇರಿ ದುರಸ್ತಿ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಪವರ್ ಮ್ಯಾನ್ ಒಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟ ಘಟನೆ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ತಲೆಕ್ಕಿ ಎಂಬಲ್ಲಿ ನಡೆದಿದೆ.

ಮೃತರು ಪವರ್ ಮ್ಯಾನ್ ನ ಬಾಗಲಕೋಟೆ ಜಿಲ್ಲೆಯ ದ್ಯಾಮಣ್ಣ ದೊಡ್ಮನಿ ಎಂದು ಗುರುತಿಸಲಾಗಿದೆ.

ತಲೆಕ್ಕಿ ಬಳಿ ವಿದ್ಯುತ್ ಕಂಬ ಹತ್ತಿ ದುರಸ್ತಿ ಮಾಡುತ್ತಿದ್ದ ವೇಳೆ ಹಠಾತ್ ವಿದ್ಯುತ್ ಪ್ರವಹಿಸಿ ಈ ಅವಘಡ ಸಂಭವಿಸಿದೆ . ಸ್ಥಳೀಯರು ಮರದ ಕೋಲಿನ ಸಹಾಯದಿಂದ ಮೇಲಿನಿಂದ ಅವರನ್ನು ಕೆಳಗಿಳಿಸಿದ್ದು ಬಳಿಕ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಅಸುನಿಗಿದರು.

LEAVE A REPLY

Please enter your comment!
Please enter your name here