ಆಲಂಕಾರು: ಆಲಂಕಾರು ಗ್ರಾಮಪಂಚಾಯತ್ ಅಭಿವೃದ್ದಿ ಅಧಿಕಾರಿ ಎ.ಜಗನ್ನಾಥ ಶೆಟ್ಟಿಯವರ ಬೀಳ್ಕೋಡುಗೆ ಕಾರ್ಯಕ್ರಮ ಆಲಂಕಾರು ಗ್ರಾ.ಪಂ ಸಭಾಭವನದಲ್ಲಿ ನಡೆಯಿತು .ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪುತ್ತೂರು ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯವರು ಮಾತನಾಡಿ ಜಗನ್ನಾಥ ಶೆಟ್ಟಿಯವರು ಸೇವಾ ವಧಿಯಲ್ಲಿ ಉತ್ತಮ ಕೆಲಸ ಕಾರ್ಯ ಮಾಡಿ ಗ್ರಾಮಸ್ಥರ,ಅಧಿಕಾರಿಗಳ,ಜನಪ್ರತಿನಿಧಿಗಳ, ಪ್ರೀತಿ,ವಿಶ್ವಾಸವನ್ನು ಗಳಿಸಿದವರು, ಗ್ರಾ.ಪಂ ನಲ್ಲಿ ಸಿಬ್ಬಂದ್ದಿಗಳು ಗ್ರಾಮಸ್ಥರ ಮನ ಒಲಿಸಿ ಕೆಲಸ ಕಾರ್ಯವನ್ನು ನಿರ್ವಹಿಸಬೇಕು. ಸರಕಾರದ ಯೋಜನೆಗಳನ್ನು ಪಂಚಾಯತ್ ಸಮರ್ಥ ವಾಗಿ ಅನುಷ್ಠಾನ ಮಾಡಬಹುದು. ಅದಕ್ಕೆ ಅಧಿಕಾರಿ ವರ್ಗಗಳ ಇಚ್ಚಾಶಕ್ತಿ ಬೇಕು ಎಂದು ತಿಳಿಸಿ ,ಕೆಲವು ಪಂಚಾಯತ್ ನಲ್ಲಿ ಸಮಸ್ಯೆಗಳು ಬಂದಾಗ ತಾ.ಪಂ ಗಳ ಗಮನಕ್ಕೆ ತಂದು ಸಮಸ್ಯೆ ಪರಿಹರಿಸುವಂತೆ ತಿಳಿಸುತ್ತಾರೆ. ಆದರೆ
ಆಲಂಕಾರು ಗ್ರಾಮ ಪಂಚಾಯತ್ ನಿಂದ ಯಾವುದೇ ದೂರುಗಳು ತಾ.ಪಂ ಗೆ ಬಂದಿಲ್ಲ. ಇದಕ್ಕೆ ಸಹಕರಿಸಿದ ಅಡಳಿತ ಮಂಡಳಿಗೆ, ಅಭಿವೃದ್ದಿ ಅಧಿಕಾರಿಯವರಿಗೆ, ಸಿಬ್ಬಂದಿ ವರ್ಗದವರಿಗೆ, ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸಿದರು.
ಜಗನ್ನಾಥ ಶೆಟ್ಟಿಯವರು ಸೇವಾವಧಿಯಲ್ಲಿ ಉತ್ತಮ ಕೆಲಸ ಕಾರ್ಯವನ್ನು ನಿರ್ವಹಿಸಿ ಆಲಂಕಾರು ಗ್ರಾಮ ಪಂಚಾಯತ್ ನ ಕೀರ್ತಿಯನ್ನುಎತ್ತರಕ್ಕೆ ಪಸರಿಸಿದವರು. ಸಾಧನೆ ಹಾಗೂ ಕಠಿಣ ಪರಿಶ್ರಮದಿಂದ ಮಾತ್ರ ನಾವು ಸನ್ಮಾನ ಪಡೆಯಲು ಸಾಧ್ಯವಾಗುತ್ತದೆ. ಜಗನ್ನಾಥ ಶೆಟ್ಟಿಯವರ ಉತ್ತಮ ಕೆಲಸ ಕಾರ್ಯವನ್ನು ಮಾಡಿದ್ದಾರೆ ಎಂದು ತಿಳಿಸಿ ಇವರ ಕೆಲಸ ಕಾರ್ಯಗಳು ಇತರರ ಸಿಬ್ಬಂದಿಗಳಿಗೂ ಮಾದರಿಯಾಗಲಿ ಎಂದು ತಿಳಿಸಿ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು. ಕಡಬ ತಾ.ಪಂ ಸಹಾಯಕ ನಿರ್ದೇಶಕರಾದ ಚೆನ್ನಪ್ಪ ಗೌಡ ಮಾತನಾಡಿ ಒಬ್ಬ ಉತ್ತಮ ಕೆಲಸಗಾರನ ಕೆಲಸವನ್ನು ಗುರುತಿಸಿ ಗೌರವಿಸಿವುದು ಅದು ಮಾನವ ಧರ್ಮ ಜಗನ್ನಾಥ ಶೆಟ್ಟಿಯವರು ಉತ್ತಮ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದವರು ತಾ.ಪಂ ನಿಂದ ಯಾವುದೇ ಕೆಲಸವನ್ನು ಕೊಟ್ಟಾಗ ಅತ್ಯುತ್ತಮ ವಾಗಿ ಕಾರ್ಯನಿರ್ವಹಿಸಿದವರಲ್ಲಿ ಮೊದಲಿಗರಾಗಿದ್ದರು. ಹೊಗಳಿಕೆ,ತೆಗಳಿಕೆ ಕಿವಿಕೊಡದೇ ಉತ್ತಮ ಕಾರ್ಯನಿರ್ವಹಿಸಿದವರು ಇವರ ನಿವೃತ್ತ ಜೀವನವು ಸುಖಮಯವಾಗಿರಲೆಂದು ಹಾರೈಸಿದರು.ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ದಾಮೋದರ ಗೌಡ ಕಕ್ವೆ, ತಾ.ಪಂ ಮಾಜಿ ಸದಸ್ಯರಾದ ದಯಾನಂದ ಗೌಡ ಆಲಡ್ಕ,ದ.ಕ ಜಿ.ಪ ಹಿರಿಯ ಪ್ರಾಥಮಿಕ ಆಲಂಕಾರು ಶಾಲೆ ಆಲಂಕಾರಿನ ಮುಖ್ಯೋಪಾಧ್ಯಾಯರಾದ ನಿಂಗರಾಜು, ದುರ್ಗಾಂಭಾ ಪ್ರೌಡ ಶಾಲಾ ನಿವೃತ್ತ ಮುಖ್ಯಗುರುಗಳಾದ ಸತ್ಯನಾರಾಯಣ ಭಟ್, ಗ್ರಾ.ಪಂ ಮಾಜಿ ಅಧ್ಯಕ್ಷ ಕೇಶವ ಗೌಡ ಆಲಡ್ಕ,ಸುಬ್ರಹ್ಮಣ್ಯ ಕಾಲೇಜಿನ ಉಪನ್ಯಾಸಕಿ ಅರತಿ, ಶಿವಣ್ಣ ಗೌಡ ಕಕ್ವೆ, ಗೋಪಾಲಕೃಷ್ಣ ಗೌಡ ಕಕ್ವೆ, ಅಬೂಬಕ್ಕರ್ ನೆಕ್ಕರೆ ಪಂಚಾಯತ್ ಸಿಬ್ಬಂದಿಗಳಾದ ಹೇಮಾ, ಭವ್ಯರವರು ಜಗನ್ನಾಥ ಶೆಟ್ಟಿಯವರ ಬಗ್ಗೆ ಗುಣಗಾನ ಮಾಡಿ ನಿವೃತ್ತ ಜೀವನ ಸುಖಮಯವಾಗಿರಲೆಂದು ಹಾರೈಸಿದರು.ನಂತರ ನಿವೃತ್ತ ಜಗನ್ನಾಥ ಶೆಟ್ಟಿ ಹಾಗೂ ಅವರ ಪತ್ನಿ ಉದಯ ಚಂದ್ರಿಕಾ ರವರಿಗೆ ಶಾಲು, ಪೇಟಾ, ಚಿನ್ನದ ಉಂಗುರ ತೊಡಿಸಿ ಆಲಂಕಾರು ಗ್ರಾಮ ಪಂಚಾಯತ್ ವತಿಯಿಂದ ಗೌರವಿಸಲಾಯಿತು. ಈ ಸಂಧರ್ಭ ಜಗನ್ನಾಥ ಶೆಟ್ಟಿಯವರ ಪುತ್ರ ಡಾ.ಅಭಿಷೇಕ್ ಶೆಟ್ಟಿ, ಅಪೂರ್ವ ಎ.ಜೆ ಶೆಟ್ಟಿಯವರು ಉಪಸ್ಥಿತರಿದ್ದರು. ನಂತರ ಜಗನ್ನಾಥ ಶೆಟ್ಟಿಯವರು ತಮ್ಮ ಸೇವಾವಧಿಯಲ್ಲಿ ಸಹಕರಿಸಿದ ಕಾರ್ಯದರ್ಶಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಹಾಗೂ ಪ್ರಸಕ್ತ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ,ಉಪಾಧ್ಯಕ್ಷರಿಗೆ,ಸದಸ್ಯರಿಗೆ ಶಾಲು ಮತ್ತು ಸ್ಮರಣಿಕೆ,ಫಲಪುಷ್ಪ ನೀಡಿ ಗೌರವಿಸಿದರು. ನಂತರ ಜಗನ್ನಾಥ ಶೆಟ್ಟಿಯವರು ಮಾತನಾಡಿ ಆಲಂಕಾರು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಯಾಗಿ ನಾನು ಕರ್ತವ್ಯದಿಂದ ಮೇ.31 ರಂದು ನಿವೃತ್ತಿಗೊಂಡಿದ್ದೇನೆ. ನನ್ನ ಸೇವಾವಧಿಯಲ್ಲಿ ಅತ್ಯಂತ ಪ್ರಾಮಾಣಿಕ ವಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಸೇವಾವಧಿಯಲ್ಲಿ ಆಲಂಕಾರು ಗ್ರಾಮ ಪಂಚಾಯತ್ ಗೆ ಅನೇಕ ಪ್ರಶಸ್ತಿಗಳು ಲಭಿಸಿದೆ . ಸಹಕರಿಸಿದ ಜನಪ್ರತಿನಿಧಿಗಳಿಗೆ ,ಇಲಾಖಾಧಿಕಾರಿಗಳಿಗೆ ,ಪಂಚಾಯತ್ ಸಿಬ್ಬಂದಿಗಳಿಗೆ,ಮಾಧ್ಯಮದವರಿಗೆ ,ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸಿದರು. ಗ್ರಾಮಸ್ಥರು ಗ್ರಾಮದ ಸ್ವಚ್ಚತೆಗೆ ಅಧ್ಯತೆ ನೀಡಿ ಸಹಕರಿಸಬೇಕು ಹಾಗು ಇನ್ನು ಮುಂದೆ ಬರುವ ಪಂಚಾಯತ್ ಅಭಿವೃದ್ದಿ ಅಧಿಕಾರಿಗೂ ಸಹಕಾರ ನೀಡಿ ಎಂದು ತಿಳಿಸಿ.ಸೇವಾವಧಿಯಲ್ಲಿ ಗ್ರಾಮ ಪಂಚಾಯತ್ ಗೆ ಸಿಕ್ಕಿದ ಪ್ರಶಸ್ತಗಳನ್ನು ತಿಳಿಸಿ ಬೀಳ್ಕೋಡುಗೆ ಕಾರ್ಯಕ್ರಮಕ್ಕೆಅಗಮಿಸಿ ಶುಭಾಹಾರೈಸಿದ ಎಲ್ಲಾ ಸಂಘ ಸಂಸ್ಥೆಯ ಪದಾಧಿಕಾರಿಗಳಿಗೆ ಹಾಗೂ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು.
ಸಭಾದ್ಯಕ್ಷತೆ ವಹಿಸಿದ ಆಲಂಕಾರು ಗ್ರಾ.ಪಂ ಅಧ್ಯಕ್ಷರಾದ ಸದಾನಂದ ಆಚಾರ್ಯರವರು ಮಾತನಾಡಿ ಆಲಂಕಾರು ಗ್ರಾಮ ಪಂಚಾಯತ್ ಅಡಳಿತ ಮಂಡಳಿಯೊಂದಿಗೆ ಪಂಚಾಯತ್ ಅಭಿವೃದ್ದಿ ಅಧಿಕಾರಿ ಜಗನ್ನಾಥ ಶೆಟ್ಟಿಯವರು ಬಹಳ ಒಮ್ಮತದಿಂದ ಕೆಲಸ ಕಾರ್ಯಗಳನ್ನು ಮಾಡಿ ಗ್ರಾಮಸ್ಥರ ಮನವೊಳಿಸಿದವರು. ತಮ್ಮ ಅಧಿಕಾರ ಅವಧಿಯಲ್ಲಿ ಆಲಂಕಾರು ಗ್ರಾಮ ಪಂಚಾಯತ್ ಅಭಿವೃದ್ದಿಗೊಂಡು ಅಮೃತ ಗ್ರಾಮ ಪಂಚಾಯತ್ ಮತ್ತು ಗಾಂಧಿ ಪುರಸ್ಕಾರಕ್ಕೆ ಭಾಜನವಾಗಿದೆ. ಇದಕ್ಕೆಲ್ಲಾ ಪಂಚಾಯತ್ ಅಭಿವೃದ್ದಿ ಅಧಿಕಾರಿ ಜಗನ್ನಾಥ ಶೆಟ್ಟಿಯವರ ಪರಿಶ್ರಮ ಇದೆ ಎಂದು ತಿಳಿಸಿ ನಿವೃತ್ತ ಜೀವನಕ್ಕೆ ಶುಭಾಹಾರೈಸಿದರು. ನಂತರ ನಿವೃತ್ತ ರಾಮಕುಂಜ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಮಸ್ಕರೇನಸ್ಹ ಜೆರಾಲ್ಡ್, ಮರ್ದಾಳ ಗ್ರಾ.ಪಂ ನಿವೃತ್ತ ಅಭಿವೃದ್ದಿ ಅಧಿಕಾರಿ ಶೇಖರ್ ರವರನ್ನು ಆಲಂಕಾರು ಗ್ರಾ.ಪಂ ವತಿಯಿಂದ ಗೌರವಿಸಲಾಯಿತು. ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾದಿಕಾರಿಗಳು,ಶಾಲಾ ಮುಖ್ಯೋಪಾದ್ಯಯರುಗಳು, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು , ಜಗನ್ನಾಥ ಶೆಟ್ಟಿಯವರ ಹಿತೈಷಿ ವರ್ಗದವರು ಜಗನ್ನಾಥ ಶೆಟ್ಟಿಯವರಿಗೆ ಹೂ ಗುಚ್ವ ನೀಡಿ ನಿವೃತ್ತ ಜೀವನಕ್ಕೆ ಶುಭಾಹಾರೈಸಿದರು. ಗ್ರಾ.ಪಂ ಕಾರ್ಯದರ್ಶಿ ವಸಂತ ಶೆಟ್ಟಿ ಪ್ರಾಸ್ತವಿಕ ಮಾತನಾಡಿ ಸ್ವಾಗತಿಸಿದರು. ಗ್ರಂಥಾಪಾಲಕಿ ಕಮಲ, ಗ್ರಾ.ಪಂ ಸದಸ್ಯರಾದ ವಾರಿಜಾ ಪ್ರಾರ್ಥಿಸಿ ಗ್ರಾ.ಪಂ ಸದಸ್ಯರಾದ ಚಂದ್ರಶೇಖರ ,ಶಾರದ, ಸುಶೀಲಾ ಅತಿಥಿಗಳನ್ನು ಸ್ವಾಗತಿಸಿ ಗ್ರಾ.ಪಂ ಸಿಬ್ಬಂದಿ ಹೇಮಾವತಿ ಧನ್ಯವಾದ ಸಮರ್ಪಿಸಿದರು. ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ರೂಪಾಶ್ರೀ ಪಟ್ಟೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯರಾದ ಶ್ವೇತಾಕುಮಾರ್, ರವಿಪೂಜಾರಿ, ಸುನಂದ ಬಾರ್ಕುಳಿ ಸೇರಿದಂತೆ ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.