ನಿಡ್ಪಳ್ಳಿ: ಮುಂಡೂರು-1 ಶಾಲೆಯ ಪ್ರಾರಂಭೋತ್ಸವ

0

ಪುತ್ತೂರು: ಮೇ.31 ರಂದು ನಮ್ಮ ಮುಂಡೂರು-1 ಶಾಲೆಯಲ್ಲಿ ಪ್ರಾರಂಭೋತ್ಸವ ಕಾರ್ಯಕ್ರಮವನ್ನು  ಶಾಲಾ ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ  ಮತ್ತು ಪೋಷಕರ  ಜೊತೆ ಸೇರಿ ಸಂಭ್ರಮದಿಂದ ಆಚರಿಸಲಾಯಿತು.ಈ ಪ್ರಯುಕ್ತ  ಪೂರ್ವಾಹ್ನ ಗಂಟೆ 8.30ಕ್ಕೆ ಸರಿಯಾಗಿ ಗಣಪತಿ ಹೋಮ ನೆರವೇರಿತು. ಶಾಲಾ  ಮುಖ್ಯ ದ್ವಾರದಿಂದ  ಒಂದನೇ ತರಗತಿ ಮಕ್ಕಳಿಗೆ ಅಕ್ಷರ ಮಾಲೆ ಹಾಕಿ ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಯಿತು. ಸಭಾ ಕಾರ್ಯಕ್ರಮದಲ್ಲಿ ಇಲಾಖೆಯಿಂದ ನೀಡಿರುವ ಉಚಿತ ಪಠ್ಯಪುಸ್ತಕ  ಮತ್ತು ಉಚಿತ ಸಮವಸ್ತ್ರವನ್ನು SDMC ಅಧ್ಯಕ್ಷರು ವಿತರಿಸಿದರು. ಸಭೆಯ ಅಧ್ಯಕ್ಷತೆಯನ್ನು  SDMC ಅಧ್ಯಕ್ಷರ ಭಾಸ್ಕರ ಕರ್ಕೇರ ವಹಿಸಿದ್ದರು. ಪ್ರಾಸ್ತಾವಿಕ ಮತ್ತು ಸ್ವಾಗತವನ್ನು ಶಾಲಾ ಮುಖ್ಯ ಗುರುಗಳಾದ  ಶ್ರೀಮತಿ ಆಶಾ .ಎಸ್. ನಿರ್ವಹಿಸಿದರು. ಮಕ್ಕಳನ್ನು ಸ್ವಾಗತಿಸುವ ಕಾರ್ಯಕ್ರಮದ  ಜವಾಬ್ದಾರಿಯನ್ನು ಶ್ರೀಮತಿ ಸಾವಿತ್ರಿ .ಟಿ. ಇಂದೂರಕರ ವಹಿಸಿದ್ದರು. ವಂದನಾರ್ಪಣೆಯನ್ನು  ಶ್ರೀಮತಿ ಸೌಮ್ಯ ಕುಮಾರಿ.ಎಂ.ಬಿ. ನೆರವೇರಿಸಿದರು. ಕು. ರಶ್ಮಿತ ಸಹಕರಿಸಿದರು .

LEAVE A REPLY

Please enter your comment!
Please enter your name here