ಪುತ್ತೂರು: ಪುಟಾಣಿ ಮಕ್ಕಳಿಂದ, ಯುವಕ -ಯುವತಿಯರ, ಮಹಿಳೆಯರ ಹಾಗೂ ಪುರುಷರ ಮನ ಮೆಚ್ಚುವಂಥಹ ಹಲವೂ ಬಗೆಯ, ವಿನೂತನ ಶೈಲಿಯ ಎಲ್ಲಾ ಮಾದರಿಯ ಬ್ರಾಡೆಂಡ್ ಬಟ್ಟೆಗಳೂ, ಹಲವಾರು ಮಾದರಿಯ ಬ್ಯಾಗ್‌ಗಳು, ನವ-ನವೀನ ರೀತಿಯ ಪಾದರಕ್ಷೆಗಳು ಎಲ್ಲವೂ ಅತೀ ಕಡಿಮೆ ಬೆಲೆಯಲ್ಲಿ ಪ್ರಿಯ ಗ್ರಾಹಕರಿಗೆ ನೀಡಲು ಹೆಸರಾಂತ ಸಂಸ್ಥೆ ‘ನ್ಯೂ ಚೆನ್ನೈ ಶಾಪಿಂಗ್’ ಇದೀಗ ಎರಡನೇಯ ಬಾರಿಗೆ ಮುಂದಾಗಿದ್ದು, ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ಮುಂಭಾಗದ ಸಭಾಭವನದಲ್ಲಿ ಜೂ.5ರಿಂದ ಶಾಪಿಂಗ್ ಮಳಿಗೆ ಆರಂಭಿಸಲು ಉದ್ದೇಶಿಸಿದೆ.
ಕಳೆದ ವರುಷವೂ ಕೂಡ ಶಾಪಿಂಗ್ ಹಬ್ಬಕ್ಕೆ ಶಾಪಿಂಗ್ ಪ್ರಿಯರಿಂದ ಅತ್ಯುತ್ತಮ ರೀತಿಯ, ನಿರೀಕ್ಷೆಗೂ ಮೀರಿದ ಬೆಂಬಲ ಸಿಕ್ಕಿತ್ತು. ಇದೀಗ ಆರಂಭವಾಗುತ್ತಿರುವ ಶಾಪಿಂಗ್ ಹಬ್ಬವು ಸುಮಾರು ಒಂದು ತಿಂಗಳ ಕಾಲ ವ್ಯವಹರಿಸಲಿದೆಯೆಂದು ಆಯೋಜಕರು ತಿಳಿಸಿದ್ದಾರೆ. ಸೀರೆಗಳು, ತೋಟಿ, ಫ್ರಾಕ್, ವೆಸ್ಟರ್ನ್ ಡ್ರೆಸ್, ಚೂಡಿದಾರ್, ಮಿಡಿ, ಟಾಪ್‌ಗಳು, ಲೆಗ್ಗಿನ್ಸ್, ಪ್ಲಾಜೋ ಪ್ಯಾಂಟ್‌ಗಳು, ಶರ್ಟ್, ಜೀನ್ಸ್ ಪ್ಯಾಂಟ್, ನೈಟಿಗಳು, ಜೆರ್ಕಿನ್ಸ್, ಬಾಬಸೂಟ್, ಚಪ್ಪಲಿಗಳು, ಬ್ಯಾಗ್‌ಗಳು, ಗುಣಮಟ್ಟವುಳ್ಳ ಅಸಂಖ್ಯಾತ ಹಾಗೂ ಅತ್ಯುತ್ತಮ ವಿನ್ಯಾಸದ ಆಟಿಕೆಗಳೂ ಒಂದೇ ಸೂರಿನಡಿಯಲ್ಲಿ ಸಿಗಲಿದ್ದು, ಕೇವಲ 199/- ಬೆಲೆಯಲ್ಲೇ ಮೇಲಿನ ಎಲ್ಲಾ ಉತ್ಪನ್ನಗಳೂ ಲಭ್ಯ. ಪುತ್ತೂರಿನ ಜನತೆ ಕುಟುಂಬ ಸದಸ್ಯರೊಂದಿಗೆ ಜತೆಗೂಡಿ ಅತ್ಯುತ್ತಮ ಶಾಪಿಂಗ್ ಅನುಭವವನ್ನೂ ಸಂಭ್ರಮಿಸೋ ಅವಕಾಶ ಮತ್ತೊಮ್ಮೆ ಬಂದಿದ್ದು , ಲಾಭವನ್ನೂ ಪಡೆದುಕೊಳ್ಳಬಹುದು.